ETV Bharat / international

ನನ್ನಲ್ಲಿ ಕ್ಷಮೆಯಾಚಿಸಿದ ಜುಕರ್‌ಬರ್ಗ್, ತಮಗೆ ಸಂಬಂಧಿಸಿದ ಸುದ್ದಿಗಳನ್ನು ಗೂಗಲ್​ ಸೆನ್ಸಾರ್ ಮಾಡಿದೆ: ಟ್ರಂಪ್​ ಹೀಗೆ ಹೇಳಿದ್ಯಾಕೆ? - Trump attack on Google - TRUMP ATTACK ON GOOGLE

''ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಸೆನ್ಸಾರ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಈಗ ತನಗೆ ಸಂಬಂಧಿಸಿದ ಸುದ್ದಿಗಳನ್ನು ಗೂಗಲ್ ಸೆನ್ಸಾರ್ ಮಾಡಿದೆ. ಗೂಗಲ್ ಹೆಚ್ಚು ದಿನ ಉಳಿಯುವುದಿಲ್ಲ'' ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದರು.

oogle  FACEBOOK  Trump attack on Google  Donald Trump
ಡೊನಾಲ್ಡ್ ಟ್ರಂಪ್ (ANI)
author img

By PTI

Published : Aug 3, 2024, 7:11 AM IST

ವಾಷಿಂಗ್ಟನ್: ''ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಸೆನ್ಸಾರ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಆದ್ರೆ, ಡೆಮೋಕ್ರಾಟ್‌ಗೆ ಬೆಂಬಲಿಸುವುದಿಲ್ಲ ಎಂದು ಜುಕರ್‌ಬರ್ಗ್ ತಿಸಿಳಿದ್ದಾರೆ'' ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಗೂಗಲ್ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸುದ್ದಿ ಮತ್ತು ಚಿತ್ರಗಳನ್ನು ಸೆನ್ಸಾರ್ ಮಾಡಿದೆ. ಇದು ಗೂಗಲ್‌ನ ಅತ್ಯಂತ ಬೇಜವಾಬ್ದಾರಿ ವರ್ತನೆ ಎಂದು ಟ್ರಂಪ್ ಮತ್ತೊಂದು ಕಡೆ ಟೀಕಿಸಿದ್ದಾರೆ. ಟ್ರಂಪ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, "ಗೂಗಲ್ ತುಂಬಾ ಕೆಟ್ಟದು ಮತ್ತು ಬೇಜವಾಬ್ದಾರಿಯಾಗಿದೆ. ಗೂಗಲ್ ಬಂದ್​ ಆಗಲಿದೆ. ಏಕೆಂದರೆ, ಗೂಗಲ್​ ಕಾಂಗ್ರೆಸ್ ಅನ್ನು ನಿರ್ಲಕ್ಷ್ಯ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಇದು ಗೂಗಲ್‌ನ ಅತ್ಯಂತ ಬೇಜವಾಬ್ದಾರಿ ವರ್ತನೆಯಾಗಿದೆ" ಅವರು ಕಿಡಿಕಾರಿದ್ದಾರೆ.

ಈ ವಾರದ ಆರಂಭದಲ್ಲಿ, ಗೂಗಲ್‌ನಲ್ಲಿ ಜುಲೈ 13 ರಂದು ತನ್ನ ಮೇಲೆ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಫೋಟೋಗಳನ್ನು ಕಂಡುಹಿಡಿಯುವುದು ಅಸಾಧ್ಯವೆಂದು ಟ್ರಂಪ್ ಆರೋಪಿಸಿದ್ದರು. ಆದರೆ, ಈ ಎಲ್ಲಾ ಆರೋಪಗಳನ್ನು ಗೂಗಲ್ ತಳ್ಳಿಹಾಕಿದೆ. ಏಕೆಂದರೆ ಅದು ರಾಜಕೀಯ ಹಿಂಸಾಚಾರಕ್ಕೆ ಸಂಬಂಧಿಸಿದ ವಿಷಯವಾಗಿದೆ. ನಮ್ಮ ಸಿಸ್ಟಂಗಳು ಹೆಚ್ಚಿನ ಸಮಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಕ್ಷಮೆಯಾಚಿಸಿದ ಫೇಸ್‌ಬುಕ್ ಸಿಇಒ ಎಂದ ಟ್ರಂಪ್: ''ಫೇಸ್‌ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಇತ್ತೀಚೆಗೆ ತಮ್ಮನ್ನು ಸೆನ್ಸಾರ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಲು ಕರೆದಿದ್ದರು. ಮತ್ತು ಡೆಮೋಕ್ರಾಟ್​ಗೆ ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದರು. ನಿಜವಾಗಿಯೂ ಅವರು ರೀತಿ ಹೇಳಿದ್ದು ಅದ್ಭುತವಾಗಿದೆ ಮತ್ತು ತುಂಬಾ ಧೈರ್ಯಶಾಲಿಯಾಗಿದೆ" ಎಂದು ಡೊನಾಲ್ಡ್ ಟ್ರಂಪ್ ಇದೇ ವೇಳೆ ಜೂಕರ್​​​ ಬರ್ಗ್​ ಅವರನ್ನು ಹೊಗಳಿದ್ದಾರೆ.

ಚುನಾವಣೆಗೆ ಭಾರಿ ನಿಧಿ ಪಡೆಯುತ್ತಿರುವ ಟ್ರಂಪ್: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚಾರಕ್ಕಾಗಿ 130 ಮಿಲಿಯನ್​ ಡಾಲರ್​ಗಿಂತ ಹೆಚ್ಚು ಹಣವನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ. 'ಮೇಕ್ ಅಮೆರಿಕ ಗ್ರೇಟ್ ಎಗೇನ್ ಆಂದೋಲನದಂತಹ ಕಾರ್ಯಕ್ರಮಗಳು ಹಿಂದೆಂದೂ ಸಂಭವಿಸಿಲ್ಲ. ಜುಲೈ ತಿಂಗಳೊಂದರಲ್ಲೇ ನಾವು 139 ಮಿಲಿಯನ್ ಡಾಲರ್​ ಸಂಗ್ರಹಿಸಿದ್ದೇವೆ. ನಮ್ಮ ಬಳಿ ಈಗ 327 ಮಿಲಿಯನ್ ಡಾಲರ್​ ನಗದು ಇದೆ ಎಂದು ಟ್ರಂಪ್ ಘೋಷಿಸಿದ್ದಾರೆ.

ಇದನ್ನೂ ಓದಿ: ಖಲಿಸ್ತಾನಿ ಉಗ್ರ ಪನ್ನುನ್ ಹತ್ಯೆಗೆ ಸಂಚು ಪ್ರಕರಣ: ಭಾರತದಿಂದ ಉತ್ತರದಾಯಿತ್ವ ಬಯಸುತ್ತಿದೆ ಅಮೆರಿಕ - Gurpatwant Singh Pannun Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.