ಸಿಯೋಲ್, ದಕ್ಷಿಣ ಕೊರಿಯಾ: ನೈಋತ್ಯ ಕೌಂಟಿಯ ಬುವಾನ್ ಹತ್ತಿರದ ಪ್ರದೇಶದಲ್ಲಿ 4.8 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ದಕ್ಷಿಣ ಕೊರಿಯಾದ ಹವಾಮಾನ ಸಂಸ್ಥೆ ಹೇಳಿದೆ. ಇದು 2024ರಲ್ಲಿ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪವಾಗಿದೆ ಎಂದು ಹೇಳಲಾಗಿದೆ. ಆದರೆ ಬುಧವಾರ ಬೆಳಗ್ಗಿನ ವೇಳೆ ಹೆಚ್ಚಿನ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ. ಅಂದಾಜು 8 ಕಿ.ಮೀ ಆಳದ ಭೂಕಂಪ ಸಂಭವಿಸಿದೆ.
ಉತ್ತರ ಜಿಯೋಲ್ಲಾ ಪ್ರಾಂತ್ಯದ ನೈಋತ್ಯ ಪ್ರದೇಶದ ಜನರಿಗೆ ಭೂಮಿ ಅಲುಗಾಡಿದ ಅನುಭವವಾಗಿದೆ. ಅದಲ್ಲೆ ಭೂಕಂಪದ ತೀವ್ರತೆ ಕಿಟಕಿಗಳನ್ನು ಒಡೆಯುವಷ್ಟು, ವಸ್ತುಗಳು ಚಲ್ಲಾಪಿಲ್ಲಿಯಾಗುವಷ್ಟು ಪ್ರಬಲವಾಗಿತ್ತು ಎಂದು ಹವಾಮಾನ ಸಂಸ್ಥೆ ಹೇಳಿದೆ.
ಉತ್ತರ ಜಿಯೋಲ್ಲಾ ಪ್ರಾಂತ್ಯದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಜೋ ಹೇ- ಜಿನ್ ಮಾಹಿತಿ ಹಂಚಿಕೊಂಡಿದ್ದು, "ಅಲುಗಾಡುವ ಅನುಭವ ಆದ ನಿವಾಸಿಗಳಿಂದ ನಮ್ಮ ಇಲಾಖೆಯ ಅಧಿಕಾರಿಗಳು ಸುಮಾರು 80 ಕರೆಗಳನ್ನು ಸ್ವೀಕರಿಸಿದ್ದಾರೆ. ಬುವಾನ್ನ ಮನೆಯೊಂದರಲ್ಲಿ ಗೋಡೆ ಬಿರುಕು ಬಿಟ್ಟಿರುವುದು. ಹತ್ತಿರದ ಪಟ್ಟಣ ಜೂಡೋಕ್ನಲ್ಲಿ ಕಿಟಕಿ ಮುರಿದು ಹೋಗಿರುವುದು ವರದಿಯಾಗಿರುವುದು ಸೇರಿದಂತೆ ಇಲ್ಲಿವರೆಗೆ ಭೂಕಂಪದಿಂದ ಆದ ಹಾನಿ ಚಿಕ್ಕದಾಗಿದೆ" ಎಂದು ಅವರು ಹೇಳಿದರು.
ಭೂಮಿ ಕಂಪಿಸಿದ್ದರಿಂದ ಕೊರಿಯಾ ಜನರು ಭೀತಿಗೊಳಗಾಗಿದ್ದರು. ಮನೆಯಿಂದ ಹೊರ ಓಡಿ ಬಂದ ಪ್ರಸಂಗಗಳು ವರದಿಯಾಗಿವೆ.
ಇದನ್ನೂ ಓದಿ: ಜಪಾನ್ನಲ್ಲಿ ಹಠಾತ್ ಕಂಪಿಸಿದ ಭೂಮಿ; 5.9 ತೀವ್ರತೆಯ ಭೂಕಂಪ: ಸುನಾಮಿ ಆತಂಕವಿಲ್ಲ! - Earthquake in japan