ETV Bharat / international

ಸಿರಿಯಾದ ರಾಯಭಾರಿ ಕಚೇರಿ ಮೇಲಿನ ಇಸ್ರೇಲ್​ ದಾಳಿಗೆ ಪ್ರತೀಕಾರದ ಎಚ್ಚರಿಕೆ ನೀಡಿದ ಇರಾನ್​ ರಾಯಭಾರಿ - missile hits Iranian consulate - MISSILE HITS IRANIAN CONSULATE

ಇಸ್ರೇಲ್​ನ ಈ ಕಾರ್ಯಗಳಿಗೆ ಇರಾನ್​ ಉತ್ತರಿಸದೆ ಇರಲಾರದು. ಇದಕ್ಕೆ ಪ್ರತೀಕಾರದ ದಾಳಿ ನಡೆಸುವುದಾಗಿ ಇರಾನ್​ ರಾಯಭಾರಿ ತಿಳಿಸಿದ್ದಾರೆ.

iran-will-respond-to-israels-attack-on-the-iranian-embassy

author img

By ETV Bharat Karnataka Team

Published : Apr 2, 2024, 11:39 AM IST

ಡಮಾಸ್ಕಸ್​: ಸಿರಿಯಾದ ರಾಜಧಾನಿ ಡಮಸ್ಕಸ್​ನಲ್ಲಿರುವ ಇರಾನ್​ ರಾಯಭಾರಿ ಕಚೇರಿ ಕಟ್ಟಡದ ಮೇಲೆ ಇಸ್ರೇಲ್​ ಕ್ಷಿಪಣಿ ಹಾರಿಸಿದೆ. ಈ ದಾಳಿಯಲ್ಲಿ ಐವರು ಇರಾನ್​ ಉದ್ಯೋಗಿಗಳು ಸಾವನ್ನಪ್ಪಿದ್ದು, ಇಬ್ಬರು ಇರಾನಿಯನ್​ ರಾಯಭಾರಿ ಗಾರ್ಡ್​​ಗಳು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ದಾಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಿರಿಯಾದಲ್ಲಿರುವ ಇರಾನಿನ ರಾಯಭಾರಿ ಹೊಸೈನ್ ಅಕ್ಬರಿ, ಇದಕ್ಕೆ ಪ್ರತೀಕಾರದ ದಾಳಿ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಕುರಿತು ವರದಿಗಾರರೊಂದಿಗೆ ಮಾತನಾಡಿರುವ ಅವರು, ಇದು ಅಂತಾರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ಕಾನೂನುಗಳನ್ನು ಜಾರಿಗೊಳಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಸಂಸ್ಥೆಗಳು ಘಟನೆ ಕುರಿತು ಯಾವಾಗ ಕ್ರಮ ತೆಗೆದುಕೊಳ್ಳುತ್ತವೆ ಎಂದು ಕೂಡ ಪ್ರಶ್ನಿಸಿದ್ದಾರೆ.

ಇಸ್ರೇಲ್​ನ ಈ ಕಾರ್ಯಾಚರಣೆಗೆ ಇರಾನ್​ ಉತ್ತರಿಸದೆ ಇರಲಾರದು. ಈ ದಾಳಿಗೆ ಸಮಾನವಾದ ಬಲದೊಂದಿಗೆ ಪ್ರತೀಕಾರ ನಡೆಸುವುದಾಗಿ ಇರಾನ್​ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಡಮಾಸ್ಕಸ್‌ನ ಪಶ್ಚಿಮಕ್ಕೆ ಮಜ್ಜೆಹ್ ಹೆದ್ದಾರಿಯಲ್ಲಿರುವ ಇರಾನ್​​ ರಾಯಭಾರಿ ಕಚೇರಿಯಲ್ಲಿ ಕ್ಷಿಪಣಿ ದಾಳಿ ಬಳಿಕ ದಟ್ಟ ಹೊಗೆ ಕಂಡು ಬಂದಿತು. ಈ ಕ್ಷಿಪಣಿಯನ್ನು ತಡೆಯಲು ಸಿರಿಯನ್​ ವಾಯು ಪಡೆ ಮುಂದಾಗುತ್ತಿರುವ ಹೊತ್ತಿಗೆ ದೊಡ್ಡ ಶಬ್ಧ ಕೇಳಿಬಂದಿತು. ಕಟ್ಟಡವೂ ದಾಳಿಯಿಂದ ಸಂಪೂರ್ಣ ನಾಶವಾಗಿದೆ ಎಂದು ವರದಿ ತಿಳಿಸಿದೆ.

ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಸಿರಿಯಾದ ವಿದೇಶಾಂಗ ಸಚಿವ ಫೈಸರ್​ ಮೆಕ್ದಾದ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ ಅವರು ಈ ರೀತಿಯ ರಾಜತಾಂತ್ರಿಕ ಯೋಜನೆ ಮೇಲಿನ ದಾಳಿ ಅನ್ಯಾಯವಾಗಿದ್ದು, ಇದನ್ನು ಸಂಪೂರ್ಣವಾಗಿ ಖಂಡಿಸಿದ್ದೇವೆ ಎಂದಿದ್ದಾರೆ.

ಇರಾನ್ ರಾಯಭಾರ ಕಚೇರಿಯ ಕಟ್ಟಡವನ್ನು ಗುರಿಯಾಗಿಸಿಕೊಂಡು ಸಿರಿಯಾದ ಕಾಲಮಾನ ಸಂಜೆ 5 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ.

ಹಮಾಸ್​ ಅಕ್ಟೋಬರ್​ 7ರಂದು ಇಸ್ರೇಲ್​ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭಿಸಿದೆ. ಗಾಜಾದಲ್ಲಿ ಹಮಾಸ್​ ಮತ್ತು ಇಸ್ರೇಲ್​ ಯುದ್ಧ ಆರಂಭವಾಗಿ ಆರು ತಿಂಗಳು ಕಳೆದಿದೆ. ಹಮಾಸ್​ ಇರಾನ್​ನ ಬೆಂಬಲ ಹೊಂದಿದೆ. ಇತ್ತೀಚಿಗೆ ಹಿಜ್ಬುಲ್ಲಾ ಜೊತೆಗೆ ಇಸ್ರೇಲ್​ ದಾಳಿ ಹೆಚ್ಚಿದ್ದು, ಇದು ಪೂರ್ಣ ಪ್ರಮಾಣದ ಯುದ್ಧದ ಸಾಧ್ಯತೆಯನ್ನು ಹೆಚ್ಚಿಸಿದೆ. ಇನ್ನು ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೂಡ ಇಸ್ರೇಲ್​ನಲ್ಲಿ ಕ್ಷಿಪಣಿಗಳನ್ನು ಉಡಾಯಿಸಿರುವ ವರದಿಯಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಗಾಜಾ ಪಟ್ಟಿಯಲ್ಲಿ ಇಸ್ರೇಲ್​ನಿಂದ ರಾತ್ರೋರಾತ್ರಿ ದಾಳಿ: 36 ಪ್ಯಾಲೆಸ್ಟೀನಿಯರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.