ETV Bharat / international

ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು, ಆಡಳಿತ ಪಕ್ಷದ ಬೆಂಬಲಿಗರ ಮಧ್ಯೆ ಘರ್ಷಣೆ: 100 ಮಂದಿ ಸಾವು - Violence in Bangladesh - VIOLENCE IN BANGLADESH

ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನಾಕಾರರು, ಆಡಳಿತ ಪಕ್ಷದ ಬೆಂಬಲಿಗರ ಮಧ್ಯೆ ಘರ್ಷಣೆಯಲ್ಲಿ 100 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

Bangladesh  Violence in Bangladesh
ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು, ಆಡಳಿತ ಪಕ್ಷದ ಬೆಂಬಲಿಗರ ಮಧ್ಯೆ ಘರ್ಷಣೆ: 100 ಮಂದಿ ಸಾವು, ನೂರಾರು ಜನರಿಗೆ ಗಾಯ (AP)
author img

By PTI

Published : Aug 5, 2024, 8:26 AM IST

ಢಾಕಾ (ಬಾಂಗ್ಲಾದೇಶ): ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರ ನಡುವೆ ಭಾನುವಾರ ನಡೆದ ಭೀಕರ ಘರ್ಷಣೆಯಲ್ಲಿ 14 ಪೊಲೀಸರು ಸೇರಿದಂತೆ ಸುಮಾರು 100 ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಆಡಳಿತ ಪಕ್ಷದ ಬೆಂಬಲಿಗರು, ಅಧಿಕಾರಿಗಳು ಮೊಬೈಲ್ ಇಂಟರ್ನೆಟ್ ಅನ್ನು ಕಡಿತಗೊಳಿಸುವಂತೆ ಒತ್ತಾಯಿಸಿದರು. ಅನಿರ್ದಿಷ್ಟ ಅವಧಿಗೆ ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಗೊಳಿಸಿದ್ದಾರೆ.

ಉದ್ಯೋಗ ಮೀಸಲಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಆಗ್ರಹಿಸಿದರು. ತಾರತಮ್ಯದ ವಿರುದ್ಧ ವಿದ್ಯಾರ್ಥಿಗಳಿಂದ ಭಾನುವಾರ ಬೆಳಗ್ಗೆ ನಡೆದ ಅಸಹಕಾರ ಕಾರ್ಯಕ್ರಮಕ್ಕೆ ಅವಾಮಿ ಲೀಗ್, ಛತ್ರ ಲೀಗ್ ಜುಬೋ ಲೀಗ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು, ಆಡಳಿತ ಪಕ್ಷದ ಬೆಂಬಲಿಗರಿಂದ ತೀವ್ರ ಘರ್ಷಣೆ ಪ್ರಾರಂಭವಾದವು. ಅಸಹಕಾರ ಕಾರ್ಯಕ್ರಮದ ಹಿನ್ನೆಲೆ ದೇಶಾದ್ಯಂತ ಘರ್ಷಣೆಗಳು, ಗುಂಡಿನ ದಾಳಿಗಳು ಮತ್ತು ಅಹಿತಕರ ಘಟನೆಗಳ ನಡೆದಿವೆ. ಈ ವೇಳೆ ಕನಿಷ್ಠ 98 ಜನರು ಸಾವನ್ನಪ್ಪಿದ್ದಾರೆ ಎಂದು ಬಂಗಾಳಿ ಭಾಷೆಯ ಪ್ರಮುಖ ಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ.

ದೇಶಾದ್ಯಂತ 14 ಪೊಲೀಸರು ಸಾವು: ಪೊಲೀಸ್ ಪ್ರಧಾನ ಕಚೇರಿಯ ಪ್ರಕಾರ, ದೇಶಾದ್ಯಂತ 14 ಪೊಲೀಸರು ಸಾವನ್ನಪ್ಪಿದ್ದಾರೆ. ಅವರಲ್ಲಿ 13 ಮಂದಿ ಸಿರಾಜ್‌ಗಂಜ್‌ನ ಎನಾಯೆತ್‌ಪುರ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದಾರೆ. ಕೊಮಿಲ್ಲಾದ ಎಲ್ಲಿಯೋಟ್‌ಗಂಜ್‌ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪತ್ರಿಕೆ ತಿಳಿದೆ.

ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಹೋರಾಟಗಾರರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡುವ ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈವರೆಗೆ 11,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಅನಿರ್ದಿಷ್ಟ ಅವಧಿಗೆ ಕರ್ಫ್ಯೂ ಘೋಷಣೆ: ಪ್ರತಿಭಟನೆಯಲ್ಲಿ ಬಲಪಂಥೀಯ ಇಸ್ಲಾಮಿ ಶಶೋತಂತ್ರ ಆಂದೋಲನ್‌ನ ಕಾರ್ಯಕರ್ತರು ಹಾಗೂ ಅಪರಿಚಿತರು ಸೇರಿಕೊಂಡಿದ್ದಾರೆ. ಪ್ರಮುಖ ಹೆದ್ದಾರಿಗಳಲ್ಲಿ ಮತ್ತು ರಾಜಧಾನಿಯೊಳಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪ್ರತಿಭಟನಾಕಾರರು, ಪೊಲೀಸ್ ಠಾಣೆಗಳು ಮತ್ತು ಆಡಳಿತ ಪಕ್ಷದ ಕಚೇರಿಗಳು ಮತ್ತು ಅವರ ನಾಯಕರ ನಿವಾಸಗಳ ಮೇಲೆ ದಾಳಿ ಮಾಡಿದರು. ಮತ್ತು ಹಲವಾರು ವಾಹನಗಳನ್ನು ಸುಟ್ಟುಹಾಕಿದರು. ಈ ಪರಿಸ್ಥಿತಿ ಹಿನ್ನೆಲೆ ಅಧಿಕಾರಿಗಳು ಭಾನುವಾರ ಸಂಜೆ 6 ರಿಂದ ಅನಿರ್ದಿಷ್ಟ ಅವಧಿಗೆ ಬಾಂಗ್ಲಾದೇಶದಾದ್ಯಂತ ಪ್ರಮುಖ ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಕರ್ಫ್ಯೂ ಘೋಷಣೆ ಮಾಡಿದರು.

ಸೇನಾ ಪಡೆಗಳು, ಅರೆಸೈನಿಕ ಗಡಿ ಕಾವಲುಗಾರರು ಬಿಜಿಬಿ ಮತ್ತು ಗಣ್ಯ ಅಪರಾಧ ವಿರೋಧಿ ರಾಪಿಡ್ ಆಕ್ಷನ್ ಬಟಾಲಿಯನ್ ಹಾಗೂ ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೆಟಾ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಮೆಸೆಂಜರ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. 4G ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವಂತೆ ಮೊಬೈಲ್ ಆಪರೇಟರ್‌ಗಳಿಗೆ ಆದೇಶಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಪ್ರಧಾನಿ ಹಸೀನಾ ಮನವಿ: ''ಪ್ರತಿಭಟನೆಯ ಹೆಸರಿನಲ್ಲಿ ದೇಶಾದ್ಯಂತ ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವವರು ವಿದ್ಯಾರ್ಥಿಗಳಲ್ಲ. ಆದರೆ ಭಯೋತ್ಪಾದಕರು. ಈ ಭಯೋತ್ಪಾದಕರನ್ನು ಹತ್ತಿಕ್ಕಲು ನಾನು ದೇಶವಾಸಿಗಳಿಗೆ ಮನವಿ ಮಾಡುತ್ತೇನೆ'' ಎಂದು ಪ್ರಧಾನಿ ಹಸೀನಾ ಹೇಳಿದರು

ಮೂರು ದಿನಗಳ ಸಾರ್ವತ್ರಿಕ ರಜೆ: ಹಸೀನಾ ಅವರು ಭದ್ರತಾ ವ್ಯವಹಾರಗಳ ರಾಷ್ಟ್ರೀಯ ಸಮಿತಿಯ ಸಭೆಯನ್ನು ಕರೆದಿದ್ದಾರೆ. ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಸಭೆಯಲ್ಲಿ ಸೇನೆಯ ಮುಖ್ಯಸ್ಥರು, ನೌಕಾಪಡೆ, ವಾಯುಪಡೆ, ಪೊಲೀಸ್, ಆರ್‌ಎಬಿ, ಬಿಜಿಬಿ ಮತ್ತು ಇತರ ಉನ್ನತ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದರು. ಹೊಸ ಹಿಂಸಾಚಾರವು ದೇಶದ ಹಲವಾರು ಭಾಗಗಳಿಗೆ ಹರಡುತ್ತಿದ್ದಂತೆ ಸಭೆ ನಡೆಯಿತು. ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೋಮವಾರ, ಮಂಗಳವಾರ ಮತ್ತು ಬುಧವಾರದಂದು ಮೂರು ದಿನ ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: ಬ್ರಹ್ಮಪುತ್ರ ನದಿಯಲ್ಲಿ ಚೀನಾ 'ವಾಟರ್ ಬಾಂಬ್'; ಡ್ರ್ಯಾಗನ್ 'ಸೂಪರ್ ಡ್ಯಾಂ'ನಿಂದ ಭಾರತಕ್ಕೆ ಅಪಾಯ! - China Super Dam

ETV Bharat Logo

Copyright © 2025 Ushodaya Enterprises Pvt. Ltd., All Rights Reserved.