ETV Bharat / lifestyle

ಕೆಲ ಕಾರ್ಯಗಳಿಂದ ಮನೆಯಲ್ಲಿ ಅಶುಚಿತ್ವ: ಮುನ್ನೆಚ್ಚರಿಕೆ ವಹಿಸಿದರೆ ಮೈಮನಕ್ಕೆ ಆರೋಗ್ಯ! - AVOID THESE MISTAKES TO CLEAN HOME

ಕೆಲವೊಂದು ಬಾರಿ ಅರಿವಿಗೆ ಬರದೇ ನಿಮ್ಮ ಕಾರ್ಯಗಳಿಂದ ಮನೆಯಲ್ಲಿ ಅಶುಚಿತ್ವವಾಗಿರುತ್ತದೆ. ತಜ್ಞರು ತಿಳಿಸುವ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮನೆಯನ್ನು ಶುಚಿಗೊಳಿಸಿದರೆ ಆಗಾಗ ಎದುರಾಗುವ ಆರೋಗ್ಯ ಸಮಸ್ಯೆ ದೂರವಾಗಬಹುದು.

HOME CLEAING TIPS  HABITS TO AVOID TO CLEAN HOME  BEST WAYS TO CLEAN HOUSE  HOUSE CLEANING MISTAKE TO AVOID
ಸಾಂದರ್ಭಿಕ ಚಿತ್ರ (Getty Images)
author img

By ETV Bharat Lifestyle Team

Published : Dec 14, 2024, 4:09 PM IST

Avoid these mistakes to Clean Home: ಮನೆ ಸ್ವಚ್ಛವಾಗಿದ್ದರೆ ಮಾತ್ರ ನಮ್ಮ ಮನಸ್ಸು ದೇಹವು ಆರೋಗ್ಯವಾಗಿರುತ್ತದೆ. ಇದರಿಂದಲೇ ಮಹಿಳೆಯರು ಮನೆಯನ್ನು ಶುಚಿಗೊಳಿಸುವುದು ಹಾಗೂ ಕಾಲಕಾಲಕ್ಕೆ ಧೂಳು ತೆಗೆಯುವುದು ಸೇರಿದಂತೆ ಕಾರ್ಯಗಳನ್ನು ಮಾಡುತ್ತಾರೆ. ತಜ್ಞರು ಹೇಳುವ ಪ್ರಕಾರ, ನಾವು ದಿನನಿತ್ಯ ಮಾಡುವ ಕೆಲವೊಂದು ಕೆಲಸಗಳು.. ನಮಗೇ ತಿಳಿಯದಂತೆ ನಮ್ಮ ಮನೆಯನ್ನು ಮಲಿನಗೊಳಿಸುತ್ತವೆ. ನಮ್ಮ ಆರೋಗ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಗಳು ಹೆಚ್ಚುತ್ತಿವೆ. ಹಾಗಾದರೆ, ಆ ಕಾರ್ಯವೇನು? ಅವರು ಮನೆಯನ್ನು ಹೇಗೆ ಮಾಲಿನ್ಯಗೊಳಿಸುತ್ತಾರೆ? ಇದೀಗ ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಗಮನಹರಿಸೋಣ.

ರತ್ನಗಂಬಳಿಗಳು, ರಗ್‌ಗಳು: ಆಕರ್ಷಕ ಬಣ್ಣಗಳು ಮತ್ತು ವಿಭಿನ್ನ ವಿನ್ಯಾಸಗಳ ಕಾರ್ಪೆಟ್‌ಗಳು, ರಗ್‌ಗಳು ಲಿವಿಂಗ್ ರೂಮ್ ಮತ್ತು ಹಾಲ್‌ಗೆ ಹೆಚ್ಚಿನ ಸೌಂದರ್ಯವನ್ನು ನೀಡುತ್ತವೆ. ಹಾಗಾಗಿಯೇ ಈಗ ಪ್ರತಿ ಮನೆಯಲ್ಲೂ ಇವುಗಳ ಬಳಕೆ ಹೆಚ್ಚಾಗಿದೆ. ಆದರೆ, ಈ ಸೌಂದರ್ಯ ಮತ್ತು ಆಕರ್ಷಣೆಯ ಹಿಂದೆ ಮನೆಯನ್ನು ಕಲುಷಿತಗೊಳಿಸುವ ಅಪಾಯಕಾರಿ ಅನಿಲಗಳಿವೆ ಎಂದು ತಜ್ಞರು ತಿಳಿಸುತ್ತಾರೆ.

ಕೆಲವು ಬಗೆಯ ರತ್ನಗಂಬಳಿಗಳು ಮತ್ತು ರಗ್‌ಗಳು ಹಾನಿಕಾರಕ ಸಂಯುಕ್ತಗಳಿಂದ ಮಾಡಲ್ಪಟ್ಟಿರುವುದರಿಂದ, ಅವು ಹೊರಸೂಸುವ ಕಟುವಾದ ವಾಸನೆ ಮತ್ತು ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಲ್ಲದೇ ಇವುಗಳನ್ನು ಶುಚಿಗೊಳಿಸದೆ ಹೆಚ್ಚು ದಿನ ಬಳಸಿದರೆ ಇವುಗಳ ಮೇಲೆ ಶೇಖರಣೆಯಾಗುವ ಧೂಳು ನಮ್ಮ ಉಸಿರಾಟದ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಹಾಗಾಗಿ ಇಂತಹ ಕೆಮಿಕಲ್ ರಗ್ಗುಗಳ ಬದಲಿಗೆ ಸೆಣಬು, ಖಾಟನ್ ಕಂಬಳಿ, ಕೈಯಿಂದ ನೇಯ್ದ ರಗ್ಗು, ರತ್ನಗಂಬಳಿಗಳನ್ನು ಬಳಸಿದರೆ ತುಂಬಾ ಒಳ್ಳೆಯದು. ಇದರಿಂದ ಯಾವುದೇ ಅಪಾಯವಿಲ್ಲ. ಇವುಗಳನ್ನು ಕೂಡ ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸುವುದು ಸುಲಭ ಎಂದು ಅವರು ವಿವರಿಸುತ್ತಾರೆ.

ವಿಷಕಾರಿ ಅನಿಲಗಳು: ಮನೆಯಲ್ಲಿರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಏರ್ ಫ್ರೆಶ್ನರ್, ಪರಿಮಳಯುಕ್ತ ಕ್ಯಾಂಡಲ್ ಇತ್ಯಾದಿಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆದರೆ ಇವುಗಳಿಂದ ಬಿಡುಗಡೆಯಾಗುವ ಸುವಾಸನೆಯು ಮನಸ್ಸಿಗೆ ಆಹ್ಲಾದಕರವಾಗಿದ್ದರೂ, ಅವುಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳು ಅಸ್ತಮಾ ಸೇರಿದಂತೆ ಇತರ ಉಸಿರಾಟದ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುವ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುವತ್ತದೆ.

ಇವುಗಳ ಬದಲಿಗೆ ನ್ಯಾಫ್ತಲೀನ್ ಬಾಲ್​ಗಳನ್ನು ಅಲ್ಲೊಂದು ಇಲ್ಲೊಂದು ಇಡಬೇಕು. ಸಾರಭೂತ ತೈಲಗಳಿಂದ ಮಾಡಿದ ಮೇಣದ ಬತ್ತಿಗಳನ್ನು ಹಚ್ಚಿ, ಕೆಟ್ಟ ವಾಸನೆ ಇರುವಲ್ಲಿ ಅಡುಗೆ ಸೋಡಾ-ವಿನೆಗರ್ ಸಿಂಪಡಿಸಿ, ಜೊತೆಗೆ ಮನೆಯಲ್ಲಿ ರೋಸ್ಮರಿ, ಮಲ್ಲಿಗೆ-ಲ್ಯಾವೆಂಡರ್-ಪುದೀನಾ ಮುಂತಾದ ಸುವಾಸನೆಯ ಗಿಡಗಳನ್ನು ಬೆಳೆಸಬಹುದು.

ಹೀಟರ್‌ಗಳ ಬದಲಿಗೆ ಪರ್ಯಾಯ ಮಾರ್ಗ ಅನುಸರಿಸಿ: ಚಳಿಗಾಲದಲ್ಲಿ ಕೋಣೆಯನ್ನು ಬೆಚ್ಚಗಿಡಲು ಅನೇಕ ಜನರು ಎಲೆಕ್ಟ್ರಿಕ್ ಹೀಟರ್‌ಗಳು ಸೇರಿದಂತೆ ಇತ್ಯಾದಿಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ, ಇವುಗಳಿಂದ ಹೊರಸೂಸುವ ಅನಿಲಗಳು ಹಾಗೂ ಹೊಗೆಯು ಮನೆಯನ್ನೂ ಕಲುಷಿತಗೊಳಿಸುತ್ತದೆ. ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ. ಈ ಶಾಖವು ಕೋಣೆಯಲ್ಲಿನ ತೇವಾಂಶವನ್ನು ಕಡಿಮೆ ಮಾಡುತ್ತದೆ. ವಾತಾವರಣವನ್ನು ಶುಷ್ಕಗೊಳಿಸುತ್ತದೆ. ಇದರಿಂದಾಗಿ ಚರ್ಮದ ಅಲರ್ಜಿಗಳು ಮತ್ತು ಕಣ್ಣಿನ ಸೋಂಕು ಕಂಡುಬರುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ನೈಸರ್ಗಿಕ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ.

ಸೋಫಾ-ಬೆಡ್‌ನಲ್ಲಿ ವೆಲ್ವೆಟ್ ಕವರ್‌ಗಳು-ಬೆಡ್‌ಶೀಟ್‌ಗಳನ್ನು ಹಾಕಲು ಸಲಹೆ ನೀಡಲಾಗುತ್ತದೆ. ದಪ್ಪ ಪರದೆಗಳನ್ನು ನೇತುಹಾಕಿ, ಬೆಳಗ್ಗೆ ಬೇಗನೆ ಕಿಟಕಿಗಳನ್ನು ತೆರೆಯಿರಿ ಹಾಗೂ ಸೂರ್ಯ ಕಿರಣಗಳು ಮನೆಯೊಳಗೆ ಬೀಳುವಂತೆ ಮಾಡಬೇಕಾಗುತ್ತದೆ.

ನೀವು ಸುಗಂಧ ದ್ರವ್ಯ ಬಳಸುತ್ತೀರಾ? ಹೆಚ್ಚಿನ ಜನರು ತಮ್ಮ ಸೌಂದರ್ಯದ ಆರೈಕೆಯಲ್ಲಿ ಮೇಕಪ್, ಲೋಷನ್, ಪರ್ಫ್ಯೂಮ್, ಹೇರ್ ಸ್ಪ್ರೇ ಇತ್ಯಾದಿಗಳನ್ನು ಹೊಂದಿರುತ್ತಾರೆ. ಆದರೆ, ಇವುಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ, ಮನೆಯ ವಾತಾವರಣವನ್ನೂ ಕಲುಷಿತಗೊಳಿಸುತ್ತವೆ. ಹೀಗಾಗಿ ಈ ತಪ್ಪನ್ನು ಮಾಡದೆ ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸಿದ ಸ್ಕ್ರಬ್, ಫೇಸ್ ಮಾಸ್ಕ್, ಲೆಮೊನ್​ಗ್ರಾ ಶಾಂಪೂ, ಸುಗಂಧ ದ್ರವ್ಯಕ್ಕೆ ಸಾರಭೂತ ತೈಲಗಳನ್ನು ಬಳಸುವುದು ಉತ್ತಮ.

ಸಾಕುಪ್ರಾಣಿಗಳು ಸ್ವಚ್ಛವಾಗಿರಲಿ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಕುಟುಂಬದ ಭಾಗವಾಗಿ ಸಾಕುಪ್ರಾಣಿಗಳನ್ನು ನೋಡುತ್ತಿದ್ದಾರೆ. ಆದರೆ ಇವುಗಳನ್ನು ಬೆಳೆಸುವುದು ಮಾತ್ರವಲ್ಲ, ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಮುಖ್ಯ. ಇಲ್ಲವಾದರೆ ಮನೆಯಲ್ಲಿ ನೆಲ, ಸೋಫಾ ಕವರ್, ಬೆಡ್ ಶೀಟ್ ಇತ್ಯಾದಿಗಳ ಮೇಲೆ ಧೂಳು, ರೋಗಾಣುಗಳು ಶೇಖರಣೆಯಾಗುತ್ತವೆ. ಮನೆಯನ್ನು ಅಶುಚಿಯಾಗುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾಗಿ ಪ್ರತಿದಿನ ಸ್ನಾನ ಮಾಡಬೇಕು, ಸಾಕುಪ್ರಾಣಿಗಳಿಗೂ ಆಗಾಗ ಸ್ನಾನ ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ.

ಇದನ್ನೂ ಓದಿ: ಮನೆ ಕ್ಲೀನ್ ಮಾಡಬೇಕಾ?: ಈ ನಿಯಮ ಪಾಲಿಸಿದರೆ ಕ್ಲೀನ್​ ಮಾಡೋದು ತುಂಬಾ ಸರಳ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.