ETV Bharat / international

ಪೋಲಿಯೋಮುಕ್ತ ಪಾಕಿಸ್ತಾನ ನಿರ್ಮಾಣಕ್ಕೆ ಅವಿರಹಿತ ಪ್ರಯತ್ನ: ಪ್ರಧಾನಿ ಶೆಹಬಾಜ್ ಷರೀಫ್​ - Polio - POLIO

ಬಿಲ್ ಆ್ಯಂಡ್​ ಮಿಲಿಂದಾ ಗೇಟ್ಸ್​ ಸಂಸ್ಥಾಪಕ ಬಿಲ್​ ಗೇಟ್ಸ್​​ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಪೋಲಿಯೋಮುಕ್ತ ಪಾಕಿಸ್ತಾನದ ಕುರಿತು ಪ್ರಧಾನಿ ಶೆಹಬಾಜ್ ಷರೀಫ್​ ತಿಳಿಸಿದರು.

pakistan-working-hard-to-eradicate-polio-pm-shehbaz-assures-bill-gates

author img

By PTI

Published : Apr 29, 2024, 3:40 PM IST

ಇಸ್ಲಾಮಾಬಾದ್​: ವಿಶ್ವದ ಎಲ್ಲಾ ದೇಶಗಳು ಪೋಲಿಯೋ ರೋಗದಿಂದ ಮುಕ್ತವಾಗಿದ್ದರೂ ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನ ಇನ್ನೂ ಹೊರಬಂದಿಲ್ಲ. ಈ ಕುರಿತು ಮಾತನಾಡಿರುವ ಪಾಕ್ ಪ್ರಧಾನಿ ಶೆಹಬಾಜ್​ ಷರೀಫ್​​, "ದೇಶದಲ್ಲಿ ಪೋಲಿಯೋ ನಿರ್ಮೂಲನೆಗೆ ಅವಿರಹಿತ ಶ್ರಮ ವಹಿಸಲಾಗುತ್ತಿದೆ. ಈ ಗುರಿ ಸಾಧನೆಗೆ ಎಲ್ಲಾ ಭಾಗಿದಾರರ ನಿರಂತರ ಸಹಕಾರ ಅಗತ್ಯ" ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾದ ರಿಯಾದ್​​ನಲ್ಲಿ ನಡೆಯುತ್ತಿರುವ ಎರಡು ದಿನಗಳ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅವರು ಮಾತನಾಡಿದರು. ಬಿಲ್ ಆ್ಯಂಡ್​ ಮಿಲಿಂದಾ ಗೇಟ್ಸ್​ ಸಂಸ್ಥಾಪಕ ಬಿಲ್​ ಗೇಟ್ಸ್​​ ಜೊತೆಗಿನ ಚರ್ಚೆಯ ವೇಳೆ ಈ ವಿಚಾರವನ್ನು ಅವರು ಪ್ರಸ್ತಾಪಿಸಿದರು.

ವಿಶ್ವ ಆರ್ಥಿಕ ವೇದಿಕೆಯ ವಿಶೇಷ ಸಭೆಯಲ್ಲಿ ಪಾಕ್ ಪ್ರಧಾನಿ​ ಜೊತೆಗೆ ಚರ್ಚಿಸಿದ ಗೇಟ್ಸ್​​, ಶರೀಫ್​ ನಾಯಕತ್ವದಲ್ಲಿ ಪಂಜಾಬ್​​ ಪ್ರಾಂತ್ಯದಲ್ಲಿರುವ ಪೋಲಿಯೋ ಲಸಿಕೀಕರಣದ ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ, ದೇಶದೆಲ್ಲೆಡೆ ಈ ಕ್ರಮವನ್ನು ಜಾರಿಗೆ ತರುವಂತೆಯೂ ತಿಳಿಸಿದರು ಎಂದು ಎಕ್ಸ್​ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಫೆಬ್ರವರಿ 2022ರಲ್ಲಿ ಬಿಲ್ ಗೇಟ್ಸ್‌ ಅವರ ಪಾಕಿಸ್ತಾನದ ಭೇಟಿಯನ್ನು ನೆನಪಿಸಿಕೊಂಡ ಷರೀಫ್, ಮತ್ತೊಮ್ಮೆ ಪಾಕಿಸ್ತಾನಕ್ಕೆ ಬರುವಂತೆಯೂ ಆಹ್ವಾನ ನೀಡಿದರು. ಗೇಟ್ಸ್​ ಸಂಸ್ಥೆ ಹಾಗೂ ಪಾಕಿಸ್ತಾನದ ನಡುವೆ ಬಲವಾದ ಸಂಬಂಧವನ್ನು ಖಚಿತಗೊಳಿಸಲು ಕೆಲಸವನ್ನು ಮುಂದುವರೆಸುವಂತೆಯೂ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಷರೀಫ್​​​ ಮತ್ತು ಗೇಟ್ಸ್‌​ ಉನ್ನತ ಮಟ್ಟದ ಸಮಿತಿಯ ಚರ್ಚೆ ನಡೆಸಿದರು. ವಿಶ್ವ ಆರ್ಥಿಕ ವೇದಿಕೆಯ 'ರಿಡಿಫೈನಿಂಗ್​ ದಿ ಗ್ಲೋಬಲ್​ ಹೆಲ್ತ್​ ಅಜೆಂಡಾ'ದಲ್ಲಿ ಅವರು ಮಾತುಕತೆ ನಡೆಸಿದ್ದಾರೆ. ಈ ವೇಳೆ, ಪಾಕಿಸ್ತಾನದಲ್ಲಿ ಪೋಲಿಯೋ ನಿರ್ಮೂಲನೆಗೆ ದೀರ್ಘಾವಧಿಯಲ್ಲಿ ನಮ್ಮನ್ನು ಬೆಂಬಲಿಸಿದ್ದಕ್ಕೆ ಬಿಲ್‌ ಗೇಟ್ಸ್‌​​ಗೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಪಾಕಿಸ್ತಾನ: ಪೋಲಿಯೋ ಕಾರ್ಮಿಕರ ಬೆಂಗಾವಲಿಗಿದ್ದ ಪೊಲೀಸ್​​ಗೆ ಗುಂಡಿಕ್ಕಿ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.