How to Make Flat Beans Fry Recipe: ಬಹುತೇಕರು ದ್ವಿದಳ ಧಾನ್ಯದ ಪಲ್ಯ ಅಂದ್ರೆ ಅನೇಕರಿಗೆ ಇಷ್ಟಪಡುವುದಿಲ್ಲ. ಇದರ ಅಡುಗೆ ಎಷ್ಟೇ ಚೆನ್ನಾಗಿದ್ದರೂ ತಟ್ಟೆಯಲ್ಲಿ ಒಂದು ಸೌಟು ಹಾಕಿಕೊಂಡು ರುಚಿ ಕೂಡ ನೋಡುವುದಿಲ್ಲ. ಮತ್ತೆ ಕೆಲವರು ಚಪಾತಿ ಜೊತೆಗೆ ಮಾತ್ರ ಸೇವಿಸುತ್ತಾರೆ. ಈಗ ನಾವು ಎಲ್ಲರಿಗೂ ಇಷ್ಟವಾಗುವಂತೆ ರೆಸಿಪಿಯನ್ನು ತಂದಿದ್ದೇವೆ. ಅದುವೇ ಚಪ್ಪರದ ಅವರೆಕಾಯಿ ಫ್ರೈ... ಈ ಅಡುಗೆ ಚಿಕ್ಕವರಿಂದ ಹಿಡಿದು ದೊಡ್ಡವರು ಕೂಡ ತುಂಬಾ ಹಿಡಿಸುತ್ತವೆ. ನಾವು ತಿಳಿಸಿದ ಪ್ರಕಾರ, ಚಪ್ಪರದ ಅವರೆಕಾಯಿ ಫ್ರೈ ಮಾಡಿದರೆ ಸಾಕು ಖುಷಿಯಿಂದ ಸೇವಿಸುತ್ತಾರೆ. ಹಾಗಾದ್ರೆ, ಚಪ್ಪರದ ಅವರೆಕಾಯಿ ಫ್ರೈ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಚಪ್ಪರದ ಅವರೆಕಾಯಿ ಫ್ರೈಗೆ ಬೇಕಾಗುವ ಸಾಮಗ್ರಿಗಳು:
- ಚಪ್ಪರದ ಅವರೆಕಾಯಿ : ಕಾಲು ಕೆ.ಜಿ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ : 2 ಟೀಸ್ಪೂನ್
- ಕರಿಬೇವು : 2 ಎಲೆಗಳು
- ಹಸಿಮೆಣಸಿನಕಾಯಿ : 2
- ಈರುಳ್ಳಿ : 1
- ಒಣ ಮೆಣಸಿನಕಾಯಿ : 8
- ಹಸಿಕೊಬ್ಬರಿ : ಕಾಲು ಕಪ್
- ಬೆಳ್ಳುಳ್ಳಿ ಎಸಳು : 10
- ಜೀರಿಗೆ : ಟೀಸ್ಪೂನ್
- ಸಾಸಿವೆ : 1 ಟೀಸ್ಪೂನ್
- ಕಡಲೆಬೇಳೆ : 1 ಟೀಸ್ಪೂನ್
- ಉದ್ದಿನಬೇಳೆ : ಚಮಚ
- ಕರಿಬೇವಿನ ಎಲೆಗಳು : 2
- ಕೊತ್ತಂಬರಿ ಸೊಪ್ಪು : ಸ್ವಲ್ಪ
- ಅರಿಶಿನ : ಕಾಲು ಟೀಚಮಚ
ಚಪ್ಪರದ ಅವರೆಕಾಯಿ ಫ್ರೈ ತಯಾರಿಸುವ ವಿಧಾನ:
- ಮೊದಲು ಚಪ್ಪರದ ಅವರೆಕಾಯಿಗಳನ್ನು ಚೆನ್ನಾಗಿ ತೊಳೆದು, ಕತ್ತರಿಸಿ ತಟ್ಟೆಯಲ್ಲಿ ಇಟ್ಟುಕೊಳ್ಳಿ.
- ಈಗ ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅರ್ಧ ಕಪ್ ನೀರು ಸುರಿಯಿರಿ.
- ಅದಕ್ಕೆ ಅರ್ಧ ಇಂಚಿನ ಗಾತ್ರದಲ್ಲಿ ಕತ್ತರಿಸಿದ ಚಪ್ಪರದ ಅವರೆಕಾಯಿಗಳನ್ನು ಸ್ವಲ್ಪ ಉಪ್ಪು ಮತ್ತು ಅರಿಶಿನ ಸೇರಿಸಿ ಮತ್ತು ಮಿಶ್ರಣ ಮಾಡಿ.
- ನಂತರ ಮುಚ್ಚಳವನ್ನು ಮುಚ್ಚಿ ನೀರು ಆವಿಯಾಗುವವರೆಗೆ ಚಪ್ಪರದ ಅವರೆಕಾಯಿಗಳನ್ನು ಬೇಯಿಸಿ ಬಳಿಕ ಸ್ಟವ್ ಆಫ್ ಮಾಡಿ.
- ಬಳಿಕ ಮಿಕ್ಸಿಂಗ್ ಜಾರ್ನಲ್ಲಿ ಒಂದು ಟೀಸ್ಪೂನ್ ಜೀರಿಗೆ, ಕರಿಮೆಣಸು, ಬೆಳ್ಳುಳ್ಳಿ ಎಸಳು, ಹಸಿ ತೆಂಗಿನಕಾಯಿ ತುಂಡುಗಳನ್ನು ಸೇರಿಸಿ, ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.
- ಇದೀಗ ಕಡಾಯಿಯನ್ನು ಒಲೆಯ ಮೇಲೆ ಇಡಿ. ಎಣ್ಣೆಯನ್ನು ಸೇರಿಸಿ ಹಾಗೂ ಬಿಸಿ ಮಾಡಿ. ನಂತರ ಸಾಸಿವೆ, ಜೀರಿಗೆ, ಕಡಲೆ, ಉದ್ದಿನಬೇಳೆ ಹಾಕಿ ಹುರಿದುಕೊಳ್ಳಿ.
- ಒಗ್ಗರಣೆಗೆ ಹಸಿಮೆಣಸಿನ ಕಾಯಿ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ ಹುರಿದುಕೊಳ್ಳಿ. ಈಗ ಈರುಳ್ಳಿ ಚೂರುಗಳನ್ನು ಹಾಕಿ ಮೃದುವಾಗುವವರೆಗೆ ಹುರಿಯಿರಿ.
- ನಂತರ ರುಚಿಗೆ ತಕ್ಕಷ್ಟು ಅರಿಶಿನ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ. ಈಗ ಬೇಯಿಸಿದ ಚಪ್ಪರದ ಅವರೆ ಕಾಯಿಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.
- ಈ ಪಾತ್ರೆಯ ಮುಚ್ಚಳವನ್ನು ಮುಚ್ಚಿ ಹಾಗೂ 2 ನಿಮಿಷಗಳವರೆಗೆ ಕುದಿಸಿ.
- ಇದಾದ ನಂತರ ರುಬ್ಬಿದ ಒಣ ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ. ಒಂದೆರಡು ನಿಮಿಷಗಳ ಬಳಿಕ ಕೊತ್ತಂಬರಿ ಸೊಪ್ಪು ಅದರ ಮೇಲೆ ಉದುರಿಸಿ ಸ್ಟವ್ ಆಫ್ ಮಾಡಿ.
- ಈಗ ರುಚಿಕರವಾದ ಚಪ್ಪರದ ಅವರೆಕಾಯಿ ಫ್ರೈ ನಿಮ್ಮ ಮುಂದೆ ಸಿದ್ಧವಾಗಿದೆ.
- ನೀವು ಈ ಅಡುಗೆ ಇಷ್ಟವಾದರೆ, ಈ ರೆಸಿಪಿಯನ್ನು ಮನೆಯಲ್ಲೊಮ್ಮೆ ಟ್ರೈ ಮಾಡಿ ನೋಡಿ.