ETV Bharat / international

ಉಕ್ರೇನ್​ ಮೇಲಿನ ದಾಳಿಗೆ ರಷ್ಯಾ ಸಮರ್ಥನೆ: ಪ್ರತಿದಾಳಿಗೆ ಉಕ್ರೇನ್​ ರೆಡಿ - RUSSIA UKRAINE WAR

ಸೋಮವಾರ ಉಕ್ರೇನ್​ನ ಮೇಲೆ ರಷ್ಯಾ ನಡೆಸಿರುವ ಭೀಕರ ದಾಳಿಗೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಯುದ್ಧ ಉಪಕರಣಗಳನ್ನು ಕಳುಹಿಸಿ ಕೊಡುವ ಮೂಲಕ ಉಕ್ರೇನ್​ನ ನೆರವಿಗೆ ನಿಂತಿದೆ. ದಾಳಿಯಿಂದ ಆಕ್ರೋಶಗೊಂಡಿರುವ ಉಕ್ರೇನ್​ ರಷ್ಯಾ ತಕ್ಕ ಬೆಲೆ ತೆರುವಂತೆ ಮಾಡುತ್ತೇವೆ ಎಂದು ಶಪಥ ಮಾಡಿದೆ. ಇತ್ತ ರಷ್ಯಾ ತಾವು ಗುರಿಯಂತೆ ಎಲ್ಲಾ ಪ್ರದೇಶಗಳನ್ನು ಹೊಡೆದುರಳಿಸಿದ್ದೇವೆ ಎಂದು ಬೀಗುತ್ತಿದೆ.

ಉಕ್ರೇನ್ ರಷ್ಯಾ ಯುದ್ಧ
ಉಕ್ರೇನ್ ರಷ್ಯಾ ಯುದ್ಧ (IANS)
author img

By PTI

Published : Aug 27, 2024, 7:52 AM IST

ಕೀವ್​(ಉಕ್ರೇನ್​): "ರಷ್ಯಾ ಉಕ್ರೇನ್​ ಮೇಲೆ ಕ್ಷಿಪಣಿ, ಡ್ರೋನ್​ಗಳ ಮೂಲಕ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದು, ಒಂದು ಡಜನ್​ಗಿಂತಲೂ ಅಧಿಕ ಜನರು ಗಾಯಗೊಂಡಿದ್ದಾರೆ. ಜತೆಗೆ ವಿದ್ಯುತ್​ ಸೌಲಭ್ಯಗಳನ್ನು ಹಾನಿಗೊಳಿಸಿದ್ದು ನಗರ ಕತ್ತಲಲ್ಲೇ ಕಳೆಯುವಂತೆ ಆಗಿದೆಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದಾಳಿಯ ಭಯಾನಕತೆಯನ್ನು ವಿವರಿಸಿದ್ದಾರೆ.

ನೂರುಕ್ಕೂ ಅಧಿಕ ಕ್ಷಿಪಣಿಗಳು, ಅಷ್ಟೇ ಪ್ರಮಾಣದ ಡ್ರೋನ್​ಗಳು ಮಧ್ಯರಾತ್ರಿ ಆರಂಭಿಸಿದ ದಾಳಿ ಮುಂಜಾನೆವರೆಗೆ ಮುಂದುವರೆದಿದೆ. ಇದು ಈ ವಾರದ ರಷ್ಯಾ ನಡೆಸಿರುವ ಬೃಹತ್​ ಹೀನಾಯ ದಾಳಿಯಾಗಿದೆ. ಉಕ್ರೇನ್​ನ ವಾಯುಪಡೆ ಉಕ್ರೇನ್​ನ ಪೂರ್ವ, ಉತ್ತರ, ದಕ್ಷಿಣ ಮತ್ತು ಮಧ್ಯಭಾಗಗಳಲ್ಲಿ ರಷ್ಯಾದ ಡ್ರೋನ್‌, ಕ್ಷಿಪಣಿಗಳು ದಾಳಿ ನಡೆಸಿದೆ ಎಂದು ತಿಳಿಸಿದೆ.

ರಷ್ಯಾದ ಹಿಂದಿನ ದಾಳಿಗಳಿಗೆ ಹೋಲಿಸಿದರೆ ಈ ದಾಳಿ ಅತ್ಯಂತ ಭಯಾನಕವಾಗಿತ್ತು. ಈ ಬಾರಿ ಸಾರ್ವಜನಿಕ ಮೂಲಸೌಕರ್ಯಗಳಿರುವ ಪ್ರದೇಶಗಳನ್ನೇ ಗುರಿಯಾಗಿಸಿ ದಾಳಿ ನಡೆಸಿವೆ. ರಾಷ್ಟ್ರದ ಖಾರ್​ಕೀವ್​ ಪ್ರದೇಶದಿಂದ ಮತ್ತು ಕೀವ್​ ನಿಂದ ಒಡೆಸಾ ಹಾಗೂ ಪಶ್ಚಿಮ ಪ್ರದೇಶಗಳಿಂದ ಟಾರ್ಗೆಟ್​ ಮಾಡಿ ಕ್ಷಿಪಣಿಗಳನ್ನು ಸಿಡಿಸಿದೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಇನ್ನು ಉಕ್ರೇನ್ ರಾಜಧಾನಿ ಕೀವ್​ನಲ್ಲಿ ಸ್ಫೋಟದ ಶಬ್ದಗಳು ಕೇಳಿಸಿದವು. ದಾಳಿಯಿಂದ ನಗರದಲ್ಲಿ ವಿದ್ಯುತ್​ ಮತ್ತು ನೀರಿನ ಸೇವೆಗಳು ಸ್ಥಗಿತಗೊಂಡಿದೆ ಎಂದು ಉಕ್ರೇನ್​ನ ಮೇಯರ್​ ವಿಟಾಲಿ ಕ್ಲಿಟ್ಷ್​ಕೊ ತಿಳಿಸಿದ್ದಾರೆ.

ಉಕ್ರೇನ್‌ನ ಪ್ರಧಾನ ಮಂತ್ರಿ ಹೇಳಿಕೆ: ರಷ್ಯಾ ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕಿನ್‌ಜಾಲ್ ಕ್ಷಿಪಣಿಗಳನ್ನು 15 ಉಕ್ರೇನಿಯನ್ ಪ್ರದೇಶಗಳಲ್ಲಿ ಸುಮಾರು ದೇಶದ ಅರ್ಧಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಹಾರಿಸಿದೆ. ಮತ್ತೊಮ್ಮೆ ಇಂಧನ ಮೂಲ ಸೌಕರ್ಯವೇ ರಷ್ಯಾದ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಉಕ್ರೇನ್‌ನ ಪ್ರಧಾನ ಮಂತ್ರಿ ಡೆನಿಸ್ ಶ್ಮಿಹಾಲ್ ಹೇಳಿದ್ದಾರೆ.

ಅಲ್ಲದೇ ಶ್ಮಿಹಾಲ್​ ಉಕ್ರೇನ್‌ನ ಮಿತ್ರರಾಷ್ಟ್ರಗಳಿಗೆ ದೀರ್ಘ ಹಾಗೂ ಉತ್ತಮ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಅವುಗಳನ್ನು ರಷ್ಯಾದ ಮೇಲೆ ಬಳುಸುವಂತೆ ಅನುಮತಿ ನೀಡಿದ್ದಾರೆ. "ಉಕ್ರೇನ್​ನ ಮೇಲಿನ ಹೀನಾಯ ದಾಳಿಗಳನ್ನು ತಡೆಯಲು ರಷ್ಯಾದ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಸ್ಥಳವನ್ನೇ ನಾಶಪಡಿಸುವುದು ಅನಿವಾರ್ಯ" ಎಂದು ಶ್ಮಿಹಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಯಲ್ಲಿ 'ನಾವು ನಮ್ಮ ಮಿತ್ರರಾಷ್ಟ್ರಗಳನ್ನು ನಂಬುತ್ತೇವೆ ಮತ್ತು ಖಂಡಿತವಾಗಿಯೂ ರಷ್ಯಾ ಈ ದಾಳಿಗೆ ಬೆಲೆ ತೆರುವಂತೆ' ಮಾಡುತ್ತೇವೆ ಎಂದು ಸವಾಲೆಸಿದಿದ್ದಾರೆ.

ಅಮೆರಿಕ ಅಧ್ಯಕ್ಷರು ಹೇಳಿದ್ದಿಷ್ಟು: ಅಮೆರಿಕ ಅಧ್ಯಕ್ಷ ಜೋ ಬೈಡನ್, "ಉಕ್ರೇನ್​ನ ಇಂಧನ ಮೂಲಸೌಕರ್ಯದ ಮೇಲಿನ ರಷ್ಯಾದ ದಾಳಿಯ ಅತಿರೇಕದ್ದು ಎಂದು ಕರೆದಿದ್ದಾರೆ. ಮತ್ತು ಉಕ್ರೇನ್​ನ ನೆರವಿಗಾಗಿ ಅಮೆರಿಕದ ವಾಯು ರಕ್ಷಣಾ ಕ್ಷಿಪಣಿಗಳನ್ನು, ಯುದ್ಧ ಪರಿಕರಗಳನ್ನು ಉಕ್ರೇನ್‌ಗೆ ಕಳುಹಿಸಲಾಗಿದೆ. ಅಮೆರಿಕವು ಮೂಲ ವ್ಯವಸ್ಥೆಗಳನ್ನು ಸರಿಪಡಿಸಲು ಮತ್ತು ಉಕ್ರೇನ್‌ನ ವಿದ್ಯುತ್​ ಉತ್ಪಾದಿಸುವ ಗ್ರಿಡ್‌ನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಉಕ್ರೇನ್‌ಗೆ ಇಂಧನ ಉಪಕರಣಗಳನ್ನು ಹೆಚ್ಚಿಸುತ್ತಿದೆ' ಎಂದು ಇದೇ ವೇಳೆ ಅಭಯ ನೀಡಿದ್ದಾರೆ.

ಗುರಿಯಂತೆ ದಾಳಿ - ರಷ್ಯಾ ರಕ್ಷಣಾ ಸಚಿವಾಲಯ: ರಷ್ಯಾದ ರಕ್ಷಣಾ ಸಚಿವಾಲಯ ಉಕ್ರೇನ್​ ಮೇಲೆ ನಡೆಸಿರುವ ದಾಳಿ ಬಗ್ಗೆ ಹೇಳಿಕೆ ನೀಡಿದ್ದು, ರಷ್ಯಾದ ಕ್ರಮವನ್ನು ಸಮರ್ಥಿಸಿಕೊಂಡಿದೆ. ರಷ್ಯಾ ನಡೆಸಿರುವ ದಾಳಿಯಲ್ಲಿ ದೀರ್ಘ-ಶ್ರೇಣಿಯ ಕ್ಷಿಪಣಿಗಳಿಂದ ನಿಖರವಾದ ದಾಳಿ ಮಾಡಲಾಗಿದೆ. ಉಕ್ರೇನ್‌ನ ಮಿಲಿಟರಿ-ಕೈಗಾರಿಕಾ ಸಂಕೀರ್ಣದ ಕಾರ್ಯಾಚರಣೆಯನ್ನು ಬೆಂಬಲಿಸುವ ವಿದ್ಯುತ್​ ಶಕ್ತಿ, ಮೂಲಸೌಕರ್ಯ ಸೌಲಭ್ಯಗಳ ವಿರುದ್ಧ ಡ್ರೋನ್‌ಗಳನ್ನು ಬಳಸಲಾಗಿದೆ. ಈ ಮೂಲಕ ಮೊದಲು ಗೊತ್ತುಪಡಿಸಿದ್ಧ ಎಲ್ಲಾ ಗುರಿಗಳ ಮೇಲೆ ಅಂದುಕೊಂಡ ನಿಖರ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.

ಇನ್ನು ದಾಳಿಯಿಂದ ಉಕ್ರೇನ್​ನ ಪಶ್ಚಿಮ ನಗರ ಲುಟ್ಸ್ಕ್‌ನಲ್ಲಿ ಓರ್ವ, ಮಧ್ಯ ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ಓರ್ವ, ರಾಷ್ಟ್ರದ ಮಧ್ಯಭಾಗದ ಝೈಟೊಮಿರ್‌ನಲ್ಲಿ ಓರ್ವ ಮತ್ತು ಆಗ್ನೇಯದಲ್ಲಿ ಭಾಗಶಃ ಆಕ್ರಮಿಸಿಕೊಂಡಿರುವ ಜಪೋರಿಝಿಯಾ ಪ್ರದೇಶದಲ್ಲಿ ಓರ್ವ ಸೇರಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ರಾಜಧಾನಿಯನ್ನು ಸುತ್ತುವರೆದಿರುವ ಕೀವ್​ನಲ್ಲಿ ಓರ್ವ, ಲುಟ್ಸ್ಕ್‌ನಲ್ಲಿ 5, ದಕ್ಷಿಣ ಮೈಕೋಲೈವ್ ಪ್ರದೇಶದಲ್ಲಿ ಮೂವರು ಮತ್ತು ನೆರೆಯ ಒಡೆಸಾ ಪ್ರದೇಶದಲ್ಲಿ ನಾಲ್ವರು ಸೇರಿ ಇತರ ಹದಿಮೂರು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್​ನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಮೇಲೆ ಬೃಹತ್ ದಾಳಿ ಆರಂಭಿಸಿದ ರಷ್ಯಾ: ಕನಿಷ್ಠ ಮೂವರ ಸಾವು - Russia attack Ukraine

ETV Bharat Logo

Copyright © 2024 Ushodaya Enterprises Pvt. Ltd., All Rights Reserved.