ETV Bharat / international

ಬ್ರಿಟಿಷ್ ಮಹಿಳೆಗೆ ಕಿರುಕುಳ: ಭಾರತದ ಯುವಕನಿಗೆ 4 ವರ್ಷ ಜೈಲು, ಛಡಿ ಏಟಿನ ಶಿಕ್ಷೆ - undefined

ಸಿಂಗಾಪುರ ಟರ್ಫ್ ಕ್ಲಬ್ ರೋಡ್ ರೆಸ್ಟೋರೆಂಟ್‌ನಲ್ಲಿ ಬ್ರಿಟಿಷ್ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ಯುವಕನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

indian-man-gets-4-years-jail-six-strokes-of-cane-for-molesting-british-woman
ಬ್ರಿಟಿಷ್ ಮಹಿಳೆಗೆ ಕಿರುಕುಳ: ಭಾರತದ ಯುವಕನಿಗೆ 4 ವರ್ಷ ಜೈಲು
author img

By ETV Bharat Karnataka Team

Published : Jan 20, 2024, 1:06 AM IST

ಸಿಂಗಾಪುರ: 2022 ರಲ್ಲಿ ಸಿಂಗಾಪುರದ ನೈಟ್ ಕ್ಲಬ್‌ನಲ್ಲಿ ಬ್ರಿಟಿಷ್ ಮಹಿಳೆಗೆ ಕಿರುಕುಳ ನೀಡಿದ್ದಕ್ಕಾಗಿ 25 ವರ್ಷದ ಭಾರತೀಯ ಯುವಕನಿಗೆ ನಾಲ್ಕು ವರ್ಷಗಳ ಜೈಲು ಮತ್ತು ಆರು ಬೆತ್ತದ ಹೊಡೆತಗಳ ಶಿಕ್ಷೆ ವಿಧಿಸಲಾಗಿದೆ.

2022ರಆಗಸ್ಟ್‌ನಲ್ಲಿ ಸಿಂಗಾಪುರದಲ್ಲಿದ್ದ ಎರುಗುಲಾ ಈಶ್ವರ ರೆಡ್ಡಿ ಎಂಬವರು ಟರ್ಫ್ ಕ್ಲಬ್ ರೋಡ್ ರೆಸ್ಟೋರೆಂಟ್‌ನಲ್ಲಿ ಬ್ರಿಟಿಷ್ ಮಹಿಳೆಗೆ ಕಿರುಕುಳ ನೀಡಿದ್ದರು. ಅಷ್ಟೇ ಅಲ್ಲದೇ ಆರೋಪಿ ಸಂತ್ರಸ್ತೆಯನ್ನು ಬಲವಂತವಾಗಿ ಹತ್ತಿರದ ಗದ್ದೆಗೆ ಕರೆದೊಯ್ದು ವಿವಸ್ತ್ರಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳೆಯನ್ನು ಹುಡುಕುತ್ತಿದ್ದ ಸ್ನೇಹಿತರೊಬ್ಬರು ಆಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ್ದಾರೆ. ಸಂತ್ರಸ್ತೆಯ ಸ್ನೇಹಿತ ಸ್ಥಳಕ್ಕೆ ತಲುಪಿದಾಗ ರೆಡ್ಡಿ ನಗ್ನವಾಗಿದ್ದ ಮತ್ತು ಸಂತ್ರಸ್ತೆ ಅರೆ ನಗ್ನವಾಗಿರುವುದು ಕಂಡು ಬಂದಿದೆ. ನಂತರ ಮಹಿಳೆಯ ಸ್ನೇಹಿತ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಾನ್ ಲು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಸಂತ್ರಸ್ತೆಯನ್ನು ಆರೋಪಿ ಎರುಗುಲಾ ಈಶ್ವರ ರೆಡ್ಡಿ ಬಲವಂತವಾಗಿ ಗದ್ದೆಗೆ ಕರೆದುಕೊಂಡು ಹೋಗಿದ್ದ. ತೀವ್ರ ಪ್ರತಿರೋಧದ ನಡುವೆಯೂ ಆಕೆಯನ್ನು ವಿವಸ್ತ್ರಗೊಳಿಸಿದ್ದ. ಅಲ್ಲದೇ, ಮೊಬೈಲ್ ಫೋನ್ ಕಸಿದುಕೊಂಡು ಕಿರುಕುಳ ನೀಡಿದ್ದಾನೆ. ಆದ್ದರಿಂದ ಆರೋಪಿಗೆ ನಾಲ್ಕು ವರ್ಷಗಳ ಜೈಲು ಮತ್ತು ಆರು ಛಡಿ ಏಟು ಶಿಕ್ಷೆ ವಿಧಿಸಬೇಕೆಂದು ಕೋರಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.