ETV Bharat / international

ಲಾಹೋರ್​ನಲ್ಲಿ ಮಾರಣಾಂತಿಕ ವಾಯುಮಾಲಿನ್ಯ: 15 ಸಾವಿರ ಜನರಿಗೆ ಉಸಿರಾಟ, ವೈರಲ್ ಸೋಂಕು

ಪಾಕಿಸ್ತಾನದ ಲಾಹೋರ್​ನಲ್ಲಿ ವಾಯುಮಾಲಿನ್ಯ ಮೇರೆ ಮೀರಿದೆ.

ಲಾಹೋರ್ ಮೇಲೆ ಬೂದಿ ಮಿಶ್ರಿತ ಹೊಗೆ (ನಾಸಾ ಸೆರೆ ಹಿಡಿದ ಚಿತ್ರ)
ಲಾಹೋರ್ ಮೇಲೆ ಬೂದಿ ಮಿಶ್ರಿತ ಹೊಗೆ (ನಾಸಾ ಸೆರೆ ಹಿಡಿದ ಚಿತ್ರ) (ANI)
author img

By ANI

Published : 10 hours ago

ಲಾಹೋರ್: ಲಾಹೋರ್ ಮತ್ತು ಪಾಕಿಸ್ತಾನದ ಇತರ ಹಲವಾರು ನಗರಗಳಲ್ಲಿ ದಟ್ಟ ವಿಷಕಾರಿ ಹೊಗೆ ಆವರಿಸಿದ್ದು, ಈ ನಗರಗಳ ಮಾಲಿನ್ಯದ ಮಟ್ಟ ಮೇರೆ ಮೀರಿದೆ. ಲಾಹೋರ್ ನಗರವೊಂದರಲ್ಲಿಯೇ ಕಳೆದ 24 ಗಂಟೆಗಳಲ್ಲಿ 15,000 ಕ್ಕೂ ಹೆಚ್ಚು ಜನರಿಗೆ ಉಸಿರಾಟ ಮತ್ತು ವೈರಲ್ ಸೋಂಕು ತಗುಲಿದೆ ಎಂದು ಎಆರ್​ವೈ ನ್ಯೂಸ್ ವರದಿ ಮಾಡಿದೆ.

ಲಾಹೋರ್​ನ ಆಸ್ಪತ್ರೆಗಳಲ್ಲಿ ಒಣ ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಮತ್ತು ಎದೆಯ ಸೋಂಕಿನಿಂದ ಬಳಲುತ್ತಿರುವ ರೋಗಿಗಳು ಕಿಕ್ಕಿರಿದು ತುಂಬಿದ್ದಾರೆ ಎಆರ್​ವೈ ನ್ಯೂಸ್ ವರದಿ ಮಾಡಿದೆ.

ಮಾಯೋ ಆಸ್ಪತ್ರೆಯಲ್ಲಿ 4,000, ಜಿನ್ನಾ ಆಸ್ಪತ್ರೆಯಲ್ಲಿ 3,500, ಗಂಗಾರಾಮ್ ಆಸ್ಪತ್ರೆಯಲ್ಲಿ 3,000 ರೋಗಿಗಳು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 2,000ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.

ಅಸ್ತಮಾ ಮತ್ತು ಹೃದ್ರೋಗದಂಥ ದೀರ್ಘಾವಧಿ ರೋಗದಿಂದ ಬಳಲುತ್ತಿರುವವರು ಮತ್ತು ಮಕ್ಕಳ ಮೇಲೆ ಈ ಮಾಲಿನ್ಯದಿಂದ ಅತ್ಯಧಿಕ ದುಷ್ಪರಿಣಾಮವಾಗಲಿದೆ ಎಂದು ಪಾಕಿಸ್ತಾನದ ವೈದ್ಯಕೀಯ ತಜ್ಞ ಡಾ. ಅಶ್ರಫ್ ಜಿಯಾ ಎಚ್ಚರಿಸಿದ್ದಾರೆ.

ದೇಶದಲ್ಲಿನ ಮಾಲಿನ್ಯಕಾರಿ ಹೊಗೆಯ ಸಮಸ್ಯೆಯ ನಿವಾರಣೆಗೆ ಪಾಕಿಸ್ತಾನ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಾಂತ್ಯದ ಬಹುತೇಕ ಭಾಗಗಳಲ್ಲಿ ಸಂಚಾರ ನಿರ್ಬಂಧ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಮುಂದಿನ 3 ತಿಂಗಳ ಕಾಲ ಯಾವುದೇ ವಿವಾಹ ಸಮಾರಂಭ ಏರ್ಪಡಿಸದಂತೆ ನಿರ್ಬಂಧಿಸಲಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಾಲೆ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಈಗ ಉತ್ತರ ಪಾಕಿಸ್ತಾನವನ್ನು ಆವರಿಸಿರುವ ತೀವ್ರ ಹೊಗೆಯನ್ನು ನಾಸಾದ ಮಧ್ಯಮ ರೆಸಲ್ಯೂಶನ್ ಇಮೇಜಿಂಗ್ ಸ್ಪೆಕ್ಟ್ರೋರಾಡಿಯೋಮೀಟರ್ (ಮೋದಿಸ್) (NASA's Moderate Resolution Imaging Spectroradiometer -MODIS) ಕೂಡ ವರದಿ ಮಾಡಿದೆ.

"2024 ರ ನವೆಂಬರ್ ಆರಂಭದಲ್ಲಿ ಉತ್ತರ ಪಾಕಿಸ್ತಾನದ ಮೇಲೆ ಬೂದಿ ಮಿಶ್ರಿತ ದಟ್ಟವಾದ ಹೊಗೆ ಆವರಿಸಿದೆ. ಇದರಿಂದಾಗಿ ಗಾಳಿಯ ಗುಣಮಟ್ಟ ಕುಸಿದಿದ್ದು, ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ನೂರಾರು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ" ಎಂದು ನಾಸಾ ಮೋದಿಸ್ ಹೇಳಿದೆ. ಹಲವಾರು ಸುದ್ದಿ ವರದಿಗಳ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರದೇಶದ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ನವೆಂಬರ್ 10 ರಂದು 1,900 ಕ್ಕಿಂತ ಕಳಪೆಯಾಗಿ ಎಂದು ನಾಸಾ ಹೇಳಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾಲಿನ್ಯದ ಈ ಸಂದರ್ಭವನ್ನು ವಿಪತ್ತು ಎಂದು ಘೋಷಿಸಿದೆ ಮತ್ತು ತುರ್ತು ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಪಾಕಿಸ್ತಾನದ ಮಾಧ್ಯಮ ಮೂಲಗಳು ತಿಳಿಸಿವೆ. ನವೆಂಬರ್ 12 ರಂದು ಪಂಜಾಬ್ ಸರ್ಕಾರದ ವೆಬ್ ಸೈಟ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಪ್ರಾಂತ್ಯದ ಎಕ್ಯೂಐ ಸರಾಸರಿ 604 ರಷ್ಟಿದೆ.

ಇದನ್ನೂ ಓದಿ : ಸುಡಾನ್​​ ಸಂಘರ್ಷ: ನಿರಾಶ್ರಿತರ ಸಂಖ್ಯೆ ನಿರಂತರ ಹೆಚ್ಚಳ, ಸಹಾಯಕ್ಕಾಗಿ ಮೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.