ETV Bharat / international

ಸುಡಾನ್​ನಲ್ಲಿ ಭೀಕರ ಆಹಾರ ಕ್ಷಾಮ: ಎಲೆ, ಕೀಟ ತಿಂದು ಜೀವನ ಸಾಗಿಸುತ್ತಿರುವ ಜನ - Sudan hunger crisis - SUDAN HUNGER CRISIS

ಸುಡಾನ್​ನಲ್ಲಿ ಆಹಾರ ಕ್ಷಾಮದಿಂದ ಪ್ರತಿದಿನ ಜನ ಸಾಯುತ್ತಿದ್ದಾರೆ ಎಂದು ಮಾನವೀಯ ನೆರವು ಸಂಘಟನೆಗಳು ಹೇಳಿವೆ.

ಸುಡಾನ್​ ನಿರಾಶ್ರಿತರು
ಸುಡಾನ್​ ನಿರಾಶ್ರಿತರು (IANS)
author img

By ETV Bharat Karnataka Team

Published : Sep 4, 2024, 6:40 PM IST

ಖಾರ್ಟೂಮ್: ಸುಡಾನ್​ನಲ್ಲಿ ಈ ಹಿಂದೆ ಎಂದೂ ಕಾಣದಷ್ಟು ಭೀಕರ ಹಸಿವಿನ ಬರ ಎದುರಿಸುತ್ತಿದೆ ಎಂದು ಮೂರು ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳು ಗಂಭೀರ ಎಚ್ಚರಿಕೆ ನೀಡಿವೆ. ಸುಡಾನ್​ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಸಂಪೂರ್ಣ ನಿರ್ಲಕ್ಷ್ಯದ ಮಧ್ಯೆ ಅಲ್ಲಿನ ಜನ ಹಸಿವಿನಿಂದ ಸಾಯುತ್ತಿದ್ದಾರೆ ಎಂದು ನಾರ್ವೇಜಿಯನ್ ನಿರಾಶ್ರಿತರ ಮಂಡಳಿ, ಡ್ಯಾನಿಶ್ ನಿರಾಶ್ರಿತರ ಮಂಡಳಿ ಮತ್ತು ಮರ್ಸಿ ಕಾರ್ಪ್ಸ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

"ಇತ್ತೀಚಿನ ತಿಂಗಳುಗಳಲ್ಲಿ ಸುಡಾನ್ ಜನರು ಅನುಭವಿಸಿದ ಯಾತನೆಯ ಮಟ್ಟವನ್ನು ಕೇವಲ ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ" ಎಂದು ಮಾನವೀಯ ನೆರವು ಸಂಘಟನೆಗಳು ತಿಳಿಸಿವೆ. ವಿಶ್ವಸಂಸ್ಥೆ ನೇತೃತ್ವದ ಮಾನವೀಯ ನೆರವಿಗೆ ಅಗತ್ಯವಾದ ಧನಸಹಾಯದ ಪೈಕಿ ಕೇವಲ 41 ಪ್ರತಿಶತದಷ್ಟು ಮಾತ್ರ ಲಭ್ಯವಾಗುತ್ತಿದ್ದು, ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ತೀರಾ ಕಡಿಮೆಯಾಗಿದೆ ಎಂದು ಅವು ಹೇಳಿವೆ.

"ಸುಡಾನ್​ನಲ್ಲಿ ಜನರು ಪ್ರತಿದಿನ ಹಸಿವಿನಿಂದ ಸಾಯುತ್ತಿದ್ದಾರೆ. ಆದರೆ, ಈ ಬಗ್ಗೆ ಕೇವಲ ಚರ್ಚೆಗಳಾಗುತ್ತಿವೆ ಮತ್ತು ಕಾನೂನುಗಳನ್ನು ವ್ಯಾಖ್ಯಾನಿಸಲಾಗುತ್ತಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಮೌನ ಕಠೋರವಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸುಡಾನ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಅಂದರೆ 25 ದಶಲಕ್ಷಕ್ಕೂ ಹೆಚ್ಚು ಜನ ತೀವ್ರ ಆಹಾರ ಕೊರತೆ ಎದುರಿಸುತ್ತಿದ್ದಾರೆ. ಅನೇಕ ಕುಟುಂಬಗಳು ದಿನಕ್ಕೆ ಒಂದೇ ಒಂದು ಊಟ ಮಾಡಿ ಬದುಕುವಂತಾಗಿದೆ. ಅಲ್ಲದೇ ಇನ್ನೂ ಕೆಲ ಕುಟುಂಬಗಳು ಎಲೆ ಅಥವಾ ಕೀಟಗಳನ್ನು ತಿಂದು ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾನವೀಯ ನೆರವು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

ಸುಡಾನ್​ನ ಕೆಲ ಪ್ರದೇಶಗಳಲ್ಲಿ ಆಹಾರ ಕ್ಷಾಮ ಎದುರಾಗಲಿದೆ ಎಂದು ಯುಎನ್ ಈ ಹಿಂದೆಯೇ ಎಚ್ಚರಿಸಿತ್ತು. ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಸಮಿತಿಯು ಪ್ರಸ್ತುತ ಆಹಾರ ಕ್ಷಾಮ ಎಷ್ಟು ಭೀಕರವಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದೆ. ಆದರೆ, ಸುಡಾನ್ ಸರ್ಕಾರ ಈ ಹೇಳಿಕೆಗಳನ್ನು ನಿರಾಕರಿಸಿದ್ದು, ಆಹಾರ ಕ್ಷಾಮ ಇಲ್ಲ ಎಂದಿದೆ.

ಏಪ್ರಿಲ್ 2023 ರಲ್ಲಿ ಸುಡಾನ್ ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಸಂಘರ್ಷ ಪ್ರಾರಂಭವಾದಾಗಿನಿಂದ, ದೇಶದಲ್ಲಿ ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದಾರೆ. ದೀರ್ಘಕಾಲದಿಂದ ನಡೆಯುತ್ತಿರುವ ಹಿಂಸಾಚಾರದಿಂದ ದೇಶ ಆರ್ಥಿಕವಾಗಿ ದುರ್ಬಲವಾಗಿದೆ ಮತ್ತು ಅಗತ್ಯ ಸೇವೆಗಳು ಲಭ್ಯವಾಗದೇ ಮಾನವೀಯ ಬಿಕ್ಕಟ್ಟು ತೀವ್ರವಾಗಿದೆ.

ಇದನ್ನೂ ಓದಿ : ಪ್ರವಾಹ ಹಾನಿ ತಡೆಗೆ ವಿಫಲರಾದ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ - KIM ORDERS EXECUTION

ETV Bharat Logo

Copyright © 2025 Ushodaya Enterprises Pvt. Ltd., All Rights Reserved.