ರೊಚೆಸ್ಟರ್: ನ್ಯೂಯಾರ್ಕ್‌ನ ರೊಚೆಸ್ಟರ್ನಲ್ಲಿನ ಪಾರ್ಕ್ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ.
ಭಾನುವಾರ ಸಂಜೆ 6.20ರ ಸುಮಾರಿಗೆ ನೆರೆದಿದ್ದ ಜನರ ಮೇಲೆ ವ್ಯಕ್ತಿಯೋರ್ವ ಏಕಾಏಕಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ 20 ವರ್ಷದ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಐವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿ ಮತ್ತು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ದಾಳಿ ನಡೆದ ಸಮಯದಲ್ಲಿ ಪಾರ್ಕ್ನಲ್ಲಿ ಸಂತೋಷಕೂಟ ನಡೆಯುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಎಷ್ಟು ಜನ ದಾಳಿ ನಡೆಸಿದ್ದಾರೆ ಎಂಬ ಕುರಿತು ಮಾಹಿತಿ ಇಲ್ಲ. ನಾವು ಎಷ್ಟು ಸಾಧ್ಯವೋ ಅಷ್ಟು ಸಾಕ್ಷಿಗಳ ಮೂಲಕ ತನಿಖೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಯಾವುದೇ ಶಂಕಾಸ್ಪದ ವ್ಯಕ್ತಿಯನ್ನೂ ಬಂಧಿಸಿಲ್ಲ. ಗುಂಡಿನ ದಾಳಿ ಕುರಿತಾದ ವಿಡಿಯೋ ಯಾರಾದರೂ ಹೊಂದಿದ್ದರೆ, 311 ಅಥವಾ 911ಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಮ್ಯಾನ್‌ಹ್ಯಾಟನ್‌ನ ವಾಯುವ್ಯಕ್ಕೆ ಸುಮಾರು 340 ಮೈಲು ದೂರದಲ್ಲಿ ರೋಚೆಸ್ಟರ್ ಎಂಬ ಸ್ಥಳವಿದೆ.(ಎಪಿ)
ಇದನ್ನೂ ಓದಿ: ಚಾರ್ಲ್ಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಿಂದಲೇ ಗುಂಡಿನ ದಾಳಿ: 14 ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ