ETV Bharat / international

ಅಮೆರಿಕದ ವನ್ಯಜೀವಿಗಳಲ್ಲಿ ವ್ಯಾಪಕ ಪ್ರಮಾಣದ ಕೋವಿಡ್​ ಸೋಂಕು ಪತ್ತೆ - Covid Detected In Wild Animals

ಅಮೆರಿಕದ ಕಾಡುಪ್ರಾಣಿಗಳಲ್ಲಿ ವ್ಯಾಪಕ ಪ್ರಮಾಣದ ಕೋವಿಡ್ ಸೋಂಕು ಕಂಡು ಬಂದಿದೆ ಎಂದು ಅಧ್ಯಯನ ವರದಿ ಹೇಳಿದೆ.

ಜಿಂಕೆ ಇಲಿ (deer mice)
ಜಿಂಕೆ ಇಲಿ (Deer Mice) (IANS)
author img

By ETV Bharat Karnataka Team

Published : Jul 30, 2024, 2:12 PM IST

ನವದೆಹಲಿ: ಅಮೆರಿಕದಲ್ಲಿ ಜನರ ಆವಾಸಸ್ಥಾನಗಳ ಸುತ್ತಮುತ್ತ ಕಂಡುಬರುವ ಆರು ಪ್ರಾಣಿಗಳಲ್ಲಿ ಕೋವಿಡ್-19ಗೆ ಕಾರಣವಾದ ಸಾರ್ಸ್-ಕೋವ್-2 ವೈರಸ್ ಪತ್ತೆಯಾಗಿದ್ದು, ಐದು ಪ್ರಭೇದಗಳಿಗೆ ಈ ಮೊದಲೇ ಸಾರ್ಸ್-ಕೋವ್-2 ವೈರಸ್ ಸೋಂಕು ತಗುಲಿತ್ತು ಎಂಬುದನ್ನು ಇವುಗಳಲ್ಲಿನ ಪ್ರತಿಕಾಯಗಳು ಸೂಚಿಸುತ್ತವೆ ಎಂದು ಹೊಸ ಅಧ್ಯಯನವೊಂದು ಸೋಮವಾರ ಕಂಡುಹಿಡಿದಿದೆ.

ಜಿಂಕೆ ಇಲಿಗಳು (Deer Mice), ವರ್ಜೀನಿಯಾ ಒಪೊಸಮ್​ಗಳು (ಇಲಿ ರೀತಿಯ ಪ್ರಾಣಿ), ರಕೂನ್​ಗಳು (ನಾಯಿಯ ರೀತಿಯ ಪ್ರಾಣಿ), ನೆಲಹಾಗ್​ಗಳು (ಅಳಿಲು ರೀತಿಯ ಪ್ರಾಣಿ), ಪೂರ್ವ ಕಾಟನ್ ಟೈಲ್ ಮೊಲಗಳು ಮತ್ತು ಪೂರ್ವ ಕೆಂಪು ಬಾವಲಿಗಳು ಈ ಆರು ಪ್ರಭೇದಗಳ ಪ್ರಾಣಿಗಳಲ್ಲಿ ಸಾರ್ಸ್-ಕೋವ್-2 ವೈರಸ್ ಪತ್ತೆಯಾಗಿದೆ.

ಒಂದು ಒಪೊಸಮ್​ನಲ್ಲಿ ಕಂಡುಬಂದಿರುವ ವೈರಸ್ ಈ ಹಿಂದೆ ತಿಳಿಯದ ವೈರಲ್ ರೂಪಾಂತರಗಳನ್ನು ಹೊಂದಿದೆ ಮತ್ತು ಈ ವೈರಸ್ ಮಾನವರು ಮತ್ತು ಅವರ ರೋಗನಿರೋಧಕ ಪ್ರತಿಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ವರ್ಜೀನಿಯಾ ಟೆಕ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ, ಪ್ರಭೇದಗಳನ್ನು ಅವಲಂಬಿಸಿ ಸೋಂಕು ತಗಲುವ ಪ್ರಮಾಣ ಶೇಕಡಾ 40 ರಿಂದ 60 ರಷ್ಟಿದೆ.

ನೇಚರ್ ಕಮ್ಯುನಿಕೇಷನ್ಸ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜನರು ನಡೆದಾಡುವ ದಾರಿಗಳು ಮತ್ತು ಹೆಚ್ಚಿನ ದಟ್ಟಣೆಯ ಸಾರ್ವಜನಿಕ ಪ್ರದೇಶಗಳ ಬಳಿ ವಾಸಿಸುವ ಪ್ರಾಣಿಗಳಲ್ಲಿ ಸಾರ್ಸ್-ಕೋವ್-2 ಸೋಂಕು ಹೆಚ್ಚಾಗಿ ಕಂಡು ಬಂದಿದೆ. ಅಂದರೆ ಈ ಪ್ರಾಣಿಗಳಿಗೆ ಮಾನವರಿಂದಲೇ ಸೋಂಕು ತಗುಲಿದೆ.

ಆನುವಂಶಿಕ ಟ್ರ್ಯಾಕಿಂಗ್​​ನಲ್ಲಿ ವಿಶಿಷ್ಟ ವೈರಲ್ ರೂಪಾಂತರಗಳಿರುವುದು ಕಂಡು ಬಂದಿದ್ದು, ಇದು ಮಾನವರಲ್ಲಿನ ಕೋವಿಡ್​ ಸೋಂಕಿನ ರೂಪಾಂತರಗಳಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ ಮತ್ತು ಇದು ಒಂದು ಪ್ರಭೇದದಿಂದ ಮತ್ತೊಂದು ಪ್ರಭೇದಕ್ಕೆ ವೈರಸ್​ ವರ್ಗಾವಣೆಯಾಗಿರುವುದನ್ನು ಸೂಚಿಸುತ್ತದೆ.

"ಮನುಷ್ಯರು ಕಾಡು ಪ್ರಾಣಿಗಳೊಂದಿಗೆ ಹತ್ತಿರದಲ್ಲಿದ್ದಾಗ ವೈರಸ್ ಮನುಷ್ಯರಿಂದ ವನ್ಯಜೀವಿಗಳಿಗೆ ವರ್ಗಾವಣೆಯಾಗಬಹುದು" ಎಂದು ವರ್ಜೀನಿಯಾ ಟೆಕ್​ನ ಸಹಾಯಕ ಪ್ರಾಧ್ಯಾಪಕ ಕಾರ್ಲಾ ಫಿಂಕಿಲ್ ಸ್ಟೈನ್ ಹೇಳಿದ್ದಾರೆ.

ಈ ಸಂಶೋಧನೆಯಲ್ಲಿ ಜಿಂಕೆ ಇಲಿಗಳು, ವರ್ಜೀನಿಯಾ ಒಪೊಸಮ್​ಗಳು ಮತ್ತು ರಕೂನ್​ಗಳು ಸೇರಿದಂತೆ ವಿವಿಧ ಪ್ರಾಣಿಗಳ 798 ಮೂಗಿನ ಮತ್ತು ಬಾಯಿಯ ಸ್ವ್ಯಾಬ್​ಗಳನ್ನು ಪರೀಕ್ಷಿಸಲಾಗಿದೆ.

ಆದಾಗ್ಯೂ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸಂಶೋಧಕರು ಒತ್ತಿಹೇಳಿದ್ದಾರೆ. ಈ ವೈರಲ್ ರೂಪಾಂತರಗಳನ್ನು ನಿಕಟವಾಗಿ ಗಮನಿಸುತ್ತಿರಬೇಕು ಎಂದು ಸಂಶೋಧನಾ ತಜ್ಞರು ಹೇಳಿದ್ದಾರೆ. ರೂಪಾಂತರಗೊಂಡ ವೈರಸ್​ ಬಹುಬೇಗನೆ ಹರಡಬಹುದಾಗಿರುವುದರಿಂದ ಮತ್ತು ಇದಕ್ಕೆ ಲಸಿಕೆ ಕಂಡು ಹಿಡಿಯುವುದು ಕಷ್ಟಕರವಾಗಿರುವುದರಿಂದ ಇದರ ಬಗ್ಗೆ ಸೂಕ್ಷ್ಮವಾಗಿ ನಿಗಾ ಇಡುವುದು ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ಯಾಧುನಿಕ ಏರ್​ ಟ್ಯಾಕ್ಸಿ ತಂತ್ರಜ್ಞಾನ ಅನಾವರಣಗೊಳಿಸಿದ ಹ್ಯುಂಡೈ ಮೋಟಾರ್: ಏನಿದರ ಪ್ರಯೋಜನ? - Air Taxi Technology

ETV Bharat Logo

Copyright © 2024 Ushodaya Enterprises Pvt. Ltd., All Rights Reserved.