ETV Bharat / international

ಅಮೆರಿಕದಲ್ಲಿ ಕೇರಳದ ದಂಪತಿ, ಅವಳಿ ಮಕ್ಕಳು ಶವವಾಗಿ ಪತ್ತೆ - ಅಮೆರಿಕದಲ್ಲಿ ಭಾರತೀಯರ ಸಾವು

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ದಂಪತಿ ಹಾಗು ಅವರ ಅವಳಿ ಮಕ್ಕಳು ಮೃತಪಟ್ಟಿದ್ದಾರೆ.

indian-american-couple-twin-sons-found-dead-at-their-home-in-us
ಅಮೆರಿಕದಲ್ಲಿ ಕೇರಳ ಮೂಲದ ದಂಪತಿ, ಅವಳಿ ಮಕ್ಕಳು ಶವವಾಗಿ ಪತ್ತೆ
author img

By PTI

Published : Feb 14, 2024, 10:53 PM IST

ನ್ಯೂಯಾರ್ಕ್(ಅಮೆರಿಕ): ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ ಮತ್ತವರ 4 ವರ್ಷದ ಅವಳಿ ಗಂಡು ಮಕ್ಕಳು ಸೇರಿದಂತೆ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಆನಂದ್ ಸುಜಿತ್ ಹೆನ್ರಿ, ಈತನ ಪತ್ನಿ ಆಲಿಸ್ ಪ್ರಿಯಾಂಕಾ ಮತ್ತು ಅವಳಿ ಮಕ್ಕಳು ಎಂದು ಗುರುತಿಸಲಾಗಿದೆ.

ಮೂಲತಃ ಕೇರಳದ ಆನಂದ್ ಹೆನ್ರಿ ಕುಟುಂಬವು ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿತ್ತು. ದಂಪತಿ ತಮ್ಮಿಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಎರಡೂ ಸಂಶಯಗಳ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಯಾನ್ ಮಾಟಿಯೊ ಪ್ರದೇಶದಲ್ಲಿ ಇವರ ಮನೆಯಿದೆ. ಈ ಮನೆಯಲ್ಲಿ ಯಾರೂ ಕಾಣಿಸಿಕೊಳ್ಳಲಾದ ಬಗ್ಗೆ ಸ್ಥಳೀಯರು ಸೋಮವಾರ ಪೊಲೀಸರಿಗೆ ಮಾಹಿತಿ ನೀಡಿದರು. ಅಂತೆಯೇ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನಾಲ್ವರ ಮೃತದೇಹಗಳು ಮನೆಯೊಳಗೆ ಪತ್ತೆಯಾಗಿವೆ. ಆದರೆ, ಮನೆಯೊಳಗೆ ಬೇರೆ ಯಾರೂ ಇಲ್ಲದ ಕಾರಣ ಬಲವಂತದ ಪ್ರವೇಶ ಮಾಡಿದಾಗ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತರಲ್ಲಿ ಓರ್ವ ಪುರುಷ ಮತ್ತು ಮಹಿಳೆ, ಇಬ್ಬರು ಮಕ್ಕಳಿದ್ದು, ಸ್ನಾನಗೃಹದಲ್ಲಿ ಪುರುಷ, ಮಹಿಳೆಯ ಶವ ದೊರೆತಿದೆ. ಇಬ್ಬರ ದೇಹದಲ್ಲಿ ಗುಂಡಿನ ಗಾಯಗಳು ಪತ್ತೆಯಾಗಿವೆ. 9 ಮಿಲಿಮೀಟರ್ ಪಿಸ್ತೂಲ್ ಮತ್ತು ಲೋಡ್ ಮಾಡಲಾದ ಮ್ಯಾಗಜೀನ್ ಸಹ ಪತ್ತೆಯಾಗಿವೆ. ಇಬ್ಬರು ಮಕ್ಕಳು ಮೃತದೇಹಗಳು ಬೆಡ್​ರೂಮ್​ನಲ್ಲಿ ದೊರೆತಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ದಂಪತಿ ಡಿಸೆಂಬರ್ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನಂತರದಲ್ಲಿ ಅದನ್ನು ಮುಂದುವರೆಸಿಲ್ಲ ಎಂದು ಪೊಲೀಸರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ; ತಿಂಗಳಲ್ಲಿ 6ನೇ ಘಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.