ETV Bharat / international

ಡೊನಾಲ್ಡ್​ ಟ್ರಂಪ್​​ 2.0 ಆಡಳಿತದಲ್ಲಿ ಟೆಕ್​ ದೈತ್ಯ ಎಲಾನ್​ ಮಸ್ಕ್​​​ ಪಾತ್ರವೇನು? - ಎಲಾನ್​ ಮಸ್ಕ್

ಡೊನಾಲ್ಡ್​​ ಟ್ರಂಪ್ ಅಭಿನಂದಿಸಲು ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಫೋನ್​​ ಕರೆ ಮಾಡಿದಾಗ, ಎಲಾನ್​ ಮಸ್ಕ್ ಕೂಡ ಸಂಭಾಷಣೆಯಲ್ಲಿ ಭಾಗಿಯಾಗಿದ್ದಾರೆ. ಟ್ರಂಪ್ ಅವರ ಆಡಳಿತದಲ್ಲಿ ಮಸ್ಕ್​ ಅವರ ಸಂಭಾವ್ಯ ಪಾತ್ರ ಏನು ಎಂಬುದು ಕುತೂಹಲ ಮೂಡಿಸಿದೆ.

ಎಲಾನ್​ ಮಸ್ಕ್
ಎಲಾನ್​ ಮಸ್ಕ್ (AP)
author img

By ETV Bharat Karnataka Team

Published : Nov 9, 2024, 7:27 PM IST

ಕೀವ್​​​ (ಉಕ್ರೇನ್​): ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್​ ಟ್ರಂಪ್​ ಅವರಿಗೆ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಉಕ್ರೇನ್​​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಅವರು ಶುಭಾಶಯ ತಿಳಿಸಿಲು ಟ್ರಂಪ್​ಗೆ ಕರೆ ಮಾಡಿದಾಗ ಅದನ್ನು ವಿಶ್ವದ ನಂ.1 ಸಿರಿವಂತ ಉದ್ಯಮಿ ಎಲಾನ್​ ಮಸ್ಕ್​​ ಸ್ವೀಕರಿಸಿದ್ದರು ಎಂಬ ಕುತೂಹಲದ ಸಂಗತಿ ಹೊರಬಿದ್ದಿದೆ.

ಉಕ್ರೇನ್​ ಅಧ್ಯಕ್ಷರು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ಗೆ ಗೆಲುವಿನ ಅಭಿನಂದನೆ ಸಲ್ಲಿಸಲು ಕರೆ ಮಾಡಿದ್ದರು. ಈ ವೇಳೆ ಟ್ರಂಪ್​​ ಅದನ್ನು ಮಸ್ಕ್​ಗೆ ನೀಡಿ ಮಾತನಾಡುವಂತೆ ಸೂಚಿಸಿದರು. ಝೆಲೆನ್​​ಸ್ಕಿ ಅವರು ಮಸ್ಕ್ ಜೊತೆ ಮಾತನಾಡಿದರು. ಅಭಿನಂದನೆ ತಿಳಿಸಿದ ಬಳಿಕ, ಉಕ್ರೇನ್​​ಗೆ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ವಿಸ್ತರಿಸಿದ್ದಕ್ಕಾಗಿ ಸ್ಪೇಸ್‌ಎಕ್ಸ್ ಮಾಲೀಕನಿಗೆ ಧನ್ಯವಾದ ಅರ್ಪಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಟ್ರಂಪ್​​ ಆಡಳಿತದಲ್ಲಿ ಮಸ್ಕ್​ ನೆರಳು: ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​​ ಟ್ರಂಪ್​​ಗೆ ಅವರಿಗೆ ಉದ್ಯಮಿ ಎಲಾನ್​ ಮಸ್ಕ್​ ಅವರು ಬೆಂಬಲ ಘೋಷಿಸಿದ್ದರು. ಜೊತೆಗೆ 60 ಕೋಟಿಗೂ ಅಧಿಕ ದೇಣಿಗೆ ನೀಡಿದ್ದಲ್ಲದೆ, ಮತ ಪ್ರಚಾರವನ್ನೂ ಮಾಡಿದ್ದರು. ಹೀಗಾಗಿ, ಟ್ರಂಪ್​ ಅವರ ಆಡಳಿತದಲ್ಲಿ ಮಸ್ಕ್​ ಪ್ರಭಾವ ಬೀರುವರೇ ಎಂಬ ಪ್ರಶ್ನೆ ಎದ್ದಿದೆ.

ಟ್ರಂಪ್​​ಗೆ ಬಂದ ಅಭಿನಂದನಾ ವೈಯಕ್ತಿಕ ಕರೆಗಳನ್ನು ಮಸ್ಕ್​ ಸ್ವೀಕರಿಸಿ ಮಾತನಾಡಿದ್ದು ಇದನ್ನು ಪುಷ್ಟೀಕರಿಸುತ್ತದೆ. ಜೊತೆಗೆ ಡೊನಾಲ್ಡ್​ ಟ್ರಂಪ್​ ಕೂಡ ಈ ಬಗ್ಗೆ ಮಾತನಾಡಿದ್ದು, ಸರ್ಕಾರದ ದಕ್ಷತೆಯಲ್ಲಿ ಮಸ್ಕ್​ ಔಪಚಾರಿಕ ಪಾತ್ರ ವಹಿಸಲಿದ್ದಾರೆ ಎಂದಿದ್ದರು.

ಉಕ್ರೇನ್​ - ರಷ್ಯಾ ಯುದ್ಧ ನಿಲ್ಲಿಸ್ತಾರಾ?: ಡೊನಾಲ್ಡ್​ ಟ್ರಂಪ್​ ತಾವು ಅಧಿಕಾರಕ್ಕೆ ಬಂದ ಮೇಲೆ ಉಕ್ರೇನ್​ ಮತ್ತು ರಷ್ಯಾ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದಾಗಿ ಅಭಯ ನೀಡಿದ್ದರು. ಮುಂದಿನ ವರ್ಷದ ಜನವರಿ 20 ರಂದು ಟ್ರಂಪ್​ ಅಧಿಕೃತವಾಗಿ ಅಧ್ಯಕ್ಷಗಿರಿ ಪಡೆಯಲಿದ್ದಾರೆ. ಉಭಯ ರಾಷ್ಟ್ರಗಳ ನಾಯಕರ ಜೊತೆಗೆ ಮಾತುಕತೆ ನಡೆಸಿ ಮೂರು ವರ್ಷಗಳ ಸಂಘರ್ಷಕ್ಕೆ ಇತಿಶ್ರೀ ಹಾಡಲಿದ್ದಾರೆಯೇ ಎಂಬ ಕೌತುಕವಿದೆ.

ಟ್ರಂಪ್ ಯುದ್ಧವನ್ನು ಶೀಘ್ರವಾಗಿ ಕೊನೆಗೊಳಿಸುವ ಭರವಸೆ ನೀಡಿದ್ದರೂ, ಶಾಂತಿ ಸಂಧಾನಕ್ಕಾಗಿ ರಷ್ಯಾಕ್ಕೆ ಕೆಲವು ಪ್ರದೇಶಗಳನ್ನು ಬಿಟ್ಟುಕೊಡಲು ಉಕ್ರೇನ್​​ಗೆ ಸಲಹೆ ನೀಡಿದ್ದರು. ಆದರೆ, ಇದನ್ನು ಝೆಲೆನ್​​ಸ್ಕಿ ತಿರಸ್ಕರಿಸಿದ್ದರು. 2017 ರಲ್ಲಿ ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದ್ದು ಇದೇ ಟ್ರಂಪ್ ಆಡಳಿತ. ಈಗಿನ ಅಧ್ಯಕ್ಷ ಜೋ ಬೈಡನ್​ ಅವರು ಕೂಡ ಉಕ್ರೇನ್‌ಗೆ ಮಿಲಿಟರಿ ಮತ್ತು ಆರ್ಥಿಕ ಸಹಾಯ ನೀಡಿದ್ದಾರೆ.

ಇದನ್ನೂ ಓದಿ: ಭಾರತವೂ ಈಗ ಜಾಗತಿಕ ಸೂಪರ್ ಪವರ್ ರಾಷ್ಟ್ರ: ವ್ಲಾಡಿಮಿರ್​ ಪುಟಿನ್ ಶ್ಲಾಘನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.