ETV Bharat / lifestyle

ಶಿಲೆಗಳಲ್ಲಿ ಕಲೆ ಅರಳಿಸುವ ಪ್ರತಿಭೆ: ದಾಖಲೆ ಪುಟ ಸೇರಿದ ಯುವತಿ - BRINGS STONES TO LIFE

ಕ್ರಿಯಾತ್ಮಕತೆ ಮನಸ್ಸು, ವಿಶಿಷ್ಟ ದೃಷ್ಟಿಕೋನ, ಅದ್ಭುತ ಪ್ರತಿಭೆ ಇದ್ದರೆ ಕಲ್ಲಿಗೂ ಒಂದು ಬೆಲೆ ಇದೆ ಎಂಬುದನ್ನು ತೋರಿಸಿದ್ದಾರೆ ಅಸ್ಸೋಂನ ಬಾಲಕಿ. ಆಕೆಯ ವಿಶಿಷ್ಟ ಚಿತ್ರಕಲೆಯ ಕುರಿತ ಸ್ಟೋರಿ ಇಲ್ಲಿದೆ.

Dibrugarh Girl name in India Book of Records with her Stone work
ಶಿಲೆಗಳಲ್ಲಿ ಕಲೆ ಅರಳಿಸುವ ಯುವತಿ (ETV Bharat)
author img

By ETV Bharat Karnataka Team

Published : Dec 5, 2024, 4:05 PM IST

ಮೊರನ್ (ಅಸ್ಸೋಂ)​: ನದಿ-ಸಾಗರ ತೀರ, ರಸ್ತೆ ಬದಿ, ಅಥವಾ ಮನೆಯ ಸುತ್ತಮುತ್ತ ಕಾಣುವ ಬೆಣಚುಕಲ್ಲಿನ ಮೌಲ್ಯ ಎಷ್ಟಿರುತ್ತದೆ ಎಂಬುದನ್ನು ನಾವು ಅನೇಕ ಬಾರಿ ಅಂದಾಜಿಸಿರುವುದಿಲ್ಲ. ಆದರೆ, ಈ ನಿರ್ಲಕ್ಷ್ಯಿಸಿದ ಈ ಬೆಣಚುಕಲ್ಲಿಗೆ ತಮ್ಮ ಕಲೆಯ ಮೂಲಕವೇ ಅಂದದ ಜೊತೆಗೆ ಅದರ ಮೌಲ್ಯವನ್ನು ಹೆಚ್ಚಿಸಿದ್ದಾರೆ ಅಸ್ಸೋಂನ ಯುವತಿ. ಕ್ರಿಯಾತ್ಮಕ ಚಟುವಟಿಕೆ, ವಿಶಿಷ್ಟ ದೃಷ್ಟಿಕೋನ, ಅದ್ಭುತ ಕಲೆ ಇದ್ದರೆ ಕಲ್ಲಿಗೂ ಒಂದು ಬೆಲೆ ಇದೆ ಎಂಬುದನ್ನು ತೋರಿಸಿದ್ದಾರೆ ಯುವತಿ ಅಂಕನಾ ಮಹತ್ತಾ.

ಹೊಸ ದೃಷ್ಟಿ: ನದಿ ತೀರದಲ್ಲಿ ಹೆಚ್ಚಾಗಿ ಸಿಗುವ ನುಣುಪು ಕಲ್ಲುಗಳಲ್ಲಿ ಬಣ್ಣದ ಕುಂಚಗಳಲ್ಲಿ ಮೋಡಿ ಮಾಡಿದ್ದಾರೆ ಇವರು. ತಮ್ಮ ಸೃಜನಶೀಲತೆ ಹೊಸ ಒರೆಗೆ ಹಚ್ಚುವ ಈ ಯುವತಿಯ ಕಾರ್ಯ ಇದೀಗ ಎಲ್ಲರ ಮೆಚ್ಚುಗೆ ಪಡೆಯುವುದು ಮಾತ್ರವಲ್ಲ, ಇಂಡಿಯಾ ಬುಕ್​ ದಾಖಲೆಯ ಪುಟವನ್ನು ಸಹ ಸೇರಿದೆ.

Dibrugarh Girl name in India Book of Records with her Stone work
ಅಂಕನಾ ಮಹತ್ತಾ ಕುಂಚದಲ್ಲಿ ಅರಳಿದ ಕಲೆ (ETV Bharat)

ಕಲ್ಲಿನಲ್ಲಿ ಅರಳಿದ ಕಲೆ (ETV Bharat)

ದಾಖಲೆ ಪುಟ ಸೇರಿದ ಕಲಾವಿದೆ: ದಿಬ್ರುಗಢ್ ಜಿಲ್ಲೆಯ ಬಮುನ್‌ಬರಿಯ ಕೊಯ್ಲಗೋರಾ ಗ್ರಾಮದ ಮೂಲದ ಅಂಕನಾ ಮಹತ್ತಾ ಸಣ್ಣ ಬೆಣಚು ಕಲ್ಲುಗಗಳ ಮೇಲೆ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ಅರಳಿಸಿ ಈ ದಾಖಲೆ ಮಾಡಿದ್ದಾರೆ. ಇದಕ್ಕೆ ಮೊದಲು ಐಬಿಆರ್​ ಸಾಧಕಿ ಎಂದು ಗುರುತಿಸಿಕೊಂಡಿದ್ದಾರೆ. ನದಿ ದಡದಲ್ಲಿ ಸಾಮಾನ್ಯವಾಗಿ ಸಿಗುವ ಈ ಕಲ್ಲಿನ ಮೇಲೆ ಅಕ್ರಿಲಿಕ್​ ಬಣ್ಣಗಳ ಮೂಲಕ ಹೊಸ ಜೀವ ನೀಡಿದ್ದಾರೆ.

ಅಂಕನಾ ಮಹತ್ತಾ ಕಲೆ (ETV Bharat)

ಶಿಕ್ಷಕಿ ಪೋನಾ ಮಹತ್ತಾ ಮತ್ತು ಅಂಗನವಾಡಿ ಕಾರ್ಯಕರ್ತೆ ಮೀನಾ ಚುಟಿಯಾ ದಂಪತಿಯ ಮಗಳಾದ ಮಹತ್ತಾ, ರಸ್ತೆ ಬದಿಯಲ್ಲಿ ಕಾಣುವ ಸಣ್ಣ ಚಪ್ಪಟೆಯ ಕಲ್ಲನ್ನು ಸಂಗ್ರಹಿಸಿ, ಅದರ ಮೇಲೆ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ ಚಂದ್ರ ಬೋಸ್, ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಶ್ರೀಮಂತ ಶಂಕರದೇವ್, ಭೂಪೇನ್ ಹಜಾರಿಕಾ, ಲತಾ ಮಂಗೇಶ್ಕರ್ ಅವರಂತಹ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸಿ, ಗಮನ ಸೆಳೆದಿದ್ದಾರೆ.

ಅಂಕನಾ ಮಹತ್ತಾ ಮೂಡಿಸಿದ ಚಿತ್ರ (ETV Bharat)

ಇಷ್ಟವಾದ ಕೆಲಸದಲ್ಲಿ ಸಂತಸ: ಕುಂಚದ ಕಲೆ ಎಂದರೆ ನನಗೆ ಇಷ್ಟ ಎನ್ನುವ ಅಂಕಿತಾ, ಇದರಲ್ಲೇ ನಾವೀನ್ಯತೆ ನೀಡುವ ಮೂಲಕ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ. ನನಗೆ ಇಷ್ಟವಾದ ಕೆಲಸವನ್ನು ನಾನು ಮಾಡಲು ಇಚ್ಛಿಸುತ್ತಿದ್ದೇವೆ. ನಾನು ಸಣ್ಣವಳಿದ್ದಾಗ ಹಕ್ಕಿಗಳ ಚಿತ್ರದಿಂದ ಪ್ರೇರೇಪಣೆ ಪಡೆದು, ಪೈಂಟಿಂಗ್​​ ಮಾಡಲು ಶುರು ಮಾಡಿದೆ. ಇದೇ ಕಾರಣದಿಂದ ಆರ್ಟ್​ ಶಾಲೆಗೆ ಸೇರಿದ್ದು, ಅಲ್ಲಿ ಚಿತ್ರ ಬರೆಯುವುದನ್ನು ಕಲಿತೆ. ಆದರೆ, ಕೆಲವು ಆರ್ಥಿಕ ಸಮಸ್ಯೆಯಿಂದಾಗಿ ಅದನ್ನು ಮುಂದುವರೆಸಲಾಗಲಿಲ್ಲ. ಆದರೆ, ನನ್ನ ಫ್ಯಾಷನ್​ ಮುಂದುವರೆಸಿದೆ. ಇದಕ್ಕೆ ಮನೆಯವರಿಂದಲೂ ಸದಾ ಬೆಂಬಲ ಸಿಕ್ಕಿತು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಾದ ಬಳಿಕ ಮತ್ತಷ್ಟು ಹೊಸ ಉತ್ಸಾಹ ಬಂದಿದ್ದು, ಏನಾದರೂ ಮಾಡಬೇಕು ಎಂಬ ಹಂಬಲವಿದೆ ಎನ್ನುತ್ತಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಗೀತಾ ಮಹೋತ್ಸವ: ಗಮನ ಸೆಳೆಯುತ್ತಿರುವ ಮಹಿಳೆಯ ಪಂಚಗವ್ಯ ಉತ್ಪನ್ನಗಳ ಮಳಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.