ETV Bharat / international

ಕ್ಯಾಲಿಫೋರ್ನಿಯಾದಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿನಿ ನಾಪತ್ತೆ - Indian Student Missing in US - INDIAN STUDENT MISSING IN US

ಹೈದರಾಬಾದ್ ಮೂಲದ ವಿದ್ಯಾರ್ಥಿನಿಯೊಬ್ಬರು ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿರುವ ಹೈದರಾಬಾದ್ ಮೂಲದ ವಿದ್ಯಾರ್ಥಿನಿ ನಿತೀಶಾ
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿರುವ ಹೈದರಾಬಾದ್ ಮೂಲದ ವಿದ್ಯಾರ್ಥಿನಿ ನಿತೀಶಾ (ETV Bharat Telagu image)
author img

By ETV Bharat Karnataka Team

Published : Jun 3, 2024, 1:56 PM IST

ಹೈದರಾಬಾದ್: ಭಾರತೀಯ ಮೂಲದ 23 ವರ್ಷದ ತೆಲುಗು ವಿದ್ಯಾರ್ಥಿನಿಯೊಬ್ಬರು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದ ಮತ್ತು ಸ್ಯಾನ್ ಬರ್ನಾರ್ಡಿನೊದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿರುವ ನಿತಿಶಾ ಕಂದುಲಾ ಮೇ 28 ರಿಂದ ನಾಪತ್ತೆಯಾಗಿದ್ದಾರೆ. ನಿತೀಶಾ ಅವರು ಕೊನೆಯ ಬಾರಿಗೆ ಲಾಸ್ ಏಂಜಲೀಸ್​ನಲ್ಲಿ ಕಾಣಿಸಿಕೊಂಡಿದ್ದರು ಎಂದು ವಿಶ್ವವಿದ್ಯಾಲಯವು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ. ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದು, ವಿದ್ಯಾರ್ಥಿನಿಯ ಪತ್ತೆಗಾಗಿ ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ.

ಕಂದುಲಾ 5 ಅಡಿ 6 ಇಂಚು ಎತ್ತರ ಇದ್ದು, ಕಪ್ಪು ಕೂದಲು ಮತ್ತು ಕಪ್ಪು ಕಣ್ಣುಗಳನ್ನು ಹೊಂದಿದ್ದು, ಸುಮಾರು 160 ಪೌಂಡ್ (72.5 ಕೆಜಿ) ತೂಕ ಹೊಂದಿದ್ದಾರೆ ಎಂದು ಪೊಲೀಸರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾ ಲೈಸೆನ್ಸ್​ ಪ್ಲೇಟ್​ ಹೊಂದಿರುವ 2021 ರ ಟೊಯೊಟಾ ಕರೊಲಾವನ್ನು ಅವರು ಓಡಿಸುತ್ತಿದ್ದರು, ಆದರೆ, ಅದರ ಬಣ್ಣ ತಿಳಿದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಒಂದು ತಿಂಗಳೊಳಗೆ ಇಂಥ ಮತ್ತೊಂದು ಘಟನೆ ನಡೆದಿರುವುದು ಕಳವಳ ಮೂಡಿಸಿದೆ. ತೆಲಂಗಾಣ ಮೂಲದ ರೂಪೇಶ್ ಚಂದ್ರ ಚಿಂತಾಕಿಂಡಿ ಕಳೆದ ತಿಂಗಳು ಚಿಕಾಗೋದಲ್ಲಿ ನಾಪತ್ತೆಯಾಗಿದ್ದರು. ಈ ವಿದ್ಯಾರ್ಥಿ ಬಗ್ಗೆ ಈವರೆಗೂ ಯಾವುದೇ ಮಾಹಿತಿ ದೊರಕಿಲ್ಲ.

ಈ ವರ್ಷದ ಆರಂಭದಲ್ಲಿ, ಹೈದರಾಬಾದಿನ ಮೊಹಮ್ಮದ್ ಅಬ್ದುಲ್ ಅರಾಫತ್ ಎಂಬುವರು ಮಾರ್ಚ್​ನಲ್ಲಿ ಕಾಣೆಯಾಗಿದ್ದರು. ಒಂದು ತಿಂಗಳ ನಂತರ ಅವರ ಶವ ಓಹಿಯೋದ ಕ್ಲೀವ್ ಲ್ಯಾಂಡ್​ನ ಸರೋವರದಲ್ಲಿ ಪತ್ತೆಯಾಗಿತ್ತು. ಕ್ಲೀವ್ ಲ್ಯಾಂಡ್​ನಲ್ಲಿನ ಡ್ರಗ್ ಮಾಫಿಯಾ ಗ್ಯಾಂಗ್ ಅಬ್ದುಲ್​ನನ್ನು ಅಪಹರಿಸಿ, ಬಿಡುಗಡೆಗಾಗಿ ಆತನ ತಂದೆಯ ಬಳಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದವು ಎಂದು ವರದಿಗಳು ತಿಳಿಸಿವೆ.

ಮಾರ್ಚ್​ನಲ್ಲಿ ಮಿಸ್ಸೌರಿಯ ಸೇಂಟ್ ಲೂಯಿಸ್​ನಲ್ಲಿ ಭಾರತೀಯ ಮೂಲದ 34 ವರ್ಷದ ಶಾಸ್ತ್ರೀಯ ನೃತ್ಯಗಾರ ಅಮರನಾಥ್ ಘೋಷ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಮತ್ತೊಂದು ಘಟನೆಯಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ 23 ವರ್ಷದ ಭಾರತೀಯ - ಅಮೆರಿಕನ್ ವಿದ್ಯಾರ್ಥಿ ಸಮೀರ್ ಕಾಮತ್ ಫೆಬ್ರವರಿ 5 ರಂದು ಇಂಡಿಯಾನಾದ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಈ ಪ್ರಕರಣಗಳು ಯುನೈಟೆಡ್ ಸ್ಟೇಟ್ಸ್​ನಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಹೆಚ್ಚಾಗುತ್ತಿರುವ ಅಪಾಯ ಎತ್ತಿ ತೋರಿಸಿವೆ. ಕಾಣೆಯಾದ ಈ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಾಧ್ಯವಾಗುವಂಥ ಮಾಹಿತಿ ಇದ್ದರೆ, ಅದನ್ನು ತಿಳಿಸುವಂತೆ ಮತ್ತು ಇಂಥ ಘಟನೆಗಳ ಬಗ್ಗೆ ಜಾಗರೂಕರಾಗಿರುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : 'ಮಾಲ್ಡೀವ್ಸ್​ನಿಂದ ಇಸ್ರೇಲಿಗರು ತಕ್ಷಣ ಹೊರಬನ್ನಿ': ಇಸ್ರೇಲ್ ಸರ್ಕಾರದ ಸೂಚನೆ - Maldives bans Israelis

ETV Bharat Logo

Copyright © 2024 Ushodaya Enterprises Pvt. Ltd., All Rights Reserved.