ಹೈದರಾಬಾದ್: ಗಾಜಾದಲ್ಲಿ ನಡೆಯುತ್ತಿರುವ ಯುದ್ಧವು ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಅಲ್ಲದೇ ಇಲ್ಲಿ ಲಿಂಗ ಅಸಮಾನತೆ ಬಿಕ್ಕಟ್ಟು ಎದುರಾಗಿದೆ. ಈ ಸಂಬಂಧ ವಿಶ್ವಸಂಸ್ಥೆ ಎಚ್ಚರಿಸಿದೆ.
'ಜೆಂಡರ್ ಆಲರ್ಟ್: ದಿ ಜೆಂಡರ್ ಇಂಪಾಕ್ಟ್ ಆಫ್ ದಿ ಕ್ರೈಸಿಸ್ ಇನ್ ಗಾಜಾ' (ಲಿಂಗ ತಾರತಮ್ಯದ ಎಚ್ಚರಿಕೆ: ಗಾಜಾದಲ್ಲಿನ ಬಿಕ್ಕಟ್ಟಿನ ಲಿಂಗದ ಪ್ರಭಾವ) ಕುರಿತು ಮಾತನಾಡಿರುವ ವಿಶ್ವಸಂಸ್ಥೆ, ಗಾಜಾದಲ್ಲಿ 24,620 ಪ್ಯಾಲೆಸ್ತೇನಿಯರನ್ನು ಕೊಲ್ಲಲಾಗಿದೆ. ಇದರಲ್ಲಿ 16 ಸಾವಿರ ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದಿದೆ.
ಕಳೆದ 15 ವರ್ಷದಿಂದ ಕೊಲ್ಲಲ್ಪಟ್ಟ ಜನಸಂಖ್ಯೆಗೆ ಹೋಲಿಕೆ ಮಾಡಿದಾಗ ಈ ಯುದ್ಧದ ಸಾವಿನ ಪ್ರಮಾಣ ಮೂರು ಪಟ್ಟು ಹೆಚ್ಚಿದೆ. ಇದು ಜನಸಂಖ್ಯಾ ಶೇಕಡಾವಾರನ್ನು ಬದಲಾಯಿಸಿದೆ. ಗಾಜಾದಲ್ಲಿ ಇಂದು ಶೇ 70ರಷ್ಟು ಮಹಿಳೆಯರು ಮತ್ತು ಮಕ್ಕಳು ಕೊಲ್ಲಲ್ಪಡುತ್ತಿದ್ದಾರೆ. ಮತ್ತೊಂದು ಆತಂಕಕಾರಿ ಮಾಹಿತಿ ಎಂದರೆ, ಪ್ರತಿ ಗಂಟೆಗೆ ಇಬ್ಬರು ತಾಯಂದಿರು ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಯುದ್ಧದಲ್ಲಿ ಸಾವನ್ನಪ್ಪುತ್ತಿರುವ ಮೊದಲ ಸಂತ್ರಸ್ತರು ಎಂದರೆ ತಾಯಿ ಮತ್ತು ಮಕ್ಕಳು ಎಂಬುದನ್ನು ನಾವು ಸಾಕ್ಷಿ ಸಮೇತ ಕಂಡಿದ್ದೇವೆ. ನಾವು ವಿಫಲಗೊಳ್ಳುತ್ತಿದ್ದೇವೆ. ಈ ಪೀಳಿಗೆಯ ಆಘಾತ ಮತ್ತು ಎಣಿಕೆಯು ಮುಂದಿನ ತಲೆಮಾರಿನಲ್ಲಿ ನಮ್ಮನ್ನು ಕಾಡಲಿದೆ ಎಂದು ವಿಶ್ವಸಂಸ್ಥೆಯ ಮಹಿಳಾ ಕಾರ್ಯದರ್ಶಿ ನಿರ್ದೇಶಕಿ ಸಿಮಾ ಬಹೋದ್ ತಿಳಿಸಿದ್ದಾರೆ.
ಗಾಜಾದ ಮಹಿಳೆಯರಿಗೆ ಮೂಲಭೂತ ರಕ್ಷಣೆಯ ಬಿಕ್ಕಟ್ಟನ್ನು ಎದುರಿಸುವಂತೆ ಮಾಡಿದೆ. ಸ್ಥಳಾಂತರಗೊಂಡ 1.9 ಮಿಲಿಯನ್ ಜನರಲ್ಲಿ 1 ಮಿಲಿಯನ್ನಷ್ಟು ಮಹಿಳೆಯರು ಮತ್ತು ಬಾಲಕಿಯರು ಆಶ್ರಯತಾಣದಲ್ಲಿದ್ದಾರೆ. ಆದರೂ ಗಾಜಾದಲ್ಲೂ ಎಲ್ಲಿಯೂ ಸುರಕ್ಷಿತ ಸ್ಥಳವಿಲ್ಲ. ಸ್ಥಳಾಂತರವನ್ನು ಯಾವಾಗ ಮತ್ತು ಹೇಗೆ ಮಾಡಬೇಕು ಎಂಬ ಅಸಾಧ್ಯ ನಿರ್ಧಾರ ನಡೆಸೇಕಿದೆ. ಈ ವೇಳೆ ಅವರು ದಾಳಿ ಮತ್ತು ದೌರ್ಜನ್ಯ ಸೇರಿದಂತೆ ಲಿಂಗದ ಅಪಾಯವನ್ನು ಅನುಭವಿಸುತ್ತಿದ್ದಾರೆ.
ವಿಶ್ವಸಂಸ್ಥೆ ಇತ್ತೀಚಿಗೆ ಅಂದಾಜಿಸಿದಂತೆ, 3 ಸಾವಿರ ಮಹಿಳೆಯರು ವಿಧವೆಯಾರಾಗಿದ್ದು, ಅವರೇ ಸುರಕ್ಷತೆ ಮತ್ತು ಆಹಾರ ಸಹಾಯದೊಂದಿಗೆ ಮನೆಯ ಮುಖ್ಯಸ್ಥರಾಗಿದ್ದಾರೆ. ಕನಿಷ್ಠ 10 ಸಾವಿರ ಮಕ್ಕಳು ತಮ್ಮ ತಂದೆಯಂದಿರನ್ನು ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಬಾಲ್ಯವಿವಾಹದಂತಹ ಕಾರ್ಯ ವಿಧಾನವನ್ನು ಆಶ್ರಯಿಸುತ್ತಿದ್ದಾರೆ.
ಇದೆಲ್ಲದರ ನಡುವೆ ಮಹಿಳಾ ನೇತೃತ್ವದ ಮತ್ತು ಮಹಿಳಾ ಹಕ್ಕುಗಳ ಸಂಘಟನೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಗಾಜಾ ಪಟ್ಟಿಯಲ್ಲಿ ಸಮೀಕ್ಷೆ ನಡೆಸಿದಂತೆ ಶೇ 83 ರಷ್ಟು ಮಹಿಳಾ ಸಂಸ್ಥೆಗಳು ತುರ್ತು ಪ್ರತಿಕ್ರಿಯೆ ಮೇಲೆ ಗಮನ ಕೇಂದ್ರಿಕರಿಸಿದೆ.
ಪ್ಯಾಲೆಸ್ಟನ್ನಲ್ಲಿರುವ ವಿಶ್ವಸಂಸ್ಥೆಯು ಮಹಿಳಾ ಗುಂಪುಗಳು ಕುಟುಂಬಗಳಿಗೆ ತುರ್ತು ಆಹಾರ ಸಹಾಯವನ್ನು ನೀಡುವ ಮೂಲಕ ಜೀವ ಉಳಿಸಲು ಸಹಾಯ ಮಾಡುತ್ತಿದೆ. ಬಟ್ಟೆ, ಸ್ಯಾನಿಟರಿ ಉತ್ಪನ್ನ ಮತ್ತು ಮಕ್ಕಳ ಆಹಾರಗಳನ್ನು ಒದಗಿಸುತ್ತಿದೆ. (ಐಎಎನ್ಎಸ್)
ಇದನ್ನೂ ಓದಿ: ಹಮಾಸ್ ವಶದಲ್ಲಿರುವ ಇಸ್ರೇಲಿ ಮಗುವಿಗೆ ಮೊದಲ ಬರ್ತ್‌ಡೇ; ಬಿಡುಗಡೆಗೆ ಪ್ರಾರ್ಥನೆ