ETV Bharat / international

ಪಾಕ್​​​ನಲ್ಲಿ ನಿಲ್ಲದ ಉಗ್ರರ ಹಾವಳಿ: ಪ್ರತ್ಯೇಕ ಕಾರ್ಯಾಚರಣೆಯಲ್ಲಿ 7 ಭಯೋತ್ಪಾದಕರ ಎನ್​​​ಕೌಂಟರ್​

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಹಿಂಸಾಚಾರ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭಾರಿ ಪ್ರಮಾಣದಲ್ಲಿ ಸಾವುನೋವುಗಳು ಸಂಭವಿಸಿವೆ.

PAK-TERRORISTS
ಪಾಕ್​​​ನಲ್ಲಿ ನಿಲ್ಲದ ಉಗ್ರರ ಹಾವಳಿ: ಪ್ರತ್ಯೇಕ ಕಾರ್ಯಾಚರಣೆಯಲ್ಲಿ 7 ಭಯೋತ್ಪಾದಕರ ಎನ್​​​ಕೌಂಟರ್​ (ANI)
author img

By PTI

Published : 3 hours ago

ಪೇಶಾವರ, ಪಾಕಿಸ್ತಾನ: ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಏಳು ಭಯೋತ್ಪಾದಕರನ್ನು ಕೊಂದು ಹಾಕಿವೆ. ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾದಲ್ಲಿ ಒಬ್ಬ ಯೋಧ ಸಹ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಬುಧವಾರ ತಿಳಿಸಿದೆ.

ಡಿಸೆಂಬರ್ 10 ಮತ್ತು 11 ರಂದು ಉತ್ತರ ವಜಿರಿಸ್ತಾನ್ ಜಿಲ್ಲೆಯ ಮಿರಾನ್ ಶಾ ಮತ್ತು ಸ್ಪಿನ್ವಾಮ್ ಪ್ರದೇಶಗಳಲ್ಲಿ ಭಯೋತ್ಪಾದಕರು ಅಡಗಿರುವ ಸುಳಿವು ಪಡೆದ ಪಾಕಿಸ್ತಾನದ ಸೇನೆ, ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿತ್ತು. ಭದ್ರತಾ ಪಡೆಗಳು ಮಿರಾನ್ ಶಾದಲ್ಲಿ ಭಯೋತ್ಪಾದಕರ ಮೇಲೆ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿವೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.

ಸ್ಪಿನ್ವಾಮ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಇನ್ನೂ ಮೂವರು ಭಯೋತ್ಪಾದಕರನ್ನು ಯಶಸ್ವಿಯಾಗಿ ಹೊಡೆದುರುಳಿಸಿವೆ. ಭಯೋತ್ಪಾದಕರ ವಿರುದ್ಧ ನಡೆಸಿದ ಕಾರ್ಯಾಚರಣೆ ವೇಳೆ ಒಬ್ಬ ಸೈನಿಕ ಕೂಡಾ ಮೃತಪಟ್ಟಿದ್ದಾನೆ. 2021 ರಲ್ಲಿ ಅಮೆರಿಕ ಮತ್ತು NATO ಪಡೆಗಳನ್ನು ಅಫ್ಘಾನಿಸ್ತಾನ ನೆಲದಿಂದ ಹಿಂತೆಗೆದುಕೊಂಡ ನಂತರ ವಿಶೇಷವಾಗಿ ಖೈಬರ್ ಕಣಿವೆಯ ಪಖ್ತುಂಖ್ವಾದಲ್ಲಿ ಮತ್ತು ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ಭಯೋತ್ಪಾದಕ ದಾಳಿಗಳು ತೀವ್ರವಾಗಿ ಹೆಚ್ಚಳಗೊಂಡಿವೆ. ಇದು ಅಲ್ಲಿನ ಜನಸಾಮಾನ್ಯರ ಆತಂಕಕ್ಕೂ ಕಾರಣವಾಗಿದೆ.

ಸೆಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯುರಿಟಿ ಸ್ಟಡೀಸ್ ವರದಿಯ ಪ್ರಕಾರ, 2024 ರ ಮೂರನೇ ತ್ರೈಮಾಸಿಕದಲ್ಲಿ ಅಂದರೆ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಯೋತ್ಪಾದಕ ಹಿಂಸಾಚಾರ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಸಾವುನೋವುಗಳಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.

ಇದನ್ನು ಓದಿ: ಜಮ್ಮು - ಕಾಶ್ಮೀರ ಹೆದ್ದಾರಿಯಲ್ಲಿ ಐಇಡಿ ಪತ್ತೆ; ತಪ್ಪಿದ ಭಾರೀ ಅನಾಹುತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.