ETV Bharat / international

ಶ್ರೀಲಂಕಾ ಅಧ್ಯಕ್ಷರಾಗುವತ್ತ ದಿಸ್ಸಾನಾಯಕೆ ದಾಪುಗಾಲು: ಅಜೇಯ ಮುನ್ನಡೆ ಸಾಧಿಸಿದ ಎಡಪಂಥೀಯ ನಾಯಕ - Sri Lanka Presidential Election - SRI LANKA PRESIDENTIAL ELECTION

ಶ್ರೀಲಂಕಾದ ಚುನಾವಣಾ ಫಲಿತಾಂಶಗಳಲ್ಲಿ ಎಡಪಂಥೀಯ ನಾಯಕ ದಿಸ್ಸಾನಾಯಕೆ ಮುನ್ನಡೆ ಸಾಧಿಸಿದ್ದಾರೆ.

ಅನುರಾ ಕುಮಾರ ದಿಸ್ಸಾನಾಯಕೆ
ಅನುರಾ ಕುಮಾರ ದಿಸ್ಸಾನಾಯಕೆ (IANS)
author img

By PTI

Published : Sep 22, 2024, 2:01 PM IST

ಕೊಲಂಬೊ: ಎಡಪಂಥೀಯ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಅವರು ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯ ಹೊತ್ತಿಗೆ ಶೇಕಡಾ 52ರಷ್ಟು ಮತಗಳನ್ನು ಗಳಿಸುವ ಮೂಲಕ ಗೆಲುವು ದಾಖಲಿಸುವ ಸನಿಹದಲ್ಲಿದ್ದಾರೆ. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಶೇಕಡಾ 16ರಷ್ಟು ಮತಗಳನ್ನು ಪಡೆದು 2,35,000 ಮತಗಳಿಂದ ಹಿಂದುಳಿದಿದ್ದಾರೆ. 22 ಚುನಾವಣಾ ಜಿಲ್ಲೆಗಳ 13,400ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶನಿವಾರ ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಮತದಾನ ನಡೆದಿತ್ತು.

56 ವರ್ಷದ ದಿಸ್ಸಾನಾಯಕೆ ತಮ್ಮ ಪ್ರತಿಸ್ಪರ್ಧಿಗಳಾದ ಪ್ರಮುಖ ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ (57) ಮತ್ತು ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (75) ಅವರಿಗಿಂತ ಅಜೇಯ ಮುನ್ನಡೆ ಸಾಧಿಸಿದ್ದಾರೆ.

2022ರಲ್ಲಿ ದೇಶ ಕಂಡ ಅತಿದೊಡ್ಡ ಆರ್ಥಿಕ ಬಿಕ್ಕಟ್ಟಿನ ನಂತರ ನಡೆದ ಮೊದಲ ಚುನಾವಣೆಯಲ್ಲಿ, ಶ್ರೀಲಂಕಾದ 10ನೇ ಅಧ್ಯಕ್ಷರ ಆಯ್ಕೆಗಾಗಿ ಶನಿವಾರ ಮತದಾನ ನಡೆದಿತ್ತು.

ರಾಜಪಕ್ಸೆ ಅವರ ಉತ್ತರಾಧಿಕಾರಿಯಾಗಿ ಅಧಿಕಾರಕ್ಕೆ ಬಂದು, ಶ್ರೀಲಂಕಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವ ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಪುನರಾಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಜನತಾ ವಿಮುಕ್ತಿ ಪೆರಮುನಾ (ಜೆವಿಪಿ) ಪಕ್ಷದ ಅನುರಾ ಕುಮಾರ ದಿಸ್ಸಾನಾಯಕೆ ಮತ್ತು ಸಮಗಿ ಜನ ಬಲವೇಗಯಾ (ಎಸ್​ಜೆಬಿ) ಪಕ್ಷದ ಸಜಿತ್ ಪ್ರೇಮದಾಸ ಅವರಿಂದ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ.

22 ಚುನಾವಣಾ ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳ ಅಂಚೆ ಮತದಾನದ ಘೋಷಿತ ಫಲಿತಾಂಶಗಳ ಪ್ರಕಾರ, ಎನ್​ಪಿಪಿ ನಾಯಕ ದಿಸ್ಸಾನಾಯಕೆ ಶೇಕಡಾ 56ರಷ್ಟು ಮತಗಳನ್ನು ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿಗಳು ತಲಾ ಶೇಕಡಾ 19ರಷ್ಟು ಮತಗಳನ್ನು ಪಡೆಯುವ ಮೂಲಕ ಹಿನ್ನಡೆಯಲ್ಲಿದ್ದಾರೆ.

ಅಂಚೆ ಮತದಾನದ ಫಲಿತಾಂಶಗಳ ಟ್ರೆಂಡ್​ಗಳನ್ನು ನೋಡಿದರೆ ದಿಸ್ಸಾನಾಯಕೆ ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಶ್ರೀಲಂಕಾದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡಿದ್ದ ದಿಸ್ಸಾನಾಯಕೆ ಅವರ ಮಾರ್ಕ್ಸ್​ವಾದಿ ಪಕ್ಷವು 1970 ಮತ್ತು 1980ರ ದಶಕಗಳಲ್ಲಿ ನಡೆಸಿದ ದಂಗೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಆಗಸ್ಟ್ 2020ರಲ್ಲಿ ನಡೆದ ಈ ಹಿಂದಿನ ಸಂಸದೀಯ ಚುನಾವಣೆಯಲ್ಲಿ ಈ ಪಕ್ಷವು ಶೇಕಡಾ 4ಕ್ಕಿಂತ ಕಡಿಮೆ ಮತಗಳನ್ನು ಗಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.