ETV Bharat / international

ಕೆನಡಾದಲ್ಲಿ ಹಿಂದೂ ದೇವಾಲಯ, ಭಕ್ತರ ಮೇಲೆ ಖಲಿಸ್ತಾನಿಗಳ ದಾಳಿ: ಪ್ರಧಾನಿ ಟ್ರುಡೊ ಸೇರಿ ಹಲವರ ಖಂಡನೆ

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಾಲಿಸ್ತಾನಿ ಉಗ್ರರು ಭಾನುವಾರ ದಾಳಿ ನಡೆಸಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿದಂತೆ ಹಲವರು ಘಟನೆಯನ್ನು ಖಂಡಿಸಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (AP)
author img

By ANI

Published : Nov 4, 2024, 8:43 AM IST

ಒಟ್ಟಾವಾ(ಕೆನಡಾ): ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಮೇಲೆ ಖಾಲಿಸ್ತಾನಿ ಉಗ್ರರು ದಾಳಿ ನಡೆಸಿದ್ದು, ಘಟನೆಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತೀವ್ರವಾಗಿ ಖಂಡಿಸಿದ್ದಾರೆ.

"ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದಲ್ಲಿ ನಡೆದ ಹಿಂಸಾಚಾರ ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬ ಕೆನಡಿಗನಿಗೂ ತಮ್ಮ ನಂಬಿಕೆಯನ್ನು ಮುಕ್ತ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕಿದೆ. ಸಮುದಾಯವನ್ನು ರಕ್ಷಿಸಲು ಮತ್ತು ಈ ಘಟನೆಯ ತನಿಖೆಗೆ ತ್ವರಿತವಾಗಿ ಸ್ಪಂದಿಸಿದ್ದ ಪೊಲೀಸರಿಗೆ ಧನ್ಯವಾದ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು, ಕೆನಡಾದ ಪ್ರತಿಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ದಾಳಿ ಖಂಡಿಸಿ, "ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ಆರಾಧಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಯಾರೂ ಇಷ್ಟಪಡುವಂಥದ್ದಲ್ಲ. ಎಲ್ಲಾ ಕೆನಡಿಯನ್ನರು ಶಾಂತಿ ಮತ್ತು ನಂಬಿಕೆ ಉಳಿಸಿಕೊಳ್ಳಲು ಮುಕ್ತರು" ಎಂದಿದ್ದಾರೆ.

ಟೊರೊಂಟೊ ಸಂಸದ ಕೆವಿನ್ ವುಂಗ್ ಕೂಡ ದಾಳಿಯನ್ನು ಖಂಡಿಸಿ, "ಕೆನಡಾ ಮೂಲಭೂತವಾದಿಗಳಿಗೆ ಸುರಕ್ಷಿತ ಬಂದರು. ದೇಶ ಆಳುವ ನಾಯಕರು ಕ್ರಿಶ್ಚಿಯನ್ನರು ಮತ್ತು ಯಹೂದಿ ಕೆನಡಿಯನ್ನರನ್ನು ರಕ್ಷಿಸಲು ವಿಫಲರಾದಂತೆಯೇ ಹಿಂದೂಗಳನ್ನೂ ರಕ್ಷಿಸಲು ವಿಫಲರಾಗಿದ್ದಾರೆ" ಎಂದುಲ ಆಕ್ರೋಶ ಹೊರಹಾಕಿದ್ದಾರೆ.

"ಮಕ್ಕಳು, ಮಹಿಳೆಯರು ಮತ್ತು ಪುರುಷರ ಮೇಲೆ ದಾಳಿ ಮಾಡಲಾಗುತ್ತಿದೆ. ಇದೆಲ್ಲವೂ ಖಲಿಸ್ತಾನಿ ರಾಜಕಾರಣಿಗಳ ಸಹಾನುಭೂತಿಯ ಬೆಂಬಲದಲ್ಲಿ ನಡೆಯುತ್ತಿದೆ" ಎಂದು ಹಿಂದೂ ಕೆನಡಿಯನ್ ಫೌಂಡೇಶನ್ ಕೂಡ ತನ್ನ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ತಿಳಿಸಿದೆ.

ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ (ಕರ್ನಾಟಕ ಮೂಲದವರು) ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದು, "ಕೆನಡಾದಲ್ಲಿ ಹಿಂದೂ ಸಭಾ ಮಂದಿರದ ಮೇಲೆ ಖಲಿಸ್ತಾನಿ ದಾಳಿ ನಡೆಸುವುದು ಬೇಸರದ ಸಂಗತಿ. ಖಲಿಸ್ತಾನಿ ಉಗ್ರಗಾಮಿಗಳು ಇಂದು ಕೆಂಪು ಗೆರೆ ದಾಟಿದ್ದಾರೆ. ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಹಿಂದೂ-ಕೆನಡಾದ ಭಕ್ತರ ಮೇಲೆ ನಡೆಸಿದ ದಾಳಿ ಕೆನಡಾದಲ್ಲಿ ಖಲಿಸ್ತಾನಿ ಹಿಂಸಾತ್ಮಕ ಉಗ್ರಗಾಮಿತ್ವವು ಎಷ್ಟು ಲಜ್ಜೆಗೆಟ್ಟಿದೆ ಎಂಬುದನ್ನು ತೋರಿಸುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾನು ಬಹಳ ಹಿಂದಿನಿಂದಲೂ ಹೇಳುತ್ತಿರುವಂತೆ ಹಿಂದೂ-ಕೆನಡಿಯನ್ನರು, ತಮ್ಮ ಸಮುದಾಯದ ಭದ್ರತೆ ಮತ್ತು ಸುರಕ್ಷತೆಗಾಗಿ, ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಅಗತ್ಯವಿದೆ. ಇದರಲ್ಲಿ ರಾಜಕಾರಣಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸುಡಾನ್​ನಲ್ಲಿ ಭೀಕರ ಸಂಘರ್ಷ: 13 ಪತ್ರಕರ್ತರ ಸಾವು - ಹಲವರ ಮೇಲೆ ಹಲ್ಲೆ, ಲೂಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.