ETV Bharat / international

ಯೆಮೆನ್​ನ ತೈಲ ಸಂಗ್ರಹಣಾ ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ: ಹೌತಿ ಬಂಡುಕೋರರಿಂದ ಪ್ರತೀಕಾರದ ಪ್ರತಿಜ್ಞೆ - Israel Attacks Yemen

ಇಸ್ರೇಲ್ ವಿರುದ್ಧ ಪ್ರತೀಕಾರದ ದಾಳಿ ನಡೆಸುವುದಾಗಿ ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ದಾಳಿಯಿಂದ ಹೊತ್ತಿ ಉರಿದ ತೈಲ ಸಂಗ್ರಹಣಾ ಕೇಂದ್ರ
ಇಸ್ರೇಲ್ ದಾಳಿಯಿಂದ ಹೊತ್ತಿ ಉರಿದ ತೈಲ ಸಂಗ್ರಹಣಾ ಕೇಂದ್ರ (IANS)
author img

By ETV Bharat Karnataka Team

Published : Jul 21, 2024, 2:11 PM IST

ಸನಾ(ಯೆಮೆನ್): ಹೌತಿ ಬಂಡುಕೋರರ ಹಿಡಿತದಲ್ಲಿರುವ ಕೆಂಪು ಸಮುದ್ರದ ಬಂದರು ನಗರ ಹೊದೈದಾದಲ್ಲಿನ ತೈಲ ಸಂಗ್ರಹಣಾ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಇಸ್ರೇಲ್, ಅವುಗಳನ್ನು ಧ್ವಂಸಗೊಳಿಸಿದೆ. ಈ ದಾಳಿಗೆ ಇಸ್ರೇಲ್ ವಿರುದ್ಧ ಪ್ರತೀಕಾರದ ದಾಳಿ ನಡೆಸುವುದಾಗಿ ಹೌತಿ ಗುಂಪು ಪ್ರತಿಜ್ಞೆ ಮಾಡಿದೆ.

"ಇಸ್ರೇಲ್​ನ ಶತ್ರು ಪಡೆಗಳು ಹೊದೈದಾ ಮೇಲೆ ಕ್ರೂರವಾಗಿ ದಾಳಿ ಮಾಡಿದ್ದಾರೆ. ನಾಗರಿಕ ಆವಾಸಸ್ಥಾನಗಳಲ್ಲಿನ ವಿದ್ಯುತ್ ಕೇಂದ್ರ, ಬಂದರು ಮತ್ತು ಇಂಧನ ಸಂಗ್ರಹಣಾ ಕೇಂದ್ರಗಳ ಮೇಲೆ ಈ ದಾಳಿಗಳು ನಡೆದಿವೆ" ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ದೂರದರ್ಶನ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಇಸ್ರೇಲ್​ನ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಲು ನಾವು ಹಿಂಜರಿಯುವುದಿಲ್ಲ. ಮುಂದಿನ ದಿನಗಳಲ್ಲಿ ಟೆಲ್ ಅವೀವ್ ಸುರಕ್ಷಿತ ನಗರವಾಗಿ ಉಳಿಯಲಾರದು" ಎಂದು ಅವರು ಪುನರುಚ್ಚರಿಸಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತನ್ನ ಫೈಟರ್​ ಜೆಟ್​ಗಳು ಹೊದೈದಾ ಬಂದರು ನಗರದಲ್ಲಿನ ಹೌತಿ ನೆಲೆಗಳನ್ನು ನಾಶ ಪಡಿಸಿವೆ ಎಂದು ಇದಕ್ಕೂ ಮುನ್ನ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ದಾಳಿಯಿಂದ ತೈಲ ಸಂಗ್ರಹಾಗಾರಗಳು ಹಲವಾರು ಗಂಟೆಗಳವರೆಗೆ ಹೊತ್ತಿ ಉರಿಯುತ್ತಿದ್ದವು ಎಂದು ನಿವಾಸಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಕ್ಸಿನ್ಹುವಾಗೆ ತಿಳಿಸಿದ್ದಾರೆ.

10 ಜನರ ಸಾವಿಗೆ ಕಾರಣವಾದ ಟೆಲ್ ಅವೀವ್​​ನ ಕಟ್ಟಡದ ಮೇಲೆ ನಡೆದ ಡ್ರೋನ್​ ದಾಳಿಯನ್ನು ತಾವೇ ಮಾಡಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ. ಅದಾಗಿ ಒಂದು ದಿನದ ನಂತರ ಇಸ್ರೇಲ್ ಹೊದೈದಾ ಮೇಲೆ ವಾಯು ದಾಳಿ ನಡೆಸಿದೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿ: ದಕ್ಷಿಣ ಲೆಬನಾನ್ ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಸಿರಿಯನ್ ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಮಿಲಿಟರಿ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಆಗ್ನೇಯ ಗ್ರಾಮ ಹೌಲಾದಲ್ಲಿನ ಮನೆಯೊಂದರ ಮೇಲೆ ಇಸ್ರೇಲಿ ಡ್ರೋನ್​ಗಳು ಮತ್ತು ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿದ್ದು, ಮೂವರು ನಾಗರಿಕರು ಗಾಯಗೊಂಡಿದ್ದಾರೆ, ಮೂರು ಮನೆಗಳು ನಾಶವಾಗಿವೆ ಎಂದು ಸ್ಥಳೀಯ ಮೂಲಗಳು ಶನಿವಾರ ತಿಳಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಲೆಬನಾನ್ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಶಾಂತಿ ಸಂಧಾನ ಸಾಧ್ಯವಿದೆ ಎಂದು ಲೆಬನಾನ್​ನಲ್ಲಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆಗಳ ವಕ್ತಾರ ಆಂಡ್ರಿಯಾ ಟೆನೆಂಟಿ ಶನಿವಾರ ಹೇಳಿದ್ದಾರೆ.

ಇದನ್ನೂ ಓದಿ: 'ಅವತ್ತು ದೇವರು ನನ್ನ ಜೊತೆಗಿದ್ದ': ಗುಂಡಿನ ದಾಳಿಯ ನಂತರ ಟ್ರಂಪ್ ಮೊದಲ ಮಾತು - Donald Trump

ETV Bharat Logo

Copyright © 2024 Ushodaya Enterprises Pvt. Ltd., All Rights Reserved.