ETV Bharat / international

ಪಪುವಾ ನ್ಯೂಗಿನ ಬುಡಕಟ್ಟು ಹಿಂಸಾಚಾರ: 53 ಮಂದಿಯ ಕಗ್ಗೊಲೆ

ಪಪುವಾ ನ್ಯೂಗಿನಯ ಪ್ರಾಂತ್ಯವೊದರಲ್ಲಿ ಬುಡಕ್ಕಟುಗಳ ನಡುವಣ ಹಿಂಸಾಚಾರದಲ್ಲಿ 53 ಮಂದಿಯನ್ನು ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.

author img

By PTI

Published : Feb 19, 2024, 6:34 AM IST

ಪಪುವಾ ನ್ಯೂಗಿನ ಬುಡಕಟ್ಟು ಹಿಂಸಾಚಾರ: 53 ಮಂದಿಯ ಕಗ್ಗೊಲೆ
ಪಪುವಾ ನ್ಯೂಗಿನ ಬುಡಕಟ್ಟು ಹಿಂಸಾಚಾರ: 53 ಮಂದಿಯ ಕಗ್ಗೊಲೆ

ಮೆಲ್ಬೋರ್ನ್​( ಆಸ್ಟ್ರೇಲಿಯಾ): ಪಪುವಾ ನ್ಯೂಗಿನಿಯಾದಲ್ಲಿ ಬುಡಕಟ್ಟು ಹಿಂಸಾಚಾರದಲ್ಲಿ 53 ಮಂದಿಯನ್ನು ಕಗ್ಗೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮ ಸೋಮವಾರ ವರದಿ ಮಾಡಿದೆ. ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರದ ಎಂಗಾ ಪ್ರಾಂತ್ಯದಲ್ಲಿ ಹೊಂಚು ದಾಳಿಯಲ್ಲಿ ಹಲವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪ್ ವರದಿ ಮಾಡಿದೆ.

ಪೋರ್ಟ್ ಮೊರೆಸ್ಬಿಯ ರಾಜಧಾನಿಯ ಪೊಲೀಸರು ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರದೇಶದಲ್ಲಿ ನಡೆಯುತ್ತಿರುವ ಬುಡಕಟ್ಟು ಹಿಂಸಾಚಾರದಲ್ಲಿ ಭಾರಿ ಸಾವು ನೋವಿನ ವರದಿಯಾಗಿದೆ. ಬುಡಕ್ಕಟು ವರ್ಗದಲ್ಲಿ ಆಂತರಿಕ ಕಲಹದಿಂದಾಗಿ ಈ ಹತ್ಯಾಕಾಂಡ ನಡೆದಿದೆ ಎಂದು ತಿಳಿದು ಬಂದಿದೆ. ಈ ಪ್ರಾಂತ್ಯದಲ್ಲಿ ನಡೆದ ಹಿಂಚಾಸಾರದ ಚಿತ್ರಗಳು ಸಹ ಲಭ್ಯವಾಗಿದ್ದು, ಇದರಲ್ಲಿ ಪೊಲೀಸರು ಮೃತ ದೇಹಗಳನ್ನು ಟ್ರಕ್​ಗೆ ತುಂಬುತ್ತಿರುವ ಚಿತ್ರಗಳು ಸಿಕ್ಕಿವೆ ಎಂದು ಎಬಿಸಿ ವರದಿ ಮಾಡಿದೆ. ಹತ್ಯಾಕಾಂಡ ಯಾವಾಗ ನಡೆಯಿತು ಎಂಬ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನು ಓದಿ: ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಸ್ಫೋಟ: ವ್ಯಾಪಾರಿಗೆ ಗಾಯ, ದಂಪತಿ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.