How to Make Kalakand Recipe: ಪ್ರತಿಯೊಬ್ಬರೂ ಸಿಹಿತಿಂಡಿಗಳನ್ನು ಇಷ್ಟಪಡುತ್ತಾರೆ. ಸ್ವೀಟ್ ಬಾಕ್ಸ್ ಮುಂದೆ ಇಟ್ಟರೆ ಕನಿಷ್ಠ ಎರಡು ಮಿಠಾಯಿಗಳನ್ನಾದರೂ ತಿಂದು ತೃಪ್ತರಾಗುತ್ತಾರೆ. ಹಬ್ಬ ಹರಿದಿನಗಳಲ್ಲಿ ಮತ್ತು ಶುಭ ಸಮಾರಂಭಗಳಲ್ಲಿ ಮಹಿಳೆಯರು ಯಾವಾಗಲೂ ಮನೆಯಲ್ಲಿ ಸಿಹಿತಿಂಡಿ ತಯಾರಿಸುತ್ತಾರೆ. ಇನ್ನು ಸ್ವೀಟ್ ಶಾಪ್ಗಳಲ್ಲಿ ಸಿಗುವ ಸ್ವೀಟ್ ಕಲಾಕಂಡ್ ರೆಸಿಪಿಯನ್ನು (ಮಿಲ್ಕ್ ಕೇಕ್) ಹೆಚ್ಚು ಸೇವಿಸುತ್ತಾರೆ.
ಮನೆಯಲ್ಲಿ ಮಾಡಿದರೆ ಕಲಾಕಂಡ್ ಸರಿಯಾಗಿ ಬರುವುದಿಲ್ಲ ಎಂದು ಹೇಳುತ್ತಾರೆ. ಕರಾರುವಾಕ್ಕಾದ ಅಳತೆಗಳೊಂದಿಗೆ ಅತ್ಯಂತ ಸುಲಭವಾಗಿ ಮನೆಯಲ್ಲಿಯೇ ಕಲಾಕಂಡ್ ಹೇಗೆ ತಯಾರಿಸಬೇಕೆಂದು ಇಲ್ಲಿ ನೋಡೋಣ. ಸ್ವಲ್ಪ ತಾಳ್ಮೆ ಇದ್ದರೆ.. ಸ್ವೀಟ್ ಶಾಪ್ ಸ್ಟೈಲ್ನ ಕಲಾಕಂಡ್ ನಿಮ್ಮ ಮನೆಯಲ್ಲಿ ರೆಡಿ ಆಗುತ್ತೆ. ಮತ್ತೇಕೆ ತಡ, ಮಿಲ್ಕ್ ಕೇಕ್ ಅಥವಾ ಕಲಾಕಂಡ್ ಮಾಡುವುದು ಹೇಗೆ ಎಂದು ಸಂಪೂರ್ಣವಾಗಿ ಕಲಿಯೋಣ
ಮಿಲ್ಕ್ ಕೇಕ್ಗೆ ಬೇಕಾಗುವ ಪದಾರ್ಥಗಳೇನು?:
- ಗಟ್ಟಿಯಾದ ಹಾಲು - 1 ಲೀಟರ್
- ಸಕ್ಕರೆ - 100 ಗ್ರಾಂ
- ತುಪ್ಪ - 2 ಟೀಸ್ಪೂನ್
- ನಿಂಬೆ ರಸ - 2 ಚಮಚ (ನಿಂಬೆ ರಸವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿರಬೇಕು)
- ಏಲಕ್ಕಿ ಪುಡಿ - ಒಂದು ಚಮಚ
ತಯಾರಿಸುವುದು ಹೀಗೆ ನೋಡಿ:
- ಮೊದಲು ಪಾತ್ರೆ ಒಲೆಯ ಮೇಲೆ ಇಡಿ. ಅದರಲ್ಲಿ ಗಟ್ಟಿಯಾದ ಹಾಲು ಸುರಿಯಿರಿ. ಕಲಾಕಂಡವನ್ನು ಹೆಚ್ಚು ರುಚಿಕರವಾಗಿಸಲು ನೀವು ಪೂರ್ಣ ಕೆನೆ ಹಾಲನ್ನೂ ಸಹ ಬಳಸಬಹುದು.
- ಹಾಲನ್ನು ಚೆನ್ನಾಗಿ ಕುದಿಸಿ. ಹೀಗೆ ಹಾಲು ಕುದಿಯಲು ಶುರುವಾದಾಗಿನಿಂದ ಸ್ವಲ್ಪ ದಪ್ಪ ಆಗುವವರೆಗೆ ಮಧ್ಯದಲ್ಲಿ ಒಂದು ಸೌಟು ಹಾಕಿ ಕಲಸಬೇಕು.
- ಹಾಲನ್ನು ಕಡಾಯಿಗೆ ಅಂಟಿಕೊಳ್ಳದೇ ಒಂದು ಲೋಟದೊಂದಿಗೆ ಬೆರೆಸಿ ಚೆನ್ನಾಗಿ ಕುದಿಸಿ.
- ಹಾಲು ಅರ್ಧಕ್ಕಿಂತ ಕಡಿಮೆಯಾದ ನಂತರ, ಸ್ಟವ್ ಅನ್ನು ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ನಿಂಬೆ ರಸ ಸೇರಿಸಿ.
- ಈಗ ಹಾಲು ಒಡೆಯುತ್ತದೆ. ನಂತರ ಹಾಲಿಗೆ ಸಕ್ಕರೆಯನ್ನು ಸ್ವಲ್ಪ ಸ್ವಲ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಐದು ನಿಮಿಷಗಳ ನಂತರ ಏಲಕ್ಕಿ ಪುಡಿ ಮತ್ತು ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಕಲಾಕಂಡ್ ತಯಾರಾದ ನಂತರ ಒಲೆ ಆಫ್ ಮಾಡಿ. ಈಗ ಕೇಕ್ ಪ್ಯಾನ್‌ಗೆ ಸ್ವಲ್ಪ ತುಪ್ಪ ಹಾಕಿ ಹರಡಿ.
- ತಟ್ಟೆಯಲ್ಲಿ ಕಲಾಕಂಡನ್ನು ಹಾಕಿ ಮತ್ತು ಅದನ್ನು ಎಲ್ಲಾ ಕಡೆ ಹರಡಿ.
- ಪೂರ್ತಿ ಸಮತಟ್ಟುಗೊಳಿಸಿ ನಂತರ, ನಿಮಗೆ ಇಷ್ಟವಾದ ಆಕಾರದಲ್ಲಿ ಕತ್ತರಿಸಿದರೆ ಬಾಯಲ್ಲಿ ನೀರೂರಿಸುವ ಕಲಾಕಂಡ್ ರೆಡಿ.
- ಇದನ್ನು ಮನೆಯಲ್ಲಿಯೇ ಸಿಂಪಲ್ ಟಿಪ್ಸ್ ಅನುಸರಿಸಿ ಮಾಡಿದ್ರೆ ಸ್ವೀಟ್ ಶಾಪ್ ಸ್ಟೈಲ್ನ ಕಲಕಂಡ್ ಸಿದ್ಧವಾಗುತ್ತದೆ.
- ನಿಮಗೆ ಈ ಸಿಹಿ ರೆಸಿಪಿ ಇಷ್ಟವಾದಲ್ಲಿ ಮನೆಯಲ್ಲಿ ಟ್ರೈ ಮಾಡಿ ನೋಡಿ, ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.