ETV Bharat / international

'ಯುಎಇಯಲ್ಲಿ ಶಾಪಿಂಗ್​ ಮಾಡಿ, ರೂಪಾಯಿಯಲ್ಲೇ ಪಾವತಿಸಿ': ಭಾರತದ UPI ಕಮಾಲ್! - UPI in UAE - UPI IN UAE

ಯುಎಇ ಯಲ್ಲಿನ ಕೆಲ ಹೆಸರಾಂತ ವ್ಯಾಪಾರಿ ಕಂಪನಿಗಳು ಯುಪಿಐ ಮೂಲಕ ಭಾರತೀಯ ರೂಪಾಯಿಯಲ್ಲೇ ಹಣ ಸ್ವೀಕರಿಸಲು ಆರಂಭಿಸಿವೆ.

ಯುಪಿಐ
ಯುಪಿಐ (IANS)
author img

By ETV Bharat Karnataka Team

Published : Aug 18, 2024, 1:06 PM IST

ನವದೆಹಲಿ: ಯುಪಿಐ ವ್ಯವಸ್ಥೆಯನ್ನು ಜಾಗತಿಕ ಪಾವತಿ ವೇದಿಕೆಯಾಗಿಸುವ ಭಾರತ ಸರ್ಕಾರದ ಪ್ರಯತ್ನಕ್ಕೆ ದೊಡ್ಡದೊಂದು ಯಶಸ್ಸು ಸಿಕ್ಕಿದೆ. ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ನಲ್ಲಿನ ಕೆಲ ಪ್ರಮುಖ ವ್ಯಾಪಾರಿ ಕಂಪನಿಗಳು ಭಾರತೀಯ ಗ್ರಾಹಕರನ್ನು ಆಕರ್ಷಿಸಲು ಯುಪಿಐ ಮೂಲಕ ಭಾರತದ ರೂಪಾಯಿಗಳಲ್ಲೇ ಪೇಮೆಂಟ್​ಗಳನ್ನು ಸ್ವೀಕರಿಸಲು ಆರಂಭಿಸಿವೆ.

ಯುಎಇಯ ಅತಿದೊಡ್ಡ ರಿಟೇಲ್ ವ್ಯಾಪಾರ ಮಳಿಗೆಗಳಲ್ಲಿ ಒಂದಾದ ಒಂದಾದ ಲುಲು ದೇಶದ ತನ್ನ ಎಲ್ಲಾ ಮಳಿಗೆಗಳಲ್ಲಿ ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲು ಪ್ರಾರಂಭಿಸಿದೆ.

ಭಾರತೀಯ ನಾಗರಿಕರು ಭಾರತದಲ್ಲಿರುವಂತೆಯೇ ಯುಪಿಐ ಅಪ್ಲಿಕೇಶನ್ ಬಳಸಿ ಸುಲಭವಾಗಿ ಪಾವತಿ ಮಾಡಬಹುದು. ಪಾವತಿಸಿದ ಮೊತ್ತವನ್ನು ಭಾರತದಲ್ಲಿನ ಅವರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಈ ಮೂಲಕ ಭಾರತೀಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು ಯುಪಿಐ ಮೂಲಕ ಯುಎಇಯಲ್ಲಿ ಭಾರತೀಯ ರೂಪಾಯಿಗಳನ್ನು ಬಳಸಿ ಸುಲಭವಾಗಿ ಶಾಪಿಂಗ್ ಮಾಡಬಹುದು.

ಜುಲೈ ಆರಂಭದಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ಮೊದಲ ಬಾರಿಗೆ ಯುಎಇಯಲ್ಲಿ ಪ್ರಾರಂಭಿಸಲಾಗಿದೆ. ಲುಲು ಮಾತ್ರವಲ್ಲದೆ ಯುಎಇಯಾದ್ಯಂತದ ಅನೇಕ ದೊಡ್ಡ ಮತ್ತು ಸಣ್ಣ ವ್ಯಾಪಾರಿ ಸಂಸ್ಥೆಗಳು ಈಗ ಯುಪಿಐ ಮೂಲಕ ಹಣ ಸ್ವೀಕರಿಸುತ್ತಿವೆ. ಯುಎಇಯಲ್ಲಿರುವ ಭಾರತೀಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್​ ಮಾಡಿ ಯುಪಿಐ ಮೂಲಕ ಸುಲಭವಾಗಿ ಪಾವತಿಸಬಹುದು.

ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ಸದಸ್ಯ ದೇಶಗಳಿಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರ ಸಂಖ್ಯೆ 2024 ರಲ್ಲಿ 98 ಲಕ್ಷ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಯುಎಇ ಒಂದೇ ದೇಶಕ್ಕೆ ಪ್ರಯಾಣಿಸುವ ಭಾರತೀಯರ ಸಂಖ್ಯೆ ಸುಮಾರು 53 ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಎನ್​ಪಿಸಿಐ ಅಂದಾಜಿಸಿದೆ.

ಜಾಗತಿಕ ವೇದಿಕೆಯಲ್ಲಿ ಯುಪಿಐ ಅನ್ನು ಉತ್ತೇಜಿಸಲು ಭಾರತ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಮತ್ತು ಎನ್​ಪಿಸಿಐ ಇಂಟರ್ ನ್ಯಾಷನಲ್ ಒಟ್ಟಾಗಿ ಪ್ರಯತ್ನಗಳನ್ನು ಮಾಡುತ್ತಿವೆ. ನೇಪಾಳ, ಶ್ರೀಲಂಕಾ, ಮಾರಿಷಸ್, ಯುಎಇ, ಸಿಂಗಾಪುರ್, ಫ್ರಾನ್ಸ್ ಮತ್ತು ಭೂತಾನ್ ದೇಶಗಳಲ್ಲಿ ಯುಪಿಐ ಅನ್ನು ಅಧಿಕೃತ ಪಾವತಿ ವೇದಿಕೆಯಾಗಿ ಸ್ವೀಕರಿಸಲಾಗಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಆಧರಿತ ವಹಿವಾಟುಗಳು ಜುಲೈ ತಿಂಗಳಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 35 ರಷ್ಟು ಏರಿಕೆಯಾಗಿದ್ದು, 20.07 ಲಕ್ಷ ಕೋಟಿ ರೂ.ಗಳಿಂದ 20.64 ಲಕ್ಷ ಕೋಟಿ ರೂ.ಗೆ ತಲುಪಿದೆ. ಒಟ್ಟು ಯುಪಿಐ ವಹಿವಾಟಿನ ಸಂಖ್ಯೆ ಜುಲೈನಲ್ಲಿ ಸುಮಾರು 4 ಶೇಕಡಾ (ತಿಂಗಳಿಗೊಮ್ಮೆ) ಹೆಚ್ಚಳವಾಗಿ 14.44 ಬಿಲಿಯನ್​ಗೆ ಏರಿಕೆಯಾಗಿದೆ.

ಇದನ್ನೂ ಓದಿ : 6,915 ಕೋಟಿ ರೂ.ಗೆ ತಲುಪಿದ ಭಾರತದ ರಕ್ಷಣಾ ಸಾಮಗ್ರಿ ರಫ್ತು: ಶೇ 78ರಷ್ಟು ಹೆಚ್ಚಳ - Indias Defence Exports

ETV Bharat Logo

Copyright © 2025 Ushodaya Enterprises Pvt. Ltd., All Rights Reserved.