IRCTC Coastal Karnataka Package: ಹಲವರು ದೇಶದ ಪ್ರಸಿದ್ಧ ದೇವಾಲಯಗಳು, ಸುಂದರ ಸ್ಥಳಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಾರೆ. ಆದರೆ, ಅಲ್ಲಿಗೆ ಹೇಗೆ ಹೋಗಬೇಕೆಂಬುದು ತಿಳಿಯದೆ ಮತ್ತು ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ ಎಂದು ಅನೇಕ ಜನರು ಹಿಂದೇಟು ಹಾಕುತ್ತಾರೆ. ಹಾಗಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇಂತಹವರಿಗೆ ವಿಶೇಷ ಆಫರ್ ಟೂರ್ ಪ್ಯಾಕೇಜ್ ಘೋಷಿಸಿದೆ. ಕಡಿಮೆ ದರದಲ್ಲಿ ಕರ್ನಾಟಕದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಈ ಪ್ರವಾಸದ ಪ್ಯಾಕೇಜ್ನ್ನು ಘೋಷಿಸಿದೆ. ಈ ಟೂರ್ ಪ್ಯಾಕೇಜ್ಗೆ ಎಷ್ಟು ವೆಚ್ಚವಾಗುತ್ತದೆ? ಯಾವ ಸ್ಥಳಗಳನ್ನು ವೀಕ್ಷಿಸಬಹುದು ಎಂಬುದರ ವಿವರ ಇಲ್ಲಿದೆ..
'ಕರಾವಳಿ ಕರ್ನಾಟಕ' ಹೆಸರಿನ ಪ್ರಸಿದ್ಧ ಪ್ರವಾಸಿ ಸ್ಥಳಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಲು IRCTC ಟೂರ್ ಪ್ಯಾಕೇಜ್ನ್ನು ಘೋಷಿಸಿದೆ. ಈ ಪ್ರವಾಸವು ಪ್ರತಿ ಮಂಗಳವಾರ ಹೈದರಾಬಾದ್‌ನಿಂದ ರೈಲು ಪ್ರಯಾಣದ ಮೂಲಕ ಸಾಗುತ್ತದೆ. ಪ್ರವಾಸದ ಒಟ್ಟು ಅವಧಿಯು 5 ರಾತ್ರಿ ಹಾಗೂ 6 ದಿನಗಳು. ಈ ಪ್ರವಾಸದ ಪ್ಯಾಕೇಜ್ ಉಡುಪಿ, ಶೃಂಗೇರಿ, ಮುರುಡೇಶ್ವರ ಮುಂತಾದ ಪ್ರದೇಶಗಳನ್ನು ಒಳಗೊಂಡಿದೆ. ಪ್ರಯಾಣದ ವಿವರಗಳನ್ನು ತಿಳಿಯೋಣ..
1ನೇ ದಿನ: ಮೊದಲ ದಿನ ಕಾಚಿಗುಡ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 12789) ರೈಲು ಕಾಚಿಗುಡ ನಿಲ್ದಾಣದಿಂದ ಬೆಳಗ್ಗೆ 6.05ಕ್ಕೆ ಹೊರಡಲಿದೆ. ಇಡೀ ದಿನ ಪ್ರಯಾಣದಲ್ಲಿ ಹೋಗುತ್ತದೆ.
2ನೇ ದಿನ: ಎರಡನೇ ದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ಸ್ಟೇಷನ್ ತಲುಪಲಾಗುವುದು. ಅಲ್ಲಿಂದ ಉಡುಪಿಗೆ ಹೋಗಲಾಗುವುದು. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ ನಂತರ ಶ್ರೀಕೃಷ್ಣ ದೇವಸ್ಥಾನ ಮತ್ತು ಮಲ್ಪೆ ಬೀಚ್‌ಗೆ ಭೇಟಿ ಇರಲಿದೆ. ಅಂದು ರಾತ್ರಿ ಉಡುಪಿಯಲ್ಲಿ ವಾಸ್ತವ್ಯ.
3ನೇ ದಿನ: ಮೂರನೇ ದಿನ ಉಪಹಾರ ಸೇವಿಸಿದ ನಂತರ ಕೊಲ್ಲೂರು ತೆರಳಲಾಗುವುದು. ಅಲ್ಲಿ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಕೊಲ್ಲೂರಿನಿಂದ ಮುರುಡೇಶ್ವರ ಪ್ರದೇಶಕ್ಕೆ ತಲುಪಲಾಗುವುದು. ಅಲ್ಲಿ ಶಿವನ ದೇವಾಲಯಕ್ಕೆ ಭೇಟಿ ಕೊಡಲಾಗುತ್ತದೆ. ಅಲ್ಲಿಂದ ಸಂಜೆ ಗೋಕರ್ಣಕ್ಕೆ ಹೊರಡಲಾಗುವುದು. ದೇವಾಲಯಕ್ಕೆ ಭೇಟಿ ನೀಡಿದ ನಂತರ, ನೀವು ಬೀಚ್ನಲ್ಲಿ ಆನಂದಿಸಬಹುದು. ಆ ನಂತರ ಮತ್ತೆ ಉಡುಪಿಗೆ ಮರಳಲಾಗುವುದು. ಉಡುಪಿಯಲ್ಲಿ ರಾತ್ರಿ ವಾಸ್ತವ್ಯ ಹೂಡುವುದು.
4ನೇ ದಿನ: ನಾಲ್ಕನೇ ದಿನ ಉಡುಪಿಯಿಂದ ಚೆಕ್ ಔಟ್ ಮಾಡಿ ಹೊರನಾಡಿಗೆ ತೆರಳಲಾಗುವುದು. ಅಲ್ಲಿ ಅನ್ನಪೂರ್ಣ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ನಂತರ ಅಲ್ಲಿಂದ ಶೃಂಗೇರಿಗೆ ಪ್ರವಾಸ. ಅಲ್ಲಿನ ಶಾರದಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ಸಂಜೆ ಮಂಗಳೂರಿಗೆ ಹೋಗಲಾಗುವುದು. ಮಂಗಳೂರಿನಲ್ಲಿ ರಾತ್ರಿ ವಾಸ್ತವ್ಯ.
5ನೇ ದಿನ: ಐದನೇ ದಿನ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಮತ್ತು ಮಂಗಳೂರಿನ ಮಂಗಳಾದೇವಿ ದೇವಸ್ಥಾನ ಮತ್ತು ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ. ಸಂಜೆ ತಣ್ಣೀರಭಾವಿ ಬೀಚ್ ಮತ್ತು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಲಾಗುವುದು. ಸಂಜೆ 7 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಬಹುದು. ರಾತ್ರಿ 8 ಗಂಟೆಗೆ ಹೈದರಾಬಾದ್‌ಗೆ ಮರಳಲಾಗುವುದು. ಇದು ರಾತ್ರಿಯ ಪ್ರಯಾಣವಾಗಿರುತ್ತದೆ.
6ನೇ ದಿನ: ಆರನೇ ದಿನ ರಾತ್ರಿ 11.40ಕ್ಕೆ ಕಾಚಿಗುಡ ತಲುಪುವ ಮೂಲಕ ಪ್ರವಾಸ ಕೊನೆಗೊಳ್ಳುತ್ತದೆ.
ಟಿಕೆಟ್ ದರಗಳು:
ಕಂಪರ್ಟ್ ವರ್ಗದಲ್ಲಿ (3A) ಒಬ್ಬರಿಗೆ ₹39,140, ಡಬಲ್ ಶೇರಿಂಗ್‌ಗೆ ₹22,710 ಮತ್ತು ಟ್ರಿಪಲ್ ಶೇರಿಂಗ್‌ಗೆ ₹18,180, 5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆಯೊಂದಿಗೆ ₹11,610 ಪಾವತಿಸಬೇಕಾಗುತ್ತದೆ.
ಸ್ಟ್ಯಾಂಡರ್ಡ್ ವರ್ಗದಲ್ಲಿ ಸಿಂಗಲ್ ಶೇರಿಂಗ್‌ಗೆ ₹19,690, ಟ್ರಿಪಲ್ ಶೇರಿಂಗ್‌ಗೆ ₹15,150, 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆಯೊಂದಿಗೆ ₹8,590 ಗ್ರೂಪ್ ಬುಕ್ಕಿಂಗ್ ಅವಲಂಬಿಸಿ, ಟಿಕೆಟ್ ದರಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ಪ್ಯಾಕೇಜ್ನಲ್ಲಿ ಏನೆಲ್ಲಾ ಇರುತ್ತದೆ?:
- ರೈಲು ಟಿಕೆಟ್‌ಗಳು (ಸ್ಟ್ಯಾಂಡರ್ಡ್ ಮತ್ತು 3AC)
- ಪ್ರಯಾಣದ ಪ್ಯಾಕೇಜ್ ಅವಲಂಬಿಸಿ AC ವಾಹನ
- 3 ಉಪಹಾರಗಳೊಂದಿಗೆ ಹೋಟೆಲ್ ವಸತಿ
- ಪ್ರಯಾಣ ವಿಮೆ:
- ಈ ಟೂರ್ ಪ್ಯಾಕೇಜ್ ನವೆಂಬರ್ 19ರಿಂದ ಮಾರ್ಚ್ 25, 2025ರ ವರೆಗೆ ಲಭ್ಯವಿದೆ.
- ಈ ಪ್ಯಾಕೇಜ್‌ನ ಸಂಪೂರ್ಣ ವಿವರ ಹಾಗೂ ಬುಕ್ಕಿಂಗ್ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಿಬಹುದು:
https://www.irctctourism.com/pacakage_description?packageCode=SHR085