ETV Bharat / lifestyle

ದಸರಾ ಸ್ಪೆಷಲ್ 'ಬಟರ್​ ಚಕ್ಲಿ': ಈ ಟಿಪ್ಸ್​ ಅನುಸರಿಸಿ ಕ್ರಿಸ್ಪಿ ಚಕ್ಲಿ ಸಿದ್ಧಪಡಿಸಿದರೆ ತುಂಬಾ ರುಚಿಕರ! - DASARA SPECIAL CHAKLI RECIPE

ಅಕ್ಕಿಯಿಂದ ಮಾಡಿದ ಬಟರ್​ ಚಕ್ಲಿಗಳೆಂದರೆ, ಮಕ್ಕಳಿಂದ ದೊಡ್ಡವರವರೆಗೆ ಅನೇಕ ಜನರು ಇಷ್ಟಪಡುತ್ತಾರೆ. ಸಖತ್​ ಟೇಸ್ಟಿಯಾಗಿ ಚಕ್ಲಿ ಮಾಡುವುದು ಹೇಗೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ನೀವು ಕೆಲವು ಟಿಪ್ಸ್​ ಅನುಸರಿಸಿದರೆ ತುಂಬಾ ರುಚಿಕರವಾಗಿ ಸಿದ್ಧಪಡಿಸಬಹುದು.

Chakli Recipe IN Kannada  HOW TO PREPARE Chakli IN Kannada  Chakli PREPARATION IN Kannada  HOW TO MAKE RICE FLOUR Chakli
ಬಟರ್​ ಚಕ್ಲಿ (ETV Bharat)
author img

By ETV Bharat Lifestyle Team

Published : Oct 8, 2024, 2:29 PM IST

Dasara special Chakli Recipe: ದಸರಾ ಮತ್ತು ದೀಪಾವಳಿಯ ಹಬ್ಬದಲ್ಲಿ ವಿವಿಧ ಬಗೆಯ ಕುರುಕಲು ತಿಂಡಿಗಳನ್ನು ರೆಡಿ ಮಾಡಿ ಇಡುತ್ತಾರೆ. ಹಬ್ಬದ ಸಮಯದಲ್ಲಿ ಮಾಡುವ ಪ್ರಮುಖ ತಿಂಡಿಗಳಲ್ಲಿ ಅಕ್ಕಿಯಿಂದ ಮಾಡಿದ ಬಟರ್​ ಚಕ್ಲಿ ಒಂದು. ಹಬ್ಬ ಹರಿದಿನಗಳಲ್ಲದೆ, ಶುಭ ಸಮಾರಂಭಗಳಲ್ಲಿ ಮತ್ತು ಮನೆಯಲ್ಲಿ ತಿನ್ನಲು ಏನೂ ಇಲ್ಲದಿದ್ದಾಗ ಈ ಚಕ್ಲಿ ತಯಾರಿಸುತ್ತಾರೆ. ಅಕ್ಕಿ ಹಿಟ್ಟಿನಿಂದ ಚಕ್ಲಿಗಳನ್ನು ತಯಾರಿಸಿದಾಗ ಅವು ಗಟ್ಟಿಯಾಗಿರುತ್ತವೆ ಎಂದು ಕೆಲವರು ದೂರುತ್ತಾರೆ. ಅಂತಹ ಜನರು ಈ ಟಿಪ್ಸ್​ಗಳನ್ನು ಅನುಸರಿಸಿ ಚಕ್ಲಿ ತಯಾರು ಮಾಡಿದರೆ, ಇವುಗಳು ಗರಿಗರಿಯಾಗಿರುತ್ತವೆ. ಮತ್ತೇಕೆ ತಡ ಈಗಲೇ ಸೂಪರ್ ಟೇಸ್ಟಿಯಾದ ಅಕ್ಕಿ ಹಿಟ್ಟಿನ ಚಕ್ಲಿಗಳನ್ನು ಹೇಗೆ ಮಾಡಬೇಕೆಂದು ಕಲಿಯೋಣ.

ಚಕ್ಲಿ ತಯಾರಿಸಲು ಬೇಕಾಗುವ ಪದಾರ್ಥಗಳೇನು?:

  • ಕಾಲು (1/4 ಪ್ರಮಾಣ) ಕಪ್ ಕಡಲೆ
  • ಕಾಲು ಕಪ್ ಉದ್ದಿನ ಬೇಳೆ
  • ಕಾಲು ಕಪ್ ಹೆಸರು ಬೇಳೆ
  • ನಾಲ್ಕು ಕಪ್ ಅಕ್ಕಿ ಹಿಟ್ಟು
  • ಒಂದು ಚಮಚ ಅಜವಾನ್
  • ಎಳ್ಳು 3 ಟೀಸ್ಪೂನ್
  • ರುಚಿಗೆ ತಕ್ಕಷ್ಟು ಖಾರದ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು
  • ಕಾಲು ಕಪ್ ಬೆಣ್ಣೆ

ತಯಾರಿಸುವ ವಿಧಾನ:

  • ಮೊದಲು ಸ್ಟೌ ಆನ್ ಮಾಡಿ ಒಂದು ಪಾತ್ರೆಯಲ್ಲಿ ಕಡಲೆ ಬೇಳೆ, ಉದ್ದಿನ ಬೇಳೆ ಮತ್ತು ಹೆಸರಿನ ಬೇಳೆಯನ್ನು ಒಂದರ ನಂತರ ಒಂದರಂತೆ ಹಾಕಿ ಹುರಿಯಿರಿ. (ಮಧ್ಯಮ ಉರಿಯಲ್ಲಿ ಹುರಿಯಿರಿ.)
  • ಅದರ ನಂತರ, ಅವುಗಳನ್ನು ತಣ್ಣಗಾಗಿಸಿ ಮತ್ತು ಮಿಕ್ಸರ್​​ ಜಾರ್​ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಜರಡಿ ಹಿಡಿಯಿರಿ. ಜರಡಿ ಹಿಡಿದಿದ್ದನ್ನು ಮತ್ತೆ ಮಿಕ್ಸರ್​ಗೆ ಹಾಕಿಕೊಳ್ಳಿ.
  • ಈಗ ರುಬ್ಬಿದ ಹಿಟ್ಟು ಅನ್ನು ಜರಡಿ ಹಿಡಿದ ಅಕ್ಕಿ ಹಿಟ್ಟು, ಅಜವಾನ, ಎಳ್ಳು, ಖಾರದ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಅದರ ನಂತರ ಸ್ವಲ್ಪ ಬೆಣ್ಣೆ ಅಥವಾ ಬಿಸಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ಉಗುರುಬೆಚ್ಚನೆಯ ನೀರನ್ನು ತೆಗೆದುಕೊಂಡು ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಮಿಶ್ರಣ ಮಾಡಿ. (ತುಂಬಾ ಮೆತ್ತಗೆ, ಗಟ್ಟಿಯಾಗಿರದೆ ಸ್ವಲ್ಪ ಮೃದುವಾಗಿರುವಂತೆ ಕಲಸಿದರೆ ಸಾಕು)
  • ಮತ್ತೊಂದೆಡೆ, ಒಲೆ ಆನ್ ಮಾಡಿ ಮತ್ತು ಕಡಾಯಿಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಸುರಿಯಿರಿ ಮತ್ತು ಅದನ್ನು ಚೆನ್ನಾಗಿ ಬಿಸಿ ಮಾಡಿ.
  • ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ ಚಕ್ಲಿ ತಯಾರಿಸುವ ಮಣೆಯಲ್ಲಿ ಹಿಟ್ಟು ಹಾಕಿ ಪ್ರೆಸ್​ ಮಾಡಿ ಎಣ್ಣೆಯಲ್ಲಿ ಬಿಡಿ.
  • ಹಸಿ ಹೋಗುವವರೆಗೆ ಬೇಯಲು ಬಿಡಿ.. ನಂತರ ಇನ್ನೊಂದು ಬದಿಗೆ ತಿರುಗಿಸಿ ಬೇಯಿಸಿ. (ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಇದರಿಂದ ಚಕ್ಲಿಗಳು ಗರಿಗರಿಯಾಗುತ್ತವೆ)
  • ಎರಡೂ ಬದಿಗಳನ್ನು ಹುರಿದ ನಂತರ, ಬೌಲ್ ಅನ್ನು ತೆಗೆದುಕೊಂಡು ಅದರಲ್ಲಿ ಗರಿಗರಿಯಾದ ಬಟರ್​ ಚಕ್ಲಿಗಳನ್ನು ಹಾಕಿ ಇಟ್ಟುಕೊಳ್ಳಿ. ಇವುಗಳನ್ನು ಡಟ್ಟಿಯಲ್ಲಿಟ್ಟರೆ ಹಲವಾರು ದಿನಗಳವರೆಗೆ ಸಂಗ್ರಹಿಸಬಹುದು.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.