IRCTC Golden Sands Of Rajasthan: ಶ್ರೀಮಂತ ಇತಿಹಾಸ ಹೊಂದಿರುವ ರಾಜಸ್ಥಾನದ ಬಗ್ಗೆ ಎಷ್ಟು ವಿವರಣೆ ನೀಡಿದರೂ ಕಡಿಮೆಯೇ. ಗಮನ ಸೆಳೆಯುವ ಕಟ್ಟಡಗಳು, ಕೋಟೆಗಳು, ಸರೋವರಗಳು ಮತ್ತು ರಾಜಪ್ರಭುತ್ವ ಪ್ರತಿಬಿಂಬಿಸುವ ರಾಜಮನೆತನದ ಅರಮನೆಗಳ ಸೌಂದರ್ಯದ ಕುರಿತು ವಿವರಿಸಲು ಪದಗಳು ಸಾಲವು. ಸೆಲೆಬ್ರಿಟಿಗಳ ಮದುವೆಗಳೂ ಇಂಥ ಸುಂದರ ಕಟ್ಟಡಗಳಲ್ಲಿ ನಡೆಯುತ್ತವೆ. ಅದಕ್ಕಾಗಿಯೇ ಅಂತಹ ಸ್ಥಳಗಳಿಗೆ ಭೇಟಿ ನೀಡಲು ಅನೇಕರು ಬಯಸುತ್ತಾರೆ. ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಅಂತಹವರಿಗಾಗಿಯೇ ಗುಡ್ನ್ಯೂಸ್ ನೀಡಿದೆ.
ಐಆರ್ಸಿಟಿಸಿ ತನ್ನ ಟೂರ್ ಪ್ಯಾಕೇಜ್ಗೆ 'ಗೋಲ್ಡನ್ ಸ್ಯಾಂಡ್ಸ್ ಆಫ್ ರಾಜಸ್ಥಾನ' ಎಂಬ ಹೆಸರಿಟ್ಟಿದೆ. ಈ ಪ್ರವಾಸ ಹೈದರಾಬಾದ್‌ನಿಂದ ವಿಮಾನದ ಮೂಲಕ ಆರಂಭವಾಗುತ್ತದೆ. ಪ್ಯಾಕೇಜ್‌ನ ಒಟ್ಟು ಅವಧಿ 5 ರಾತ್ರಿಗಳು ಹಾಗೂ 6 ಹಗಲು. ಜೈಸಲ್ಮೇರ್, ಜೋಧಪುರ, ಉದಯಪುರ ಸೇರಿದಂತೆ ವಿವಿಧ ತಾಣಗಳನ್ನು ಪ್ರವಾಸದಲ್ಲಿ ಆನಂದಿಸಬಹುದು.
1ನೇ ದಿನ: ಬೆಳಗ್ಗೆ ಹೈದರಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ಆರಂಭ. ಮಧ್ಯಾಹ್ನ ಉದಯಪುರ ತಲುಪುವುದು. ಅಲ್ಲಿಂದ ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ತೆರಳುವುದು. ಚೆಕ್ ಇನ್ ಆದ ನಂತರ, ಊಟ. ಬಳಿಕ ನಗರದ ಅರಮನೆಗೆ ಭೇಟಿ. ಅದಾದ ನಂತರ ಅವರು ನಾಥದ್ವಾರಕ್ಕೆ ಹೋಗುವುದು. ಶ್ರೀನಾಥಜಿ ದೇವಸ್ಥಾನಕ್ಕೆ ಭೇಟಿ. ಸಂಜೆ ನಂಬಿಕೆಯ ಪ್ರತಿಮೆಗೆ (Statue of Belief) ಭೇಟಿ ನೀಡಿ ಮತ್ತು ಉದಯಪುರಕ್ಕೆ ಹಿಂತಿರುಗುವುದು. ಅಂದು ರಾತ್ರಿ ಊಟ ಮಾಡಿ ಅಲ್ಲಿಯೇ ಉಳಿಯುವುದು.
2ನೇ ದಿನ: ಉಪಹಾರ ಮುಗಿಸಿ ಚಿತ್ತೋರ್ ಗಢಕ್ಕೆ ತೆರಳುವುದು. ಕೋಟೆಗೆ ಭೇಟಿ. ಮಧ್ಯಾಹ್ನ ಉದಯಪುರಕ್ಕೆ ಹಿಂತಿರುಗುವುದು. ಸಂಜೆ ಶಾಪಿಂಗ್. ಆ ರಾತ್ರಿ ಅಲ್ಲೇ ಉಳಿದುಕೊಳ್ಳುವುದು.
3ನೇ ದಿನ: ಉಪಹಾರದ ನಂತರ ಚೆಕ್ಔಟ್ ಮಾಡಿ ಜೈಸಲ್ಮೇರ್‌ಗೆ ಹೊರಡುವುದು. ಮರುಭೂಮಿ ಶಿಬಿರದಲ್ಲಿ ಚೆಕ್-ಇನ್ ಮಾಡಿದ ನಂತರ ರಾತ್ರಿ ಅಲ್ಲಿಯೇ ಉಳಿಯುವುದು.
4ನೇ ದಿನ: ಉಪಹಾರದ ನಂತರ ನಾಲ್ಕನೇ ದಿನ ಚೆಕ್ ಔಟ್. ಲಾಂಗೆವಾಲಾ ಇಂಡೋ ಪಾಕ್ ಗಡಿಗೆ ಹೋಗುವುದು. ಇಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ. ತನೋಟ್ ಮಾತಾ ಮಂದಿರಕ್ಕೆ ತೆರಳುವುದು. ಜೈಸಲ್ಮೇರ್‌ಗೆ ಹಿಂತಿರುಗಿ ಹೋಟೆಲ್‌ನಲ್ಲಿ ಚೆಕ್‌ಇನ್ ಮಾಡಿ ರಾತ್ರಿ ಉಳಿದುಕೊಳ್ಳುವುದು.
5ನೇ ದಿನ: ಉಪಹಾರದ ಬಳಿಕ ಜೈಸಲ್ಮೇರ್ ಕೋಟೆಗೆ ಭೇಟಿ. ನಂತರ ಜೋಧಪುರಕ್ಕೆ ಹೋಗುವುದು. ಇಲ್ಲಿನ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ ಬಳಿಕ ರಾತ್ರಿ ಅಲ್ಲಿಯೇ ಉಳಿಯುವುದು.
6ನೇ ದಿನ: ಉಪಹಾರ ಸೇವಿಸಿದರ ನಂತರ, ಹೋಟೆಲ್‌ನಿಂದ ಚೆಕ್ ಔಟ್. ಮೆಹ್ರಾನ್‌ಗಢ್ ಕೋಟೆಗೆ ಭೇಟಿ. ವಿಮಾನ ನಿಲ್ದಾಣಕ್ಕೆ ಹೊರಡುವುದು. ಅಲ್ಲಿಂದ ವಿಮಾನ ಪ್ರಯಾಣದ ಮೂಲಕ ಹೈದರಾಬಾದ್‌ಗೆ ವಾಪಸ್ ಪಯಣ. ಹೈದರಾಬಾದ್ ತಲುಪಿದ ನಂತರ ಪ್ರವಾಸ ಮುಗಿಯುತ್ತದೆ.
ಟೂರ್ ದರಗಳ ವಿವರ:
- ಕಂಫರ್ಟ್‌ನಲ್ಲಿ ಸಿಂಗಲ್ ಆಕ್ಯುಪೆನ್ಸಿಗೆ ₹46,850
- ಡಬಲ್ ಆಕ್ಯುಪೆನ್ಸಿಗೆ ₹36,300
- ಟ್ರಿಪಲ್ ಆಕ್ಯುಪೆನ್ಸಿಗೆ ₹35,000
- 5 ರಿಂದ 11 ವರ್ಷದ ಮಕ್ಕಳಿಗೆ ಹಾಸಿಗೆ ಸಹಿತ ₹32,500, ಹಾಸಿಗೆ ರಹಿತ ₹29,150
- 2 ರಿಂದ 4 ವರ್ಷದ ಮಕ್ಕಳಿಗೆ ₹23,050
ಪ್ಯಾಕೇಜ್ ಒಳಗೊಂಡಿರುವ ಸೌಲಭ್ಯ:
- ವಿಮಾನ ಟಿಕೆಟ್
- ಹೋಟೆಲ್ ವಸತಿ
- 5 ಉಪಹಾರ, 1 ಮಧ್ಯಾಹ್ನ ಊಟ ಹಾಗೂ 5 ರಾತ್ರಿಯ ಊಟ
- ಪ್ಯಾಕೇಜ್ ಪ್ರಕಾರ ತಾಣಗಳನ್ನು ವೀಕ್ಷಿಸಲು ವಾಹನ
- ಪ್ರಯಾಣ ವಿಮೆ
- ಪ್ರಸ್ತುತ ಈ ಪ್ರವಾಸದ ಪ್ಯಾಕೇಜ್ 2025ರ ಜನವರಿ 19ರಂದು ಲಭ್ಯವಿದೆ.
- ಈ ಪ್ಯಾಕೇಜ್ ಕುರಿತು ಸಂಪೂರ್ಣ ವಿವರ ಹಾಗೂ ಬುಕ್ಕಿಂಗ್‌ಗೆ ಐಆರ್ಸಿಟಿಸಿ ವೆಬ್ಸೈಟ್ನ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಐಆರ್ಸಿಟಿಸಿ ವೆಬ್ಸೈಟ್ನ್ನು ವೀಕ್ಷಿಸಿ: https://www.irctctourism.com/pacakage_description?packageCode=SHA20