ETV Bharat / lifestyle

ಬಾಯಲ್ಲಿ ನೀರೂರಿಸುವ ಮ್ಯಾಗಿ ಆಮ್ಲೆಟ್: ಮಕ್ಕಳಿಂದ ಹಿಡಿದು ಹಿರಿಯರಿಗೂ ಇಷ್ಟವಾಗುತ್ತೆ, ರುಚಿಯು ಅಸಮಾನ್ಯ! - MAGGI OMELETTE RECIPE

Maggi Omelette Recipe: ಬಾಯಲ್ಲಿ ನೀರೂರಿಸುವ ರುಚಿಕರ ಮ್ಯಾಗಿ ಆಮ್ಲೆಟ್ ಮಕ್ಕಳಿಂದ ಹಿಡಿದು ಹಿರಿಯರಿಗೂ ಇಷ್ಟವಾಗುತ್ತದೆ. ರುಚಿಕರ ಮ್ಯಾಗಿ ಆಮ್ಲೆಟ್ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

BREAKFAST MAGGI OMELETTE  MAGGI STUFFED OMELETTE RECIPE  EASY TASTY MAGGI OMELETTE  MAGGI OMELETTE
ಮ್ಯಾಗಿ ಆಮ್ಲೆಟ್ (ETV Bharat)
author img

By ETV Bharat Lifestyle Team

Published : Nov 23, 2024, 4:53 PM IST

Maggi Omelette Recipe: ಮಕ್ಕಳು ಮ್ಯಾಗಿ ಎಂದರೆ ಸಾಕು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ತಟ್ಟೆಯಲ್ಲಿ ಬಿಸಿ ಮ್ಯಾಗಿ ಬಡಿಸಿ ಖುಷಿ ಖುಷಿಯಾಗಿ ಸೇವಿಸುತ್ತಾರೆ. ಇತರ ತಿಂಡಿ ರೆಸಿಪಿಗಳಿಗಿಂತ ಮ್ಯಾಗಿ ಮಾಡುವುದು ತುಂಬಾ ಸುಲಭವಾಗಿದೆ. ಅಮ್ಮಂದಿರು ಸಹ ಇದನ್ನೇ ಹೆಚ್ಚಾಗಿ ಮಾಡುತ್ತಾರೆ. ಇದೇ ಮ್ಯಾಗಿಯನ್ನು ನಿತ್ಯವೂ ಮಾಡಿದರೆ ಬೇಸರವಾಗುತ್ತದೆ.

ನಾವು ನಿಮಗಾಗಿ ಸ್ವಲ್ಪ ವೆರೈಟಿಯಾಗಿ 'ಮ್ಯಾಗಿ ಆಮ್ಲೆಟ್' ರೆಸಿಪಿ ಪರಿಚಯಿಸಲಿದ್ದೇವೆ. ಮನೆಯಲ್ಲಿ ತಿಂಡಿ ಮಾಡಲು ಹೆಚ್ಚು ಸಮಯ ಸಿಗದಿದ್ದಾಗ ಮ್ಯಾಗಿಯೊಂದಿಗೆ ಈ ಆಮ್ಲೆಟ್ ಟ್ರೈ ಮಾಡಿ ನೋಡಿ. ಮಕ್ಕಳು ಮಾತ್ರವಲ್ಲ ದೊಡ್ಡವರೂ ಈ ಆಮ್ಲೆಟ್ ಸೇವಿಸುತ್ತಾರೆ. ಇದನ್ನು ಮಾಡಲು ಹೆಚ್ಚು ಸಮಯವೂ ತೆಗೆದುಕೊಳ್ಳುವುದಿಲ್ಲ. ಕೇವಲ ಹತ್ತು ನಿಮಿಷದಲ್ಲಿ ರೆಡಿ ಮಾಡಬಹುದು. ರುಚಿಕರವಾದ ಮ್ಯಾಗಿ ಆಮ್ಲೆಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಮ್ಯಾಗಿ ಆಮ್ಲೆಟ್​ಗೆ ಬೇಕಾಗುವ ಪದಾರ್ಥಗಳು:

  • ಮ್ಯಾಗಿ- 1 ಪ್ಯಾಕೆಟ್
  • ಮೊಟ್ಟೆಗಳು - 3
  • ತೆಳುವಾಗಿ ಕತ್ತರಿಸಿದ ಈರುಳ್ಳಿ - 3 ಟೀಸ್ಪೂನ್
  • ಕ್ಯಾಪ್ಸಿಕಂ ಪುಡಿ - 2 ಟೇಬಲ್​​ಸ್ಪೂನ್​
  • ಕ್ಯಾರೆಟ್ ತುರಿ - 2 ಟೀಸ್ಪೂನ್
  • ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ - 2
  • ಶುಂಠಿ ಚೂರುಗಳು - ಟೀಸ್ಪೂನ್
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಎಣ್ಣೆ - 2 ಟೀಸ್ಪೂನ್

ಮ್ಯಾಗಿ ಆಮ್ಲೆಟ್​ ತಯಾರಿಸುವ ವಿಧಾನ:

  • ಮೊದಲು ಒಲೆ ಆನ್ ಮಾಡಿ ಹಾಗೂ ಮ್ಯಾಗಿ ಬೇಯಿಸಲು ಒಂದು ಪಾತ್ರೆ ಹಾಕಿ. ಅದರಲ್ಲಿ ಒಂದು ಕಪ್ ನೀರು ಸುರಿಯಿರಿ ಮತ್ತು ಅದರೊಳಗೆ ಮ್ಯಾಗಿ ಹಾಕಿ.
  • ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಮ್ಯಾಗಿ ಬೆಂದ ನಂತರ ಮಸಾಲಾ ಮಿಶ್ರಣವನ್ನು ಹಾಕಿ ಸ್ಟವ್ ಆಫ್ ಮಾಡಿ.
  • ಈಗ ಮಿಕ್ಸಿಂಗ್ ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಿ. ಸ್ವಲ್ಪ ಉಪ್ಪು, ಈರುಳ್ಳಿ ಚೂರುಗಳು, ಕ್ಯಾಪ್ಸಿಕಂ ಪುಡಿ, ತುರಿದ ಕ್ಯಾರೆಟ್, ಸಣ್ಣದಾಗಿ ಕಟ್​ ಮಾಡಿದ ಹಸಿ ಮೆಣಸಿನಕಾಯಿ, ಶುಂಠಿ ಚೂರುಗಳು, ಕೊತ್ತಂಬರಿ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ಈಗ ಪ್ಯಾನ್​ ಅನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ.
  • ನಂತರ ಆಮ್ಲೆಟ್ ಮಿಶ್ರಣ ಸುರಿಯಿರಿ ಮತ್ತು ಅದನ್ನು ಪ್ಯಾನ್ ಮೇಲೆ ಹರಡಿ. ಆಮ್ಲೆಟ್ ಮಿಶ್ರಣ ಸ್ವಲ್ಪ ಬೆಂದ ನಂತರ.. ಬೇಯಿಸಿದ ಮ್ಯಾಗಿಯನ್ನು ಮಧ್ಯದಲ್ಲಿ ಹಾಕಿ.
  • ಈಗ ಮ್ಯಾಗಿಯನ್ನು ಮಧ್ಯದಲ್ಲಿ ಹಾಕಿ.. ಆಮ್ಲೆಟ್ ಅನ್ನು ಮಡಿಸಿ. ಆಮ್ಲೆಟ್ ಅನ್ನು ಎರಡೂ ಬದಿಗಳಲ್ಲಿ ಸ್ವಲ್ಪ ಫ್ರೈ ಮಾಡಿ.
  • ಈ ರೀತಿ ಸರಳವಾಗಿ ಮಾಡಿದರೆ ನಿಮ್ಮ ಮುಂದೆ ತುಂಬಾ ರುಚಿಯಾದ ಮೊಟ್ಟೆಯ ಮ್ಯಾಗಿ ಆಮ್ಲೆಟ್ ಇರುತ್ತದೆ. ಇಷ್ಟವಾದರೆ ಒಮ್ಮೆ ಇದನ್ನು ಪ್ರಯತ್ನಿಸಿ ನೋಡಿ. ಮಕ್ಕಳು ತಿಂಡಿ ತಿನ್ನಲು ಇಷ್ಟಪಡುತ್ತಾರೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.