ETV Bharat / lifestyle

'ಅಜವಾನ ರೈಸ್' ತುಂಬಾ ರುಚಿಕರ, ಆರೋಗ್ಯಕ್ಕೂ ಒಳ್ಳೆಯದು.. ಹೀಗೆ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ!

How to Make Ajwain Rice: ಅಜವಾನ ಅಥವಾ ಓಂ ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ. 'ಅಜವಾನ ರೈಸ್' ಸವಿಯಲು ತುಂಬಾ ರುಚಿಕರವಾಗಿರಯತ್ತದೆ. ಅಜವಾನ ರೈಸ್ ಸಿದ್ಧಪಡಿಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

Ajwain RICE  HOW TO PREPARE Ajwain RICE  Ajwain RICE AT HOME  LUNCH BOX SPECIAL Ajwain RICE
ಅಜವಾನ ರೈಸ್ (ETV Bharat)
author img

By ETV Bharat Lifestyle Team

Published : Nov 6, 2024, 6:05 PM IST

How to Make Ajwain Rice in Kannada: ಚಳಿಗಾಲದಲ್ಲಿ ಶೀತ, ಕೆಮ್ಮು ಮತ್ತು ಜ್ವರಕ್ಕೆ ಓಂ ಕಾಳು ಅಥವಾ ಅಜವಾನ ಚೆನ್ನಾಗಿ ಕೆಲಸ ಮಾಡುತ್ತದೆ. ಅಜವಾನದ ಎಲೆಗಳ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಶೀತ ಶಮನವಾಗುತ್ತದೆ. ಕಫದಿಂದ ಬಳಲುತ್ತಿರುವವರು ಎರಡು ಚಿಟಿಕೆಯಷ್ಟು ಅಜವಾನದ ಕಾಳುಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಸೋಸಿದ ನಂತರ ಕುಡಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ. ಅಜವಾನವನ್ನು 'ಮೂಲಿಕೆಗಳ ತಾಯಿ, ಇಂಡಿಯನ್ ಥೈಮ್' ಎಂದೂ ಕರೆಯಲಾಗುತ್ತೆ.

ಹಸಿರು ಬಣ್ಣದ ಅತ್ಯಂತ ಆಕರ್ಷಕವಾಗಿರುವ ಈ ಅಜವಾನದ ಎಲೆಗಳಿಂದ ಹಲವು ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ಅದಕ್ಕಾಗಿಯೇ ಕೆಲವರು ತಮ್ಮ ಮನೆಯ ಆವರಣದಲ್ಲಿ ಈ ಸಸ್ಯವನ್ನು ಬೆಳೆಸುತ್ತಾರೆ. ಅನೇಕ ಜನರು ಅಜವಾನದಿಂದ ಕರಿ, ಉಪ್ಪಿನಕಾಯಿ ಮತ್ತು ರಸಂ ಮಾಡುತ್ತಾರೆ. ಇನ್ನೂ ಕೆಲವು ಜನರು ಬಜ್ಜಿ ಹಿಟ್ಟಿನಲ್ಲಿ ಅಜವಾನದ ಕಾಳುಗಳನ್ನು ಸೇರಿಸುತ್ತಾರೆ. ಅದೇನೇ ಇರಲಿ, ಅಜವಾನವನ್ನು ಪ್ರಮುಖವಾಗಿ ಬಳಸಿಕೊಂಡು ತುಂಬಾ ರುಚಿಯಾದ ರೈಸ್​ ಅನ್ನು ಮಾಡುವುದು ಹೇಗೆಂದು ನೋಡೋಣ.

ಅಜವಾನ ರೈಸ್​ ಮಾಡಲು ಹೆಚ್ಚಿನ ಸಮಯ ಬೇಕಾಗಿಲ್ಲ. ಮಕ್ಕಳಿಗಾಗಿ ಲಂಚ್ ಬಾಕ್ಸ್ ಅನ್ನು ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದು. ಇದಲ್ಲದೆ, ಈ ಅಜವಾನ ರೈಸ್​ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ರೈಸ್​ ಅನ್ನು ತಿಂದರೆ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇನ್ನು ತಡಮಾಡದೆ, ಬಾಯಲ್ಲಿ ನೀರೂರಿಸುವ ಅಜವಾನ ರೈಸ್​ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಇದೀಗ ತಿಳಿದುಕೊಳ್ಳೋಣ.

ಅಜವಾನ ರೈಸ್​ಗೆ ಬೇಕಾಗುವ ಪದಾರ್ಥಗಳೇನು?

  • ಒಂದು ಕಪ್ ಅಕ್ಕಿ
  • ಎಣ್ಣೆ - 1 ಟೀಸ್ಪೂನ್
  • ಬೆಳ್ಳುಳ್ಳಿ ಎಸಳು - 5
  • ಕರಿಮೆಣಸಿನ ಪುಡಿ- ಕಾಲು ಚಮಚ
  • ಅಜವಾನದ ಎಲೆಗಳು - ಹತ್ತು
  • ಕೆಂಪು ಮೆಣಸಿನಕಾಯಿ - 3
  • ಕರಿಬೇವಿನ ಎಲೆಗಳು - 2
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಅರಿಶಿನ ಪುಡಿ- ಸ್ವಲ್ಪ
  • ಉಪ್ಪು - ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ:

  • ಮೊದಲು ಅಜವಾನ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಅವುಗಳನ್ನು ತೆಳುವಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.
  • ಈಗ ಕಡಾಯಿಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ ಮತ್ತು ಫ್ರೈ ಮಾಡಿ. ನಂತರ ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
  • ಈಗ ಸಣ್ಣಗೆ ಕತ್ತರಿಸಿದ ಅಜವಾನದ ಎಲೆಗಳನ್ನು ಹಾಕಿ ಫ್ರೈ ಮಾಡಿ. ಹಸಿ ವಾಸನೆ ಹೋಗುವವರೆಗೆ ಅಜವಾನದ ಎಲೆಗಳನ್ನು ಹುರಿಯಿರಿ.
  • ಈಗ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಮತ್ತು ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ.
  • ನಂತರ ಈ ಒಗ್ಗರಣೆಯಲ್ಲಿ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಮಿಕ್ಸ್ ಮಾಡಿ. ಸ್ಟೌವ್ ಅನ್ನು ಮಧ್ಯಮ ಉರಿಯಲ್ಲಿ ಇರಿಸಿ ಮತ್ತು 5 ನಿಮಿಷ ಕಾಲ ಹಾಗೆ ಬಿಡಿ.
  • ಅದರ ನಂತರ, ಒಲೆ ಆಫ್ ಮಾಡಿದ್ರೆ ಸಾಕು, ಇದೀಗ ಅಜವಾನ ರೈಸ್ ರೆಡಿಯಾಗುತ್ತದೆ. ಈ ರೈಸ್​ ಬಿಸಿ ಇರುವಾಗ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ. ಇಷ್ಟವಾದರೆ ಮನೆಯಲ್ಲಿ ಈ ರೀತಿ ರೈಸ್ ತಯಾರಿಸಿದರೆ, ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ.

ಇವುಗಳನ್ನು ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.