Navratri Pooja Vidhana: ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ವರ್ಷ ಶರನ್ನವರಾತ್ರಿ ಅಶ್ವಯುಗ ಮಾಸದ ಶುಕ್ಲ ಪಕ್ಷದ ಮೊದಲ ದಿನ ಪ್ರಾರಂಭವಾಗುತ್ತದೆ. ಈ ವರ್ಷದ ನವರಾತ್ರಿ ಅಕ್ಟೋಬರ್ 3ರಿಂದ ಆರಂಭ. ನವರಾತ್ರಿಯಲ್ಲಿ ದೇವಿಯ ಪೂಜೆ ಮಾಡುವುದು ಹೇಗೆ ಎಂಬುದನ್ನು ಖ್ಯಾತ ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್ ತಿಳಿಸಿಕೊಟ್ಟಿದ್ದಾರೆ.
ಕಲಶ: ಶರನ್ನವರಾತ್ರಿಯ ಅಂಗವಾಗಿ ವಿಶೇಷವಾಗಿ ಕಲಶ ಪೂಜೆ ಮಾಡುವವರು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾರೆ. ಅಂದರೆ, ದುರ್ಗಾದೇವಿಯನ್ನು ಕಲಶದಿಂದ ಪೂಜಿಸುವವರು ಪ್ರತಿದಿನವೂ ನೈವೇದ್ಯ ಮಾಡಬೇಕಾಗುತ್ತದೆ. ಅನ್ನ, ಬೇಳೆ ಮತ್ತು ಯಾವುದೇ ರೀತಿಯ ಎಣ್ಣೆಯಲ್ಲಿ ಕರಿದ ವಿವಿಧ ಖಾದ್ಯಗಳನ್ನು ಬೇಯಿಸಿ, ಬಟ್ಟೆ ಕಟ್ಟಿ ದೇವಿಗೆ ನೈವೇದ್ಯ ಮಾಡಬೇಕು. ಬಳಿಕ ನೀವು ಆಹಾರ ಸ್ವೀಕರಿಸಬೇಕು.
ವಿಗ್ರಹ: ದುರ್ಗಾ ಮಾತೆಯ ವಿಗ್ರಹದೊಂದಿಗೆ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಮತ್ತು ದೇವಿಗೆ ನೈವೇದ್ಯ ಅರ್ಪಿಸುವಾಗ ನಿಯಮಗಳನ್ನು ಪಾಲಿಸಬೇಕು.
ಶ್ರೀಚಕ್ರ: ಕೆಲವರು ಶ್ರೀ ಚಕ್ರವನ್ನು ಧರಿಸಿ ದೇವಿಯ ಪೂಜೆ ಮಾಡುತ್ತಾರೆ. ಅಂತಹವರು ಕೆಲವು ನಿಯಮಗಳನ್ನು ಪಾಲಿಸಬೇಕು. ಆಗ ಮಾತ್ರ ನೀವು ಉತ್ತಮ ಫಲಗಳನ್ನು ಪಡೆಯುತ್ತೀರಿ. ಶ್ರೀ ಚಕ್ರ ಇರಿಸಿ ಪೂಜೆ ಸಲ್ಲಿಸುವವರು, ಗುರುವಿನಿಂದ 'ಬಾಲ ಮಂತ್ರ' ಪಡೆದಿರಬೇಕು. ಇದು ಬಾಲಾ ತ್ರಿಪುರಸುಂದರಿ ದೇವಿಗೆ ಸಂಬಂಧಿಸಿದ ಮೂಲಮಂತ್ರ. ನವರಾತ್ರಿಯಲ್ಲಿ ಆ ಮಂತ್ರವನ್ನು ಪಠಿಸುವುದು ಮತ್ತು ಶ್ರೀ ಚಕ್ರ ಪೂಜೆ ಮಾಡುವುದರಿಂದ ಅದ್ಭುತ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.
ಆದರೆ, ಆ ಮಂತ್ರವಿಲ್ಲದವರು ಶ್ರೀಚಕ್ರವನ್ನು ಪೂಜಿಸಬಹುದೇ? ಪೂಜಿಸಬಹುದು ಆದರೆ, ಮಾಮೂಲಿ ಪೂಜೆ ಮಾಡಬಹುದು. ಸಾಮಾನ್ಯವಾಗಿ ಮನೆಯಲ್ಲಿ ಶ್ರೀಚಕ್ರದ ಫೋಟೋ ಇಟ್ಟುಕೊಂಡು ಅದಕ್ಕೆ ಶ್ರೀಗಂಧ, ಕುಂಕುಮ ಹಚ್ಚಿ ನಂತರ ಶ್ರೀಚಕ್ರವನ್ನು ಕುಂಕುಮದಿಂದ ಪೂಜಿಸಿ, ದೇವಿಯ 108 ನಾಮಗಳನ್ನು ಪಠಿಸಬೇಕು.
ಬಾಲಮಂತ್ರ ಉಳ್ಳವರು ಮನೆಯಲ್ಲಿ ಶ್ರೀ ಚಕ್ರವನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ದೀಪವಿಟ್ಟು ಮಂತ್ರ ಪಠಿಸಿ, ನಂತರ ಮಹಾ ನೈವೇದ್ಯ ಮಾಡಿದರೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ.
ಮನೆಯಲ್ಲಿ ದೇವಿಯ ಸರಳ ಪೂಜೆ ಹೇಗೆ?:
- ನವರಾತ್ರಿಯ ಅಂಗವಾಗಿ ಬೆಳಗ್ಗೆ ಬೇಗ ಏಳಬೇಕು, ಮನೆ ಸ್ವಚ್ಛಗೊಳಿಸಬೇಕು.
- ಲಲಿತಾ ಪರಮೇಶ್ವರಿ ದೇವಿಯ ಫೋಟೋ ಜೋಡಿಸಿ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರೆ ಅದ್ಬುತ ಫಲ ದೊರೆಯುತ್ತದೆ.
- ರಾಜರಾಜೇಶ್ವರಿ ಮತ್ತು ಲಲಿತಾ ದೇವಿ ಎರಡನ್ನೂ ಒಂದೇ ರೂಪ ಎನ್ನುತ್ತಾರೆ. ನವರಾತ್ರಿಯಲ್ಲಿ ಆ ರೂಪದ ಫೋಟೋವಿಟ್ಟು ಪೂಜೆ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ.
- ಪ್ರತಿದಿನ ಅಮ್ಮನ ಅಲಂಕಾರದ ಪ್ರಕಾರ, ಅಷ್ಟೋತ್ತಮವನ್ನು ಓದಬೇಕು. ಇಲ್ಲವೇ, ನಿಮ್ಮ ಇಷ್ಟದ ಅಷ್ಟಕವನ್ನು ಓದಬಹುದು. ಸಾಧ್ಯವಾದರೆ, ಲಲಿತಾ ಸಹಸ್ರನಾಮ ಸ್ತೋತ್ರ ಮತ್ತು ದೇವಿ ಖಡ್ಗಮಾಲಾ ಸ್ತೋತ್ರ ಓದುವುದು ಉತ್ತಮ.
- ಪ್ರತಿನಿತ್ಯ ಅಮ್ಮನವರ ಫೋಟೋ ಬಳಿ ದೀಪ ಹಚ್ಚಿ ಹೂವು, ಹಣ್ಣು, ನೈವೇದ್ಯ ಸಮರ್ಪಿಸಿ. ನಂತರ ಈ ಎರಡು ಸ್ತೋತ್ರಗಳನ್ನು ಪಠಿಸಿದರೆ ಸಕಲೈಶ್ವರ್ಯ ಬರುತ್ತದೆ. ದುರ್ಗಾ ದೇವಿ ಸಂಪೂರ್ಣ ಕೃಪೆಯನ್ನು ಪಡೆಯಬಹುದು.
- ಆದರೆ, ದುರ್ಗಾ ದೇವಿಯನ್ನು ಫೋಟೊಸಹಿತ ಪೂಜಿಸುವಾಗ ಮಹಾ ನೈವೇದ್ಯವನ್ನು ಅರ್ಪಿಸಬೇಕೆಂಬ ನಿಯಮವಿಲ್ಲ. ಸಾಮಾನ್ಯವಾಗಿ, ಬೆಲ್ಲದ ತುಂಡು ಅಥವಾ ಪೊಂಗಲ್ನಂತಹ ನೈವೇದ್ಯ ಅರ್ಪಿಸಿದರೆ ಸಾಕು.
- ಅದೇ ರೀತಿ, ಯಾವುದೇ ವಿಗ್ರಹ, ಫೋಟೋ ಕಲಶ, ಶ್ರೀಚಕ್ರ ಇಟ್ಟರೂ ದೇವಿಯ ಮಂತ್ರ ಓದಬೇಕು. ಹಾಗೆ ಮಾಡಿದರೆ, ನವರಾತ್ರಿಯ ಕೊನೆಯಲ್ಲಿ ದೇವಿಯ ಕೃಪೆಗೆ ಸುಲಭವಾಗಿ ಅರ್ಹರಾಗಬಹುದು.
- ನವರಾತ್ರಿಯಲ್ಲಿ ಯಾವುದೇ ಪೂಜೆಯನ್ನು ಮಾಡಲಾಗದವರು ಖಡ್ಗಮಾಲಾ ದೇವಿಯ ಸ್ತೋತ್ರವನ್ನು ಕೇಳುವುದು ಮತ್ತು ಓದುವುದರಿಂದ ಅದ್ಭುತ ಲಾಭ ಪಡೆಯುವರು. ಚಂಡಿ ಸಪ್ತಶತಿ/ದುರ್ಗಾ ಸಪ್ತಶತಿ ಸ್ತೋತ್ರವನ್ನೂ ಓದಬಹುದು.
- ಈ ಸ್ತೋತ್ರವು ದ್ವೇಷ, ಕೌಟುಂಬಿಕ ಕಲಹ, ಆರೋಗ್ಯ ಸಮಸ್ಯೆಗಳಂತಹ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಜ್ಯೋತಿಷಿ ಮಾಚಿರಾಜು ಕಿರಣ್ ಕುಮಾರ್.
ಓದುಗರ ಗಮನಕ್ಕೆ: ಈ ಲೇಖನದಲ್ಲಿ ತಿಳಿಸಿದ ವಿವರಗಳನ್ನು ಜ್ಯೋತಿಷಿಗಳು ವಿಜ್ಞಾನದಲ್ಲಿ ಉಲ್ಲೇಖಿಸಿರುವ ಅಂಶಗಳ ಆಧಾರದ ಮೇಲೆ ಮಾತ್ರ ನೀಡುತ್ತಾರೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.