ETV Bharat / lifestyle

ಮನಿ ಪ್ಲಾಂಟ್ ಒಣಗುತ್ತಿದೆಯೇ? ಇದನ್ನು ಮಾಡಿ, ಹಚ್ಚ ಹಸಿರಾಗಿ ಬೆಳೆಯುವುದನ್ನು ನೋಡಿ - TIPS TO GROW MONEY PLANT

Money Plant: ಹೆಚ್ಚಿನವರ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಸಿ ಅಂದ್ರೆ ಅದು ಮನಿ ಪ್ಲಾಂಟ್. ನಿಮ್ಮ ಮನೆಯಲ್ಲಿರುವ ಮನಿ ಪ್ಲಾಂಟ್ ಒಣಗುತ್ತಿದೆಯೇ? ಈ ಸಲಹೆಗಳನ್ನು ಪಾಲಿಸಿ ನೋಡಿ.

MONEY PLANT OUTDOOR CARE  MONEY PLANT WATERING TIPS  HOW TO CARE FOR MONEY PLANT  MONEY PLANT TIPS
ಮನಿ ಪ್ಲಾಂಟ್​ - ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Dec 9, 2024, 3:57 PM IST

Money Plant: ಇತ್ತೀಚಿನ ದಿನಗಳಲ್ಲಿ ಹಲವರು ತೋಟಗಾರಿಕೆ ಮಾಡಲು ಇಷ್ಟಪಡುತ್ತಿದ್ದಾರೆ. ಮನೆಯಲ್ಲಿ ಜಾಗವಿಲ್ಲದಿದ್ದರೂ ಕುಂಡಗಳಲ್ಲಿ ಬಗೆಬಗೆಯ ಗಿಡಗಳನ್ನು ಬೆಳೆಸುತ್ತಾರೆ. ಅಂತಹ ಸಸ್ಯಗಳಲ್ಲಿ ಮನಿ ಪ್ಲಾಂಟ್ ಕೂಡ ಒಂದು. ಮನೆಬಾಗಿಲೆದುರು, ಬಾಲ್ಕನಿ, ಹಾಲ್ ವಿವಿಧ ಪ್ರದೇಶಗಳಲ್ಲಿ ಮನಿ ಪ್ಲಾಂಟ್ ಬೆಳೆಯುತ್ತಾರೆ. ಈ ಸಸ್ಯವನ್ನು ಮನೆ ಆವರಣದಲ್ಲಿ ಬೆಳೆಯುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂಬುದು ನಂಬಿಕೆ.

ಆದರೆ, ಚಳಿಗಾಲದಲ್ಲಿ ಮನಿ ಪ್ಲಾಂಟ್ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಜೊತೆಗೆ ಒಣಗಿಯೂ ಹೋಗುತ್ತವೆ. ಈ ಪರಿಸ್ಥಿತಿಯಲ್ಲಿ ಸಸಿಯನ್ನು ಮನಸ್ಸಿಗೆ ತುಂಬಾ ನೋವಾಗುತ್ತದೆ. ಆದರೆ ಕೆಳಗೆ ನೀಡಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ ಮನಿ ಪ್ಲಾಂಟ್ ಸೊಗಸಾಗಿ, ಹಸಿರಾಗಿ ಬೆಳೆಯುತ್ತದೆ ಎನ್ನುತ್ತಾರೆ ತಜ್ಞರು.

ಬಾಳೆಹಣ್ಣಿನ ಸಿಪ್ಪೆ: ನಮ್ಮಲ್ಲಿ ಹೆಚ್ಚಿನವರು ಬಾಳೆಹಣ್ಣಿನ ಸಿಪ್ಪೆಯನ್ನು ಹೊರಗಡೆ ಎಸೆಯುತ್ತಾರೆ. ಆದರೆ, ಈ ಸಿಪ್ಪೆವನ್ನು ಮನಿ ಪ್ಲಾಂಟ್‌ಗೆ ಉತ್ತಮ ಗೊಬ್ಬರವಾಗಿ ಬಳಸಬಹುದು. ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಬಳಿಕ ಅವುಗಳನ್ನು ಮಿಕ್ಸಿಗೆ ಹಾಕಿ ಸ್ವಲ್ಪ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಪ್ಲಾಸ್ಟಿಕ್ ಬಾಕ್ಸ್​ನಲ್ಲಿ ತೆಗೆದುಕೊಳ್ಳಿ. ಪೇಸ್ಟ್​ಗೆ ಎರಡು ಬಾರಿ ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಬಾಕ್ಸ್ ಮುಚ್ಚಿ ಹಾಗೂ ರಾತ್ರಿಯಿಡೀ ಇರಿಸಿ. ಮರುದಿನ ಈ ಮಿಶ್ರಣವನ್ನು ಮನಿ ಪ್ಲಾಂಟ್‌ಗೆ ಸುರಿಯಿರಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಸಸಿ ಹಚ್ಚ ಹಸಿರಾಗುತ್ತದೆ.

ಈರುಳ್ಳಿ ಸಿಪ್ಪೆ, ಚಹಾ ಎಲೆ: ಈರುಳ್ಳಿಯನ್ನು ಕತ್ತರಿಸುವಾಗ ನಾವು ಅದರ ಮೇಲಿನ ಎರಡು ಅಥವಾ ಮೂರು ಪದರಗಳನ್ನು ತೆಗೆದುಹಾಕುತ್ತೇವೆ. ಆದರೆ, ಸಿಪ್ಪೆಗಳನ್ನು ಮನಿ ಪ್ಲಾಂಟ್ ಗೊಬ್ಬರಕ್ಕಾಗಿ ಬಳಸಬಹುದು. ಈರುಳ್ಳಿಯ ಪದರಗಳನ್ನು ಒಣಗಿಸಿ. ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡು ಪುಡಿ ಸಿದ್ಧಪಡಿಸಿಕೊಳ್ಳಿ. ಈ ಪುಡಿಗೆ ತಾಜಾ ಚಹಾ ಎಲೆಗಳನ್ನು ಸೇರಿಸಿ ಮಿಶ್ರಣ ಮಾಡಿ. ಪುಡಿಯನ್ನು ಪ್ಲಾಸ್ಟಿಕ್ ಬಾಕ್ಸ್​ನಲ್ಲಿ ಹಾಕಿ ನೀರು ಸೇರಿಸಿ. ಎರಡು ದಿನ ಹಾಗೆಯೇ ಬಿಡಿ. ಈ ನೀರನ್ನು ಮನಿ ಪ್ಲಾಂಟ್‌ಗೆ ಸುರಿದರೆ ಈ ಸಸಿ ಹಸಿರುಮಯವಾಗಿ ಬೆಳೆಯುತ್ತದೆ.

ಇನ್ನಷ್ಟು ಸಲಹೆಗಳು:

  • ಸೂರ್ಯನ ಕಿರಣಗಳು ಮನಿ ಪ್ಲಾಂಟ್ ಮೇಲೆ ಬೀಳುವಂತೆ ನೋಡಿಕೊಳ್ಳಿ. ಮನೆಯೊಳಗೆ ಇಡಬೇಡಿ, ಬದಲಿಗೆ ಹೊರಗೆ ಇಡಿ. ನೀವು ಹೀಗೆ ಮಾಡಿದರೆ, ಸಸ್ಯದ ಎಲೆಗಳು ಬಣ್ಣ ಬದಲಾಯಿಸುತ್ತವೆ. ಬಳಿಕ ಈ ಸಸ್ಯವನ್ನು ಮನೆಯಲ್ಲಿ ನೆರಳಿನ ಸ್ಥಳದಲ್ಲಿ ಇರಿಸಿ.
  • ಚಳಿಗಾಲದಲ್ಲಿ ಪ್ರತಿದಿನ ಮನಿ ಪ್ಲಾಂಟ್‌ಗೆ ನೀರು ಹಾಕುವ ಅಗತ್ಯವಿಲ್ಲ. ಮಡಕೆಯಲ್ಲಿ ಮಣ್ಣು ಒಣಗಿದಂತೆ ನೋಡಿಕೊಳ್ಳಿ, ಎರಡು ಗ್ಲಾಸ್ ನೀರು ಹಾಕಿದರೆ ಸಾಕು.
  • ಸಸ್ಯವನ್ನು ನಿಯಮಿತವಾಗಿ ಕತ್ತರಿಸಬೇಕು.
  • ಮಡಕೆಯ ಕೆಳಭಾಗದಲ್ಲಿ ರಂಧ್ರಗಳಿವೆ ಎಂದು ಖಚಿತಪಡಿಸಿಕೊಳ್ಳಿ. ಇದು ನೀರು ನಿಲ್ಲುವುದನ್ನು ತಡೆಯುತ್ತದೆ.
  • ಬಾಡಿದ ಎಲೆಗಳು ಮತ್ತು ಹಾನಿಗೊಳಗಾದ ಭಾಗಗಳನ್ನು ತೆಗೆದುಹಾಕಿ. ಹೀಗೆ ಮಾಡಿದರೆ ಮನಿ ಪ್ಲಾಂಟ್ ಹಸಿರಾಗಿ ಬೆಳೆಯುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಗುಲಾಬಿ ಗಿಡದಲ್ಲಿ ಹೂ ಅರಳುತ್ತಿಲ್ಲವೇ? ಇದರ ಒಂದು ಹನಿ ಸಾಕು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.