ತೈವಾನ್: ಚೀನಾ ಗಣರಾಜ್ಯದ 113 ನೇ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಮಾಡಿದ ಭಾಷಣದಲ್ಲಿ ತೈವಾನ್ ಅಧ್ಯಕ್ಷ ಲೈ ಚಿಂಗ್-ಟೆ ಅವರು ತೈವಾನ್ ಜಲಸಂಧಿ(2 ಸಾಗರವನ್ನು ಸೇರಿಸುವ ಭಾಗ)ಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ತಮ್ಮ ದೇಶದ ಬದ್ಧತೆಯನ್ನು ಪುನರುಚ್ಚರಿಸಿದರು. ಮತ್ತು ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಚೀನಾದೊಂದಿಗೆ ಸಹಕರಿಸಲು ತೈವಾನ್ ರಾಷ್ಟ್ರದ ಸಿದ್ಧತೆಯನ್ನು ವ್ಯಕ್ತಪಡಿಸಿದರು.
ಭಾಷಣದಲ್ಲಿ ಅಧ್ಯಕ್ಷ ಲೈ ಅವರು, "ಸಮಾನತೆ ಮತ್ತು ಘನತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, ದೇಶದಲ್ಲಿನ ಶಾಂತಿಯ ನಾಲ್ಕು ಸ್ತಂಭ(ಆರ್ಥಿಕ, ಪ್ರಜಾಸತ್ತಾತ್ಮಕ, ಮಿಲಿಟರಿ, ಅಂತಾರಾಷ್ಟ್ರೀಯ ಸ್ಥಿತಿಸ್ಥಾಪಕತ್ವ)ಗಳ ಅಡಿಯಲ್ಲಿ ನಾವು ರಾಷ್ಟ್ರೀಯ ರಕ್ಷಣೆಯನ್ನು ಮತ್ತಷ್ಟು ಬಲಪಡಿಸುತ್ತೇವೆ ಮತ್ತು ತೈವಾನ್ನನ್ನು ರಕ್ಷಿಸುತ್ತೇವೆ. ಹವಾಮಾನ ಬದಲಾವಣೆ ಮತ್ತು ಸರ್ವಾಧಿಕಾರಿ ವಿಸ್ತರಣೆ ಸೇರಿದಂತೆ ಜಾಗತಿಕ ಸವಾಲುಗಳನ್ನು ಎದುರಿಸಲು, ಮೂರು ಹೊಸ ಸಮಿತಿಗಳನ್ನು ಸ್ಥಾಪಿಸಲಾಗಿದೆ. ಅವುಗಳು ರಾಷ್ಟ್ರೀಯ ಹವಾಮಾನ ಬದಲಾವಣೆ ಸಮಿತಿ, ಆರೋಗ್ಯಕರ ತೈವಾನ್ ಪ್ರಚಾರ ಸಮಿತಿ, ಮತ್ತು ಸಂಪೂರ್ಣ - ಸಮಾಜದ ರಕ್ಷಣಾ ಸ್ಥಿತಿಸ್ಥಾಪಕತ್ವ ಸಮಿತಿ. ಈ ಮೂರು ಸಮಿತಿಗಳು ಪರಸ್ಪರ ಸಂಬಂಧ ಹೊಂದಿದ್ದು, ರಾಷ್ಟ್ರೀಯ ಸ್ಥಿತಿಸ್ಥಾಪಕತ್ವಕ್ಕೆ ನಿಕಟವಾಗಿದೆ" ಎಂದು ಹೇಳಿದರು.
At 10:50 p.m. (UTC+8), China launched satellites from #XSLC, with the flight path over central Taiwan and heading toward the Western Pacific. The altitude is beyond the atmosphere and poses no threat. #ROCArmedForces monitored the process and stand ready to respond if needed.
— 國防部 Ministry of National Defense, ROC(Taiwan) 🇹🇼 (@MoNDefense) October 10, 2024
ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯೇ ನಮ್ಮ ಉದ್ದೇಶ: ಮುಂದುವರೆದು ಭಾಷಣದಲ್ಲಿ, "ಈ ಮೂರು ಸಮಿತಿಯ ಉದ್ದೇಶ ಸವಾಲುಗಳಿಗೆ ಉತ್ತಮ ಪ್ರತಿಕ್ರಿಯೆಗಳನ್ನು ನೀಡುವುದು ಮತ್ತು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ನಿಕಟ ಸಹಕಾರವನ್ನು ಬೆಳೆಸುವುದಾಗಿದೆ. ತೈವಾನ್ ಹಸಿರು ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಮತ್ತು 2050 ರ ವೇಳೆಗೆ ನಿವ್ವಳ ಶೂನ್ಯದ ಜಾಗತಿಕ ಗುರಿ ಸಾಧಿಸಲು ಶಕ್ತಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸುತ್ತಿದೆ. ಕ್ರಾಸ್ - ಸ್ಟ್ರೈಟ್ ಸಂಬಂಧಗಳನ್ನು ಎತ್ತಿ ತೋರಿಸುತ್ತಿರುವಾಗ, ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಎತ್ತಿಹಿಡಿಯಲು ತೈವಾನ್ ನಿರ್ಧರಿಸಿದೆ" ಎಂದು ಅಧ್ಯಕ್ಷ ಲೈ ಚಿಂಗ್ ದೃಢಪಡಿಸಿದ್ದಾರೆ.
"ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತೈವಾನ್ ಜಲಸಂಧಿಯ ಎರಡೂ ಬದಿಗಳ ಜನರ ಅನುಕೂಲಕ್ಕಾಗಿ ಪ್ರಾದೇಶಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಚೀನಾದೊಂದಿಗೆ ಸಹಕರಿಸಲು ರಾಷ್ಟ್ರವು ಸಿದ್ಧವಾಗಿದೆ. ಇದಲ್ಲದೇ, ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಅಂತ್ಯಗೊಳಿಸಲು ಸಹಾಯ ಮಾಡಲು, ಚೀನಾ ತನ್ನ ಪ್ರಭಾವವನ್ನು ಬಳಸಬಹುದು. ಚೀನಾ ತನ್ನ ಸಾಮರ್ಥ್ಯದ ಮೂಲಕ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡುವಂತೆ" ಚೀನಾವನ್ನು ಅಧ್ಯಕ್ಷ ಲೈ ಚಿಂಗ್ ಒತ್ತಾಯಿಸಿದರು.
ಇನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಈ ವರ್ಷದ ಚೀನಾ ಗಣರಾಜ್ಯದ ರಾಷ್ಟ್ರೀಯ ದಿನಾಚರಣೆಯು ಸರಿಸುಮಾರು 183 ವಿಶಿಷ್ಟ ವಿದೇಶಿ ಅತಿಥಿಗಳನ್ನು ಸೆಳೆದಿದೆ. ಇದರಲ್ಲಿ 14 ಅಧಿಕೃತ ನಿಯೋಗಗಳು ಮತ್ತು 91 ರಾಜತಾಂತ್ರಿಕ ಕಾರ್ಯಗಳ ಪ್ರತಿನಿಧಿಗಳು, ಮಿತ್ರರಾಷ್ಟ್ರಗಳು ಮತ್ತು ಮಿತ್ರರಾಷ್ಟ್ರಗಳಲ್ಲದವರು ಸೇರಿದ್ದಾರೆ.
ಚೀನಾ ಉಪಗ್ರಹ ಉಡಾವಣೆ: ಅದೇ ದಿನ ಚೀನಾ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಕೇಂದ್ರ ತೈವಾನ್‌ನ ಮೇಲೆ ಮತ್ತು ಪಶ್ಚಿಮ ಪೆಸಿಫಿಕ್ ಕಡೆಗೆ ಹಾರುವ ಮಾರ್ಗದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
ಈ ಬಗ್ಗೆ ತೈವಾನ್ ರಕ್ಷಣಾ ಸಚಿವಾಲಯವು X ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ ಮತ್ತು ಹೀಗೆ ಹೇಳಿದೆ, "ರಾತ್ರಿ 10:50 ಗಂಟೆಗೆ (UTC+8), ಚೀನಾ #XSLC ನಿಂದ ಉಪಗ್ರಹಗಳನ್ನು ಉಡಾಯಿಸಿತು. ಮಧ್ಯ ತೈವಾನ್‌ನ ಮೇಲೆ ಮತ್ತು ಪಶ್ಚಿಮ ಪೆಸಿಫಿಕ್‌ನತ್ತ ಉಪಗ್ರಹ ಸಾಗುತ್ತಿದೆ. ಆದರೆ, ಯಾವುದೇ ಅಪಾಯವಿಲ್ಲ. #ROCArmedForces ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದೆ ಮತ್ತು ಅಗತ್ಯವಿದ್ದರೆ ಪ್ರತಿಕ್ರಿಯಿಸಲು ಸಿದ್ಧವಾಗಿದೆ" ಎಂದು ತಿಳಿಸಿದೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದ ಲೇಖಕಿ ಹನ್ ಕಾಂಗ್ರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ಗರಿ