ETV Bharat / international

ಯೂರೋ ಕರೆನ್ಸಿ ಬಳಸುವ 20 ದೇಶಗಳಲ್ಲಿ ಹಣದುಬ್ಬರ ಹೆಚ್ಚಳ: ತೀವ್ರ ಕಳವಳ - Inflation in Europe

author img

By ETV Bharat Karnataka Team

Published : Jul 31, 2024, 5:08 PM IST

ಯುರೋಪಿನ 20 ದೇಶಗಳಲ್ಲಿ ಹಣದುಬ್ಬರ ಏರಿಕೆಯಾಗಿದೆ. ಇದು ಆ ರಾಷ್ಟ್ರಗಳ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

inflation-rises-in-20-countries-using-euro-currency
ಯೂರೋ ಕರೆನ್ಸಿ ಬಳಸುವ 20 ದೇಶಗಳಲ್ಲಿ ಹಣದುಬ್ಬರ ಹೆಚ್ಚಳ: ತೀವ್ರ ಕಳವಳ (AP)

ಫ್ರಾಂಕ್ ಫರ್ಟ್, ಜರ್ಮನಿ: ಯೂರೋ ಕರೆನ್ಸಿಯನ್ನು ಬಳಸುವ 20 ದೇಶಗಳಲ್ಲಿನ ಹಣದುಬ್ಬರ ಜುಲೈನಲ್ಲಿ ಶೇಕಡಾ 2.6ಕ್ಕೆ ಏರಿಕೆಯಾಗಿದೆ. ಇದು ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ (ಇಸಿಬಿ) ಮಾಡಿದ ಅಂದಾಜಿಗಿಂತಾ ತೀರಾ ಹೆಚ್ಚಾಗಿದೆ. ಇದು ಬಡ್ಡಿದರಗಳನ್ನು ಕಡಿತಗೊಳಿಸುವ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ಇಸಿಬಿ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಯುರೋಪಿನ ಆರ್ಥಿಕತೆಯು ನಿಶ್ಚಲವಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಇಯು ಅಂಕಿ - ಅಂಶ ಸಂಸ್ಥೆ ಯುರೋಸ್ಟಾಟ್​ನ ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಹಣದುಬ್ಬರವು ಜೂನ್​ನಲ್ಲಿ 2.5ರಷ್ಟು ಹೆಚ್ಚಾಗಿದೆ. ಇಸಿಬಿ ಸೂಕ್ಷ್ಮವಾಗಿ ಗಮನಿಸುತ್ತಿರುವ ಸೇವಾ ಹಣದುಬ್ಬರವು ಶೇಕಡಾ 4.1 ರಿಂದ ಶೇಕಡಾ 4.0ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 12 ರಂದು ನಡೆಯಲಿರುವ ಸಭೆಯಲ್ಲಿ ಇಸಿಬಿಯ ಮುಂದಿನ ನಡೆಯ ಬಗ್ಗೆ ಚರ್ಚೆಗಳು ತೀವ್ರಗೊಳ್ಳಲಿವೆ.

ಯೂರೋಜೋನ್ ದೇಶಗಳ ಕೇಂದ್ರ ಬ್ಯಾಂಕ್ ಆಗಿರುವ ಇಸಿಬಿ ಜೂನ್​ನಲ್ಲಿ ಮೊದಲ ತಾತ್ಕಾಲಿಕ ಬಡ್ಡಿದರ ಕಡಿತ ಮಾಡಿದೆ. ಆಗ ತನ್ನ ಬೆಂಚ್ ಮಾರ್ಕ್ ದರವನ್ನು ಬ್ಯಾಂಕ್ ಶೇಕಡಾ 3.75 ಕ್ಕೆ ಇಳಿಸಿದೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮತ್ತು ಇಂಧನ ಬೆಲೆಗಳ ಏರಿಕೆಯಿಂದ ಉಂಟಾದ ಹಣದುಬ್ಬರದ ಹೆಚ್ಚಳವನ್ನು ಎದುರಿಸಲು ಇಸಿಬಿ ಮತ್ತು ಯುಎಸ್ ಫೆಡರಲ್ ರಿಸರ್ವ್ ಸೇರಿದಂತೆ ಇತರ ಕೇಂದ್ರ ಬ್ಯಾಂಕುಗಳು ಬಡ್ಡಿದರಗಳನ್ನು ತ್ವರಿತವಾಗಿ ಹೆಚ್ಚಿಸಿದವು. ರಷ್ಯಾವು ನೈಸರ್ಗಿಕ ಅನಿಲದ ಪೂರೈಕೆಯನ್ನು ಕಡಿತಗೊಳಿಸಿದ ನಂತರ ವಿಶೇಷವಾಗಿ ಯುರೋಪ್​ನಲ್ಲಿ ಇಂಧನ ಬೆಲೆ ಏರಿಕೆಯಾಗಿವೆ.

ಪ್ರಸ್ತುತ ಇಂಧನ ಬೆಲೆಗಳು ಕುಸಿದಿವೆ ಮತ್ತು ಹಣದುಬ್ಬರವು ಈಗ ಅಕ್ಟೋಬರ್ 2022 ರಲ್ಲಿ ಇದ್ದ ಗರಿಷ್ಠ 10.6 ಕ್ಕಿಂತ ಕಡಿಮೆಯಾಗಿದೆ. ಆದರೆ, ಇದು ಆರ್ಥಿಕತೆಗೆ ಉತ್ತಮ ಎಂದು ಪರಿಗಣಿಸಲಾದ ಇಸಿಬಿಯ ಗುರಿಯಾದ ಶೇಕಡಾ 2ರ ಮಟ್ಟಕ್ಕಿಂತ ಹೆಚ್ಚಾಗಿದೆ. ಸದ್ಯ ಹಣದುಬ್ಬರವು ಶೇಕಡಾ 2 ಮತ್ತು ಶೇಕಡಾ 3ರ ಮಧ್ಯೆ ಹೊಯ್ದಾಡುತ್ತಿದೆ. ಈ ಸಂದರ್ಭದಲ್ಲಿ ಬಡ್ಡಿದರವನ್ನು ಏರಿಕೆ ಮಾಡಿದಲ್ಲಿ ಜನರ ಖರೀದಿಯ ಸಾಮರ್ಥ್ಯ ಕಡಿಮೆಯಾಗಲಿದೆ ಹಾಗೂ ಸರಕುಗಳ ಬೇಡಿಕೆಯನ್ನು ಕಡಿಮೆ ಮಾಡುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಬಹುದಾಗಿದೆ.

ಆದರೆ, ಬಡ್ಡಿದರ ಹೆಚ್ಚಿಸಿದಲ್ಲಿ ಅದು ಆರ್ಥಿಕತೆಯ ಬೆಳವಣಿಗೆಗೆ ಪ್ರತಿಕೂಲವಾಗಬಹುದು. ಯುರೋಪ್ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಶೂನ್ಯ ಬೆಳವಣಿಗೆಯ ಮಟ್ಟದಲ್ಲಿದ್ದು, ಚೇತರಿಕೆಯ ಬಗ್ಗೆ ವಿಶ್ವಾಸ ಮೂಡಿಲ್ಲ. ಈ ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ಒಟ್ಟು ದೇಶೀಯ ಉತ್ಪನ್ನವು ಶೇಕಡಾ 0.3 ರಷ್ಟು ಏರಿಕೆಯಾಗಿದೆ. ಇದು ಶೂನ್ಯ ಅಥವಾ ಅದಕ್ಕಿಂತ ಕಡಿಮೆ ಸುಧಾರಣೆಯಾಗಿದೆ. ಆದರೆ, ಎಸ್ &ಪಿ ಗ್ಲೋಬಲ್​ನ ಪರ್ಚೇಸಿಂಗ್ ಮ್ಯಾನೇಜರ್ಸ್​ ಇಂಡೆಕ್ಸ್​ ಆರ್ಥಿಕತೆಯು ಇನ್ನೂ ಬೆಳೆಯುತ್ತಿಲ್ಲ ಎಂದು ಹೇಳಿದೆ.

ಇದನ್ನೂ ಓದಿ : ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ - Hamas Leader Ismail Haniyeh Killed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.