Naraka Chaturdashi 2024: ನರಕ ಚತುರ್ದಶಿ 5 ದಿನಗಳ ದೀಪಾವಳಿ ಹಬ್ಬದ ಪ್ರಮುಖ ಭಾಗ. ಆದರೆ, ಈ ಬಾರಿಯ ನರಕ ಚತುರ್ದಶಿಯಂದು ತಿಥಿ ದ್ವಂದ್ವ ಇರುವುದರಿಂದ ಕೊಂಚ ಗೊಂದಲ ಉಂಟಾಗಿದೆ. ಹಾಗಾಗಿ, ನರಕ ಚತುರ್ದಶಿಯನ್ನು ಯಾವಾಗ ಆಚರಿಸಬೇಕು? ಪಂಚಾಂಗಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ.
ನರಕ ಚತುರ್ದಶಿ ಯಾವಾಗ?: ಪಂಚಾಂಗದ ಪ್ರಕಾರ, ಅಶ್ವಯುಜ ಮಹಾ ಚತುರ್ದಶಿ ತಿಥಿ ಅಕ್ಟೋಬರ್ 30ರಂದು ಮಧ್ಯಾಹ್ನ 1:15ಕ್ಕೆ ಪ್ರಾರಂಭವಾಗುತ್ತದೆ. ಅಕ್ಟೋಬರ್ 31ರಂದು 3.52ಕ್ಕೆ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಹಬ್ಬಗಳನ್ನು ಸೂರ್ಯೋದಯದ ತಿಥಿಯ ಆಧಾರದ ಮೇಲೆ ಆಚರಿಸಲಾಗುತ್ತದೆ. ನರಕ ಚತುರ್ದಶಿಯನ್ನು ಅಕ್ಟೋಬರ್ 31ರ ಗುರುವಾರ ಆಚರಿಸಬೇಕೆಂದು ಪಂಚಾಂಗಗಳು ಸೂಚಿಸುತ್ತವೆ.
ಪೂಜೆಗೆ ಮಂಗಳಕರ ಸಮಯ: ನರಕ ಚತುರ್ದಶಿಯಂದು ಪೂಜೆಗೆ ಬೆಳಿಗ್ಗೆ 5ರಿಂದ 9ರವರೆಗೆ ಮತ್ತು ನಂತರ 11ರಿಂದ ಮಧ್ಯಾಹ್ನ 1ರವರೆಗೆ ಪೂಜೆಗೆ ಶುಭ ಸಮಯ.
ಪೂಜೆಯ ವಿಧಾನ: ಸೂರ್ಯೋದಯಕ್ಕೂ ಮುನ್ನ ಎದ್ದು ಎಳ್ಳೆಣ್ಣೆಯಿಂದ ತಲೆ ಸ್ನಾನ ಮಾಡಬೇಕು. ಮನೆಯ ಮುಂದೆ ರಂಗೋಲಿ ಬಿಡಿಸಬೇಕು. ಮನೆ ಬಾಗಿಲಿಗೆ ಮಾವಿನ ತೋರಣ ಮತ್ತು ಮಾಲೆಗಳಿಂದ ಅಲಂಕರಿಸಬೇಕು. ಹೊಸ ಬಟ್ಟೆ ಧರಿಸಿ. ಈ ದಿನ ಮನೆಯಲ್ಲಿ ಎಳ್ಳೆಣ್ಣೆಯಿಂದ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿನ ಎಲ್ಲ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಮತ್ತು ಧನಾತ್ಮಕ ಶಕ್ತಿಗಳು ಬರುತ್ತವೆ ಹಾಗೂ ಲಕ್ಷ್ಮಿ ದೇವಿ ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ಎಂದಿನಂತೆ ಇಷ್ಟ ದೇವತೆಗಳ ಪೂಜೆ ಮಾಡಬೇಕು. ದೇವರಿಗೆ ಸಾಂಪ್ರದಾಯಿಕ ನೈವೇದ್ಯಗಳನ್ನು ಸಲ್ಲಿಸಬೇಕು. ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಬಂಧು ಮಿತ್ರರೊಂದಿಗೆ ಸೇವಿಸಬೇಕು.
ಯಮ ದೀಪ ಎಂದರೇನು?: ನರಕ ಚತುರ್ದಶಿಯ ದಿನ ಯಮ ದೀಪ ಹಚ್ಚುವುದರಿಂದ ಯಮ ಲೋಕದಲ್ಲಿರುವ ಹಿರಿಯರು ನರಕದಿಂದ ಮುಕ್ತಿ ಹೊಂದಿ ಸ್ವರ್ಗವನ್ನು ತಲುಪುತ್ತಾರೆ ಎಂಬ ನಂಬಿಕೆ ಇದೆ. ಪೂರ್ವಜರಿಗೆ ನರಕದಿಂದ ಸ್ವರ್ಗಕ್ಕೆ ಹೋಗುವ ದಾರಿಯನ್ನು ತೋರಿಸಲು ಈ ಯಮ ದೀಪವನ್ನು ಇಡಬೇಕು ಎಂದು ಹೇಳಲಾಗುತ್ತದೆ. ಯಮ ಲೋಕದಲ್ಲಿ 84 ಲಕ್ಷ ನರಕಗಳಿದ್ದು, ಅವುಗಳಿಂದ ಮುಕ್ತಿ ಹೊಂದಲು ಈ ದೀಪಾರಾಧನೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.
ಯಮ ದೀಪ ಹೇಗೆ ಬೆಳಗಿಸುವುದು? ನರಕ ಚತುರ್ದಶಿಯ ದಿನ ಸಾಯಂಕಾಲ ಒಂದು ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ಸುರಿದು ಆ ಹಣತೆಯ 5 ಕಡೆಗಳನ್ನು ರಾವಿ ಎಲೆಯ ಮೇಲೆ ದಕ್ಷಿಣಾಭಿಮುಖವಾಗಿ ಹಚ್ಚಿ ದೀಪವನ್ನು ಹಚ್ಚಬೇಕು. ಯಮ ದೀಪವನ್ನು ಬೆಳಗಿಸುವಾಗ ಈ ಶ್ಲೋಕವನ್ನು ಪಠಿಸಬೇಕು ಎನ್ನುತ್ತಾರೆ ಪಂಡಿತರು.
'ಮೃತ್ಯೂನಾಂ ದಂಡಪಸಭಯಂ ಕಾಲೇನ್ ಶ್ಯಾಮಯ ಸಃ
ತ್ರಯೋದಶ್ಯಾಮ್ ದೀಪನಾಥ ಸೂರ್ಯಜಃ ಪ್ರಿಯತಾಂ ಮಾಮ್'
ನರಕ ಚತುರ್ದಶಿಯ ದಿನದಂದು ಯಮ ಧರ್ಮರಾಜನನ್ನು ಪೂಜಿಸಿ ಯಮದೀಪವನ್ನು ಹಚ್ಚಿದರೆ ಅಮರತ್ವ ಮತ್ತು ಅಕಾಲಿಕ ಮರಣದ ದುಷ್ಪರಿಣಾಮಗಳಿಲ್ಲದ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಪಡೆಯುತ್ತೀರಿ. ಬರುವ ನರಕ ಚತುರ್ದಶಿ ದಿನವನ್ನು ಹಿರಿಯರು ಮತ್ತು ಗುರುಗಳ ಮಾರ್ಗದರ್ಶನದ ಪ್ರಕಾರ ಆಚರಿಸೋಣ. ದೀರ್ಘಾಯುಷ್ಯ ಪ್ರಯೋಜನಗಳನ್ನು ಪಡೆದುಕೊಳ್ಳೋಣ.
ಪ್ರಮುಖ ಸೂಚನೆ: ಮೇಲಿನ ವಿವರಗಳನ್ನು ತಜ್ಞರು ಸಂಶೋಧನೆಗಳ ಮಾಹಿತಿ ಆಧರಿಸಿ ಒದಗಿಸಿದ್ದಾರೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.