ETV Bharat / international

ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ​ ಮತ್ತೊಂದು ಆಘಾತ: ಸೈಫರ್​ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ - ಜೈಲು ಶಿಕ್ಷೆ ಪ್ರಕಟ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಸೈಫರ್​ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಇಮ್ರಾನ್​ ಖಾನ್
ಇಮ್ರಾನ್​ ಖಾನ್
author img

By ETV Bharat Karnataka Team

Published : Jan 30, 2024, 4:23 PM IST

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್​ಗೆ ಮತ್ತೊಂದು ಆಘಾತ ಎದುರಾಗಿದೆ. ರಹಸ್ಯ ದಾಖಲೆ ಸೋರಿಕೆ (cipher case​) ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿಯೂ ಆರೋಪಿ ಎಂದು ಕೋರ್ಟ್​ ಹೇಳಿದೆ.

ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆದ ವಿಚಾರಣೆಯಲ್ಲಿ ವಿಶೇಷ ಕೋರ್ಟ್​ನ ನ್ಯಾಯಾಧೀಶ ಅಬುಲ್ ಹಸ್ನಾತ್ ಜುಲ್ಕರ್​ನೈನ್ ಅವರು ಈ ಆದೇಶವನ್ನು ಪ್ರಕಟಿಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಫೆಬ್ರವರಿ 8 ರಂದು ನೆರೆಯ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ಶಿಕ್ಷೆ ಪ್ರಕಟಿಸಲಾಗಿದೆ.

ಏನಿದು ಪ್ರಕರಣ: ಇಮ್ರಾನ್​ ಖಾನ್​ ಅಧಿಕಾರಾವಧಿಯಲ್ಲಿ ಅಮೆರಿಕದ ವಾಷಿಂಗ್ಟನ್​ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯು ಕಳುಹಿಸಿದ ಕೇಬಲ್​ ಸಂದೇಶವನ್ನು ಬಹಿರಂಗಗೊಳಿಸಿ ರಹಸ್ಯ ಕಾನೂನು ಉಲ್ಲಂಘನೆ ಮಾಡಿದ ಆರೋಪ ಇಬ್ಬರ ಮೇಲಿದೆ. ಇದರ ವಿರುದ್ಧ ಫೆಡರಲ್​ ಇನ್ವೆಸ್ಟಿಗೇಶನ್​ ಏಜೆನ್ಸಿಯು ಇಮ್ರಾನ್​ ಖಾನ್​ ಮತ್ತು ಮಹಮೂದ್ ಖುರೇಷಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಇದೀಗ ವಿಶೇಷ ಕೋರ್ಟ್​ ಇಬ್ಬರನ್ನು ದೋಷಿ ಎಂದು ತೀರ್ಮಾನಿಸಿ 10 ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಿದೆ.

ಜೈಲು ಶಿಕ್ಷೆ ಅನುಭವಿಸುತ್ತಿರುವ ಖಾನ್​: ತೋಷಖಾನಾ ಪ್ರಕರಣದಲ್ಲಿ ಇಮ್ರಾನ್​ ಖಾನ್​ ಈಗಾಗಲೇ ದೋಷಿಯಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಮತ್ತೊಂದು ಆರೋಪವೂ ಸಾಬೀತಾಗಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಗೆ ತೊಡಕು ಉಂಟು ಮಾಡಿದೆ.

ನಾಮಪತ್ರಗಳು ತಿರಸ್ಕಾರ: ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇಮ್ರಾನ್​ ಖಾನ್​ ಸೇರಿದಂತೆ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಮಾಜಿ ಸಚಿವ ಅಹಮ್ಮದ್ ಅಜರ್, ಮುರಾದ್ ಸಯೀದ್, ಸಾಹಿಬ್ಜಾದಾ ಸಿಗ್ಬತುಲ್ಲಾ, ಡಾ.ಅಮ್ಜದ್ ಖಾನ್, ಫಜಲ್ ಹಕೀಮ್ ಖಾನ್, ಮಿಯಾನ್ ಶರಾಫತ್ ಮತ್ತು ಸಲೀಂ ಉರ್ ರೆಹಮಾನ್ ಅವರ ನಾಮಪತ್ರಗಳನ್ನು ಅಲ್ಲಿನ ಚುನಾವಣಾ ಆಯೋಗ ಅಸಿಂಧುಗೊಳಿಸಿದೆ.

ತೋಷಖಾನಾ ಪ್ರಕರಣದಲ್ಲಿ ದೋಷಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಇಮ್ರಾನ್​ ಖಾನ್​ 5 ವರ್ಷ ಅನರ್ಹತೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾಗಿ ಆಯೋಗ ಹೇಳಿದೆ. ಇದನ್ನು ರಾಜಕೀಯ ಒತ್ತಡ ಎಂದು ಮಾಜಿ ಪ್ರಧಾನಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಇಮ್ರಾನ್ ಖಾನ್, ಮತ್ತವರ ಪಕ್ಷ ಪಿಟಿಐ ಈಗಲೂ ಪಾಕಿಸ್ತಾನದಲ್ಲಿ ಜನಪ್ರಿಯ; ಸಮೀಕ್ಷಾ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.