ಢಾಕಾ/ಕೋಲ್ಕತ್ತಾ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದ್ವೇಷ ಮತ್ತು ದೌರ್ಜನ್ಯ ಎಲ್ಲೆ ಮೀರುತ್ತಿದೆ. ಇಸ್ಕಾನ್ ಸನ್ಯಾಸಿ ಚಿನ್ಮಯಿ ಕೃಷ್ಣ ದಾಸ್ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿದ್ದರೆ, ಶನಿವಾರ ಢಾಕಾ ಬಳಿ ಇರುವ ಇಸ್ಕಾನ್ ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ವಿಗ್ರಹಗಳು, ಇತರ ವಸ್ತುಗಳು ಸುಟ್ಟು ಹೋಗಿವೆ ಎಂದು ಆರೋಪಿಸಲಾಗಿದೆ.
ಶನಿವಾರ ಮುಂಜಾನೆ ಜನರ ಗುಂಪೊಂದು ಇಸ್ಕಾನ್ ದೇವಾಲಯದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದೆ. ಬೆಂಕಿಯನ್ನು ತ್ವರಿತವಾಗಿ ನಂದಿಸಲಾಯಿತು. ಆದಾಗ್ಯೂ ವಿಗ್ರಹಕ್ಕೆ ಹಾನಿಯಾಗಿದೆ. ಇತರ ವಸ್ತುಗಳು ಸುಟ್ಟು ಹೋಗಿವೆ ಎಂದು ಬಾಂಗ್ಲಾದೇಶದ ಇಸ್ಕಾನ್ನ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರ ದಾಸ್ ಅವರು ತಿಳಿಸಿದ್ದಾರೆ.
Another ISKCON Namhatta Centre burned down in Bangladesh. The Deities of Sri Sri Laxmi Narayan and all items inside the temple, were burned down completely 😭. The center is located in Dhaka. Early morning today, between 2-3 AM, miscreants set fire to the Shri Shri Radha Krishna… pic.twitter.com/kDPilLBWHK
— Radharamn Das राधारमण दास (@RadharamnDas) December 7, 2024
ಪೆಟ್ರೋಲ್ ಬಳಸಿ ಬೆಂಕಿ: ಈ ಬಗ್ಗೆ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮುಂಜಾನೆ 2-3 ಗಂಟೆಯ ನಡುವೆ ಹರೇ ಕೃಷ್ಣ ನಾಮಹಟ್ಟಾ ಸಂಘದ ಅಧೀನದಲ್ಲಿರುವ ರಾಧಾ ಕೃಷ್ಣ ದೇವಸ್ಥಾನ ಮತ್ತು ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ದೇವಸ್ಥಾನದ ಹಿಂಭಾಗದಲ್ಲಿರುವ ಮೇಲ್ಛಾವಣಿ ಮುರಿದು ಪೆಟ್ರೋಲ್ ಅಥವಾ ಆಕ್ಟೇನ್ ಬಳಸಿ ಬೆಂಕಿಯನ್ನು ಹಚ್ಚಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಕೋಲ್ಕತ್ತಾ ಇಸ್ಕಾನ್ ಪ್ರತಿಕ್ರಿಯೆ: ಈ ಬಗ್ಗೆ ಕೋಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ರಾಧಾ ರಮಣ್ ದಾಸ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ವಿಧ್ವಂಸಕರು ನಾಮಹಟ್ಟಾ ಸುಪರ್ದಿಯಲ್ಲಿರುವ ದೇವಾಲಯದ ವಿಗ್ರಹಗಳನ್ನು ಸುಟ್ಟು ಹಾಕಿದ್ದಾರೆ. ನಾರಾಯಣ ದೇವರು ಮತ್ತು ದೇವಾಲಯದ ಒಳಗಿದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಢಾಕಾದ ಪೊಲೀಸರು ತಿಳಿಸಿದ್ದಾರೆ. ಆದರೆ, ಈವರೆಗೂ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಬಾಂಗ್ಲಾದೇಶದಲ್ಲಿ ನಾಗರಿಕರ ದಂಗೆಯಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ಬಳಿಕ ಹಿಂದುಗಳ ಮೇಲೆ ದೌರ್ಜನ್ಯ, ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಈವರೆಗೆ 2 ಸಾವಿರಕ್ಕೂ ಅಧಿಕ ಹಿಂದು ಕುಟುಂಬಗಳ ಮೇಲೆ ಅಲ್ಲಿನ ಬಹುಸಂಖ್ಯಾತರು ದಾಳಿ ಮಾಡಿದ್ದಾಗಿ ವರಿಯಾಗಿದೆ.
ಇದನ್ನೂ ಓದಿ: INDIA ಕೂಟದ ನಾಯಕತ್ವಕ್ಕಾಗಿ ಟಿಎಂಸಿ - ಕಾಂಗ್ರೆಸ್ ಜಟಾಪಟಿ: ದೀದಿಗೆ ಎಸ್ಪಿ, ಶಿವಸೇನೆ ಬೆಂಬಲ