ETV Bharat / international

ಭಾರತ, ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣ, ಹಿನ್ನೆಲೆಯೇನು? ಸಂಪೂರ್ಣ ಮಾಹಿತಿ

ಕೆನಡಾ ಮತ್ತು ಭಾರತಗಳ ಮಧ್ಯೆ ನಡೆಯುತ್ತಿರುವ ರಾಜತಾಂತ್ರಿಕ ಜಟಾಪಟಿಯ ಬಗ್ಗೆ ಒಂದು ವಿಶ್ಲೇಷಣೆ.

author img

By ETV Bharat Karnataka Team

Published : 2 hours ago

ಪ್ರಧಾನಿ ನರೇಂದ್ರ ಮೋದಿ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ
ಪ್ರಧಾನಿ ನರೇಂದ್ರ ಮೋದಿ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (IANS)

ಕೆನಡಾದೊಂದಿಗೆ ರಾಜತಾಂತ್ರಿಕ ವಿವಾದವು ತಾರಕಕ್ಕೇರಿದ ಬೆನ್ನಲ್ಲೇ ಭಾರತವು ಅಕ್ಟೋಬರ್ 14ರಂದು ಮಹತ್ವದ ಕ್ರಮವೊಂದರಲ್ಲಿ ಕೆನಡಾದಲ್ಲಿನ ತನ್ನ ಹೈಕಮಿಷನರ್ ಸೇರಿದಂತೆ ಪ್ರಮುಖ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ. ತಕ್ಷಣ ಭಾರತ ಇಂಥ ಕ್ರಮಕ್ಕೆ ಮುಂದಾಗಿದ್ದು ಏಕೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ.

ನಿಜ್ಜರ್ ಹತ್ಯೆ ವಿವಾದದ ಕೇಂದ್ರಬಿಂದು: ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದಲ್ಲಿ ನಡೆಯುತ್ತಿರುವ ತನಿಖೆ ಮತ್ತು ದೆಹಲಿಯಲ್ಲಿ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿರುವುದು ಈ ಕ್ರಮಕ್ಕೆ ಕಾರಣಗಳಾಗಿವೆ. ಟ್ರುಡೊ ಆಡಳಿತವು ಈ ಕೆಲವು ಭಾರತೀಯ ರಾಜತಾಂತ್ರಿಕರನ್ನು ತನಿಖೆಯಲ್ಲಿ "ಆಸಕ್ತಿಯ ವ್ಯಕ್ತಿಗಳು" ಎಂದು ಘೋಷಿಸುವ ಮಟ್ಟಕ್ಕೆ ಹೋಗಿದೆ. ಈ ಪರಿಸ್ಥಿತಿಯು ಭಾರತ-ಕೆನಡಾ ಸಂಬಂಧದಲ್ಲಿ ಐತಿಹಾಸಿಕ ಕನಿಷ್ಠ ಮಟ್ಟವನ್ನು ಸೂಚಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ರಾಜತಾಂತ್ರಿಕ ಸಂಬಂಧಗಳು ತೀವ್ರವಾಗಿ ಹಾಳಾಗುವ ಆತಂಕ ಎದುರಾಗಿದೆ.

ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿರಬಹುದು ಎಂಬ ಕೆನಡಾದ ಆರೋಪವು ಈಗ ಪ್ರಮುಖ ವಿಷಯವಾಗಿದೆ. ಆದಾಗ್ಯೂ, ಭಾರತವು ಈ ಆರೋಪಗಳನ್ನು ದೃಢವಾಗಿ ನಿರಾಕರಿಸಿದೆ. ಕೆನಡಾ ಈ ಬಗ್ಗೆ ಈವರೆಗೂ ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಿಲ್ಲ ಎಂದು ಒತ್ತಿಹೇಳಿದೆ. ಭಾರತದ ದೃಷ್ಟಿಕೋನದಿಂದ, ಅಂತಹ ಪುರಾವೆಗಳು ಲಭ್ಯವಿದ್ದರೆ ಅವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಹಂಚಿಕೊಳ್ಳಬೇಕಾಗಿತ್ತು. ಬದಲಾಗಿ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಾರ್ವಜನಿಕವಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿರುವುದು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ಕೆನಡಾದ ದೇಶೀಯ ರಾಜಕೀಯದ ಸೂಕ್ಷ್ಮ ಸ್ಥಿತಿಯನ್ನು ಗಮನಿಸಿದರೆ ಈ ಬೆಳವಣಿಗೆಗಳು ಆತಂಕಕಾರಿಯಾಗಿವೆ.

ಟ್ರುಡೊ ಅವರ ರಾಜಕೀಯ ಲೆಕ್ಕಾಚಾರಗಳು: ದಶಕಗಳ ಹಿಂದೆಯೇ ಪಂಜಾಬ್​ನಲ್ಲಿ ಖಲಿಸ್ತಾನ್ ಚಳುವಳಿ ಕ್ಷೀಣವಾಗಿದ್ದರೂ, ಅದರ ಪ್ರತಿಧ್ವನಿಗಳು ಕೆನಡಾದ ರಾಜಕೀಯ ವಲಯಗಳಲ್ಲಿ ಜೀವಂತವಾಗಿವೆ. ಅಲ್ಲಿನ ಸಿಖ್ ಸಮುದಾಯದ ಕೆಲ ಸಮುದಾಯಗಳು ಪ್ರತ್ಯೇಕತಾವಾದಿ ಮಹತ್ವಾಕಾಂಕ್ಷೆಗಳಿಗೆ ಬೆಂಬಲ ನೀಡುತ್ತಲೇ ಇವೆ. ಆದರೆ ಇದರಿಂದ ಹುಟ್ಟುವ ಪ್ರಶ್ನೆ ಏನೆಂದರೆ- ಏಕಾಏಕಿ ಈ ಸಮಸ್ಯೆ ಈಗ ಉಲ್ಬಣಗೊಂಡಿದ್ದು ಏಕೆ ಎಂಬುದು.

ಇದಕ್ಕೆ ಉತ್ತರ ಕೆನಡಾದ ದೇಶೀಯ ರಾಜಕೀಯದಲ್ಲಿದೆ. ಅಲ್ಲಿನ ಟ್ರುಡೊ ಅವರ ಲಿಬರಲ್ ಸರ್ಕಾರವು ಜಗ್ ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್​ಡಿಪಿ)ಯ ಬೆಂಬಲವನ್ನು ಅವಲಂಬಿಸಿರುವುದು ಇದಕ್ಕೆ ಕಾರಣವಾಗಿದೆ. ಸಿಂಗ್ ಖಲಿಸ್ತಾನಿ ಬೇಡಿಕೆಗಳ ಪ್ರಮುಖ ಬೆಂಬಲಿಗರಾಗಿದ್ದು, ಈ ವಿಷಯದ ಬಗ್ಗೆ ಭಾರತದ ಕಟು ಟೀಕಾಕಾರರಾಗಿದ್ದಾರೆ. ಟ್ರುಡೊ ಅವರ ಅನಿಶ್ಚಿತ ರಾಜಕೀಯ ಸ್ಥಿತಿಯನ್ನು ಗಮನಿಸಿದರೆ, ಭಾರತದ ಬಗ್ಗೆ ಅವರ ಸರ್ಕಾರದ ಹೆಚ್ಚುತ್ತಿರುವ ವಿರೋಧಿ ನಿಲುವು ಅಧಿಕಾರದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವ ಸಲುವಾಗಿ ಎನ್​ಡಿಪಿಯಿಂದ ಬೆಂಬಲ ಪಡೆಯುವ ಗುರಿಯನ್ನು ಹೊಂದಿರಬಹುದು ಎಂಬುದು ಕಂಡು ಬರುತ್ತದೆ.

ಕೆನಡಾದ ಸದ್ಯದ ರಾಜಕೀಯದ ಪರಿಸ್ಥಿತಿ ಹೇಗಿದೆ?: ಪ್ರಸ್ತುತ ರಾಜತಾಂತ್ರಿಕ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಬೇಕಾದರೆ, ಕೆನಡಾದ ರಾಜಕೀಯದ ಸ್ಥಿತಿಯನ್ನು ತಿಳಿಯುವುದು ಅಗತ್ಯ. 2015ರಿಂದ ಅಧಿಕಾರದಲ್ಲಿರುವ ಟ್ರುಡೊ ಅವರ ಲಿಬರಲ್ ಪಕ್ಷವು ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಅವರ ಸರ್ಕಾರವು ಪ್ರಸ್ತುತ ಸಂಸತ್ತಿನಲ್ಲಿ ಕೇವಲ 150 ಸ್ಥಾನಗಳನ್ನು ಹೊಂದಿದೆ ಮತ್ತು ಪಿಯರೆ ಪೊಯಿಲಿವ್ರೆ ನೇತೃತ್ವದ ಕನ್ಸರ್ವೇಟಿವ್ ಪಕ್ಷದಿಂದ ಅದಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಸಮೀಕ್ಷೆಗಳು ಕನ್ಸರ್ವೇಟಿವ್ ಗಳು ಲಿಬರಲ್‌ಗಳಿಗಿಂತ 45% ರಿಂದ 23% ರಷ್ಟು ವ್ಯಾಪಕ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ತೋರಿಸಿವೆ. 2025ರ ಚುನಾವಣೆಗಳು ಸಮೀಪಿಸುತ್ತಿರುವುದರಿಂದ, ಟ್ರುಡೊ ತಮ್ಮ ರಾಜಕೀಯ ಸ್ಥಾನಮಾನವನ್ನು ಗಟ್ಟಿಗೊಳಿಸಿಕೊಳ್ಳಲು ತೀವ್ರ ಒತ್ತಡ ಎದುರಿಸುತ್ತಿದ್ದಾರೆ.

Four 'I's ಅಥವಾ ನಾಲ್ಕು ಐ ಗಳ ಕಾರಣದಿಂದ ಟ್ರುಡೊ ಅವರ ಜನಪ್ರಿಯತೆ ಕುಸಿಯುತ್ತಿದೆ ಎಂದು ಕೆನಡಾದ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಅವು ಹೀಗಿವೆ: ವಲಸೆ, ಆಡಳಿತ, ಗುರುತು ಮತ್ತು ಹಣದುಬ್ಬರ (Immigration, Incumbency, Identity and Inflation). ಹೆಚ್ಚುತ್ತಿರುವ ಹಣದುಬ್ಬರವು ಅವರ ಸರ್ಕಾರದ ಆರ್ಥಿಕ ವಿಶ್ವಾಸಾರ್ಹತೆಗೆ ತೀವ್ರ ಧಕ್ಕೆ ತಂದಿದೆ. ಜೊತೆಗೆ ಅನಿಯಂತ್ರಿತ ವಲಸೆಯಿಂದ ಕೆನಡಾದ ಜನಸಂಖ್ಯಾ ರಚನೆ ಬದಲಾಗುತ್ತಿರುವುದು ಕಳವಳಗಳನ್ನು ಹುಟ್ಟುಹಾಕಿದೆ. ಒಂದು ಸಮಯದಲ್ಲಿ, ಕೆನಡಾವನ್ನು ಅದರ ಮುಕ್ತ-ಬಾಗಿಲು ವಲಸೆ ನೀತಿಗಾಗಿ ಶ್ಲಾಘಿಸಲಾಗುತ್ತಿತ್ತು. ಆದರೆ ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಇದನ್ನು ಇನ್ನು ಮುಂದೆ ಸುಸ್ಥಿರವೆಂದು ನೋಡಲಾಗುವುದಿಲ್ಲ. ಅಂತಾರಾಷ್ಟ್ರೀಯ ವಿವಾದವನ್ನು ಹುಟ್ಟುಹಾಕುವ ಮೂಲಕ ಈ ದೇಶೀಯ ಬಿಕ್ಕಟ್ಟುಗಳನ್ನು ಮರೆ ಮಾಚಿ ಆ ಮೂಲಕ ತಮ್ಮ ರಾಜಕೀಯ ವೃತ್ತಿಜೀವನವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿರಬಹುದು.

ಖಲಿಸ್ತಾನಿ ಚಟುವಟಿಕೆಗಳಿಗೆ ಅತ್ಯಾಪ್ತ ದೇಶ: ಕೆನಡಾವು ದೀರ್ಘಕಾಲದಿಂದ ಖಲಿಸ್ತಾನಿ ಚಟುವಟಿಕೆಗಳಿಗೆ ಅತ್ಯಾಪ್ತ ದೇಶವಾಗಿದೆ. ಇಲ್ಲಿನ ಸಿಖ್ ವಲಸೆಗಾರರು ಗಣನೀಯ ರಾಜಕೀಯ ಪ್ರಭಾವವನ್ನು ಹೊಂದಿದ್ದಾರೆ. ಈ ಪ್ರಭಾವವು ಖಲಿಸ್ತಾನಿ ಹೋರಾಟಗಾರರು ಕೆನಡಾದ ಸಮಾಜದಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು, ರಾಜಕೀಯ ಪ್ರಾತಿನಿಧ್ಯವನ್ನು ಪಡೆಯಲು ಮತ್ತು ಅವರ ಪ್ರತ್ಯೇಕತಾವಾದಿ ಮಹತ್ವಾಕಾಂಕ್ಷೆಗಳನ್ನು ಗುರುತಿಸುವಂತೆ ಒತ್ತಾಯಿಸಲು ಅನುವು ಮಾಡಿಕೊಟ್ಟಿದೆ. ದುರಂತ ವಿಪರ್ಯಾಸವೆಂದರೆ ಖಲಿಸ್ತಾನ್ ವಿಷಯವು ಹಿಂದಿನ ಯುಗದ ಅವಶೇಷವಾಗಿದೆ. ಸದ್ಯ ಖಲಿಸ್ತಾನ್ ವಿಚಾರವು ಪಂಜಾಬಿನ ಯುವ ಸಿಖ್ ಜನಸಂಖ್ಯೆಗೆ ಬಹುತೇಕ ಅಪ್ರಸ್ತುತವಾಗಿದೆ. ಆದಾಗ್ಯೂ, ಕೆನಡಾದಲ್ಲಿ, ಈ ವಿಷಯವನ್ನು ಜೀವಂತವಾಗಿರಿಸಲಾಗಿದೆ. ಜಗ್ ಮೀತ್ ಸಿಂಗ್ ಅವರಂತಹ ರಾಜಕಾರಣಿಗಳು ಸಿಖ್ ವಲಸೆಗಾರರ ಮತಗಳನ್ನು ಪಡೆಯಲು ಈ ವಿಷಯವನ್ನು ಜೀವಂತವಾಗಿಟ್ಟಿದ್ದಾರೆ. ಈ ವಿಚಾರಗಳನ್ನು ಬಗ್ಗೆ ಚೆನ್ನಾಗಿ ತಿಳಿದಿರುವ ಟ್ರುಡೊ ಅವರ ಸರ್ಕಾರವು ಭಾರತದೊಂದಿಗೆ ರಚನಾತ್ಮಕ ಸಂಬಂಧವನ್ನು ಬೆಳೆಸುವ ಬದಲು ದೇಶೀಯ ರಾಜಕೀಯ ಪರಿಗಣನೆಗಳಿಗೆ ಆದ್ಯತೆ ನೀಡಲು ಬಯಸುತ್ತಿದೆ. ಹಾಗೆ ಮಾಡುವ ಮೂಲಕ, ಲಿಬರಲ್ ಪಕ್ಷವು ದ್ವಿಪಕ್ಷೀಯ ಸಂಬಂಧಗಳನ್ನು ಅಪಾಯಕ್ಕೆ ಸಿಲುಕಿಸಿದೆ ಮಾತ್ರವಲ್ಲದೆ ಇಂಡೋ-ಪೆಸಿಫಿಕ್​ನಲ್ಲಿ ತನ್ನ ಪ್ರಮುಖ ಪಾಲುದಾರ ದೇಶ ಭಾರತವನ್ನು ದೂರ ಮಾಡಿಕೊಳ್ಳುವ ಅಪಾಯವನ್ನೂ ಹೊಂದಿದೆ.

ಸಾರ್ವಭೌಮತ್ವದ ವಿಷಯವು ಈ ವಿವಾದದ ಕೇಂದ್ರಬಿಂದುವಾಗಿದೆ. ವಿಶ್ವ ವೇದಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಉದಯೋನ್ಮುಖ ಜಾಗತಿಕ ಶಕ್ತಿಯಾಗಿರುವ ಭಾರತವು ತನ್ನ ಆಂತರಿಕ ವ್ಯವಹಾರಗಳಲ್ಲಿ, ವಿಶೇಷವಾಗಿ ಪ್ರತ್ಯೇಕತೆಯ ವಿಷಯದಲ್ಲಿ ಯಾವುದೇ ಬಾಹ್ಯ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ಭಾರತಕ್ಕೆ, ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದವನ್ನು ಉತ್ತೇಜಿಸುವುದು ಅದರ ಸಾರ್ವಭೌಮತ್ವದ ಮೇಲಿನ ನೇರ ದಾಳಿಯಾಗಿದೆ. ಈ ವಿಷಯದ ಬಗ್ಗೆ ನವದೆಹಲಿಯ ದೃಢ ನಿಲುವು ಕೇವಲ ನಿಜ್ಜರ್ ಹತ್ಯೆಯ ಬಗ್ಗೆ ಮಾತ್ರವಲ್ಲ- ಭಾರತದ ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುವವರಿಗೆ ಯಾವುದೇ ದೇಶ, ಎಷ್ಟೇ ದೂರದಲ್ಲಿದ್ದರೂ, ಸುರಕ್ಷಿತ ಆಶ್ರಯವನ್ನು ಒದಗಿಸುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಕೆನಡಾ ತನ್ನ ನೆಲದಲ್ಲಿ ಖಲಿಸ್ತಾನಿ ಶಕ್ತಿಗಳಿಗೆ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಜಾಗತಿಕ ವೇದಿಕೆಯಲ್ಲಿ ತನ್ನ ಸ್ಥಾನಮಾನದೊಂದಿಗೆ ರಾಜಿ ಮಾಡಿಕೊಂಡಿದೆ. ಭಾರತದೊಂದಿಗಿನ ಹದಗೆಡುತ್ತಿರುವ ಸಂಬಂಧವು ಗಮನಾರ್ಹವಾದ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ದೇಶದ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ದೇಶೀಯ ರಾಜಕೀಯವು ಮಹತ್ವದ ಪಾತ್ರ ವಹಿಸುತ್ತದೆಯಾದರೂ, ಕೆನಡಾ ಇದನ್ನು ಹೊಸ ತೀವ್ರತೆಗೆ ಕೊಂಡೊಯ್ದಿದೆ. ಟ್ರುಡೊ ಅವರ ಕ್ರಮಗಳು ತೀವ್ರ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿವೆ. ಭಾರತ ಮತ್ತು ಕೆನಡಾ ನಡುವಿನ ವ್ಯಾಪಾರ ಮಾತುಕತೆಗಳು ಸ್ಥಗಿತಗೊಂಡಿವೆ ಮತ್ತು ಭವಿಷ್ಯದ ಸಹಕಾರದ ಸಾಧ್ಯತೆ ಕಡಿಮೆಯಾಗಿದೆ. ಜಾಗತಿಕ ದಕ್ಷಿಣ ಮತ್ತು ಇಂಡೋ-ಪೆಸಿಫಿಕ್ ನಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತವನ್ನು ದ್ವೇಷಿಸುವಲ್ಲಿ ಕೆನಡಾದ ತಪ್ಪು ಲೆಕ್ಕಾಚಾರವು ಸರಿಪಡಿಸಲಾಗದ ಹಾನಿಗೆ ಕಾರಣವಾಗಬಹುದು. ಚೀನಾದೊಂದಿಗಿನ ಸಂಬಂಧಗಳು ಈಗಾಗಲೇ ಹದಗೆಟ್ಟಿರುವುದರಿಂದ, ಕೆನಡಾ ಏಷ್ಯಾವನ್ನು ಕಳೆದುಕೊಳ್ಳಬಹುದು.

ಮುಂದಿನ ವರ್ಷದ ಕೆನಡಾ ಸಾರ್ವತ್ರಿಕ ಚುನಾವಣೆ: ಟ್ರುಡೊ 2025ರಲ್ಲಿ ಚುನಾವಣೆಗಳನ್ನು ಎದುರಿಸಬೇಕಾಗಿದ್ದು, ಈಗ ಅವರು ಗೆಲ್ಲುತ್ತಾರೆಯೇ ಅಥವಾ ಸೋಲುತ್ತಾರೆಯೇ ಎಂಬುದು ಪ್ರಶ್ನೆಯಲ್ಲ. ಬದಲಾಗಿ ಸ್ವದೇಶದಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಮೂಲಕ ಅವರು ಯಾವ ರೀತಿಯ ಪರಂಪರೆಯನ್ನು ಬಿಟ್ಟು ಹೋಗುತ್ತಾರೆ ಎಂಬುದು ಪ್ರಶ್ನೆ. ಭಾರತ-ಕೆನಡಾ ಸಂಬಂಧಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸುವುದು ಕಷ್ಟ ಮತ್ತು ವರ್ಷಗಳಿಂದ ಕಟ್ಟಲಾದ ಬಾಂಧವ್ಯವು ಈಗ ಸ್ಥಗಿತಗೊಂಡಿದೆ.

ಲೇಖಕರು: ವಿವೇಕ್ ಮಿಶ್ರಾ

ಇದನ್ನೂ ಓದಿ : ಬಿಷ್ಣೋಯ್​ ಗ್ಯಾಂಗ್​​ನಿಂದ ಖಲಿಸ್ತಾನಿಗಳ ಹತ್ಯೆಗೆ ಭಾರತ ಸರ್ಕಾರದ ಸಂಚು: ಕೆನಡಾ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.