ETV Bharat / international

5 ಲಕ್ಷ ವಿದೇಶಿಯರಿಗೆ ಸಿಗಲಿದೆ ಅಮೆರಿಕದ ಪೌರತ್ವ ಭಾಗ್ಯ: ಈ ಅರ್ಹತೆಗಳು ಕಡ್ಡಾಯ - immigrants get US citizenship - IMMIGRANTS GET US CITIZENSHIP

ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ವಲಸಿಗರಿಗೆ ಭರ್ಜರಿ ಕೊಡುಗೆ ಘೋಷಿಸಿದ್ದಾರೆ. ಇದರಿಂದ ಲಕ್ಷಾಂತರ ವಿದೇಶಿಯರಿಗೆ ಅಮೆರಿಕದ ಪೌರತ್ವ ಸಿಗಲಿದೆ.

5 ಲಕ್ಷ ವಿದೇಶಿಯರಿಗೆ ಸಿಗಲಿದೆ ಅಮೆರಿಕದ ಪೌರತ್ವ ಭಾಗ್ಯ
5 ಲಕ್ಷ ವಿದೇಶಿಯರಿಗೆ ಸಿಗಲಿದೆ ಅಮೆರಿಕದ ಪೌರತ್ವ ಭಾಗ್ಯ (ETV Bharat)
author img

By PTI

Published : Jun 18, 2024, 7:28 PM IST

ವಾಷಿಂಗ್ಟನ್ (ಅಮೆರಿಕ): ವಲಸೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಅಮೆರಿಕ ಈಗ ಮೆತ್ತಗಾಗಿದ್ದು, ವಿದೇಶಿಗರಿಗೆ ಪೌರತ್ವ ನೀಡಲು ಮುಂದಾಗಿದೆ. ಅಧ್ಯಕ್ಷೀಯ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಜೋ ಬೈಡನ್​ ವಿದೇಶಿಯರಿಗೆ ಬಂಪರ್​ ಆಫರ್​ ನೀಡಿದ್ದಾರೆ. ಇದರಿಂದ ಸುಮಾರು 5 ಲಕ್ಷಕ್ಕೂ (ಅರ್ಧ ಮಿಲಿಯನ್​)ಅಧಿಕ ವಲಸಿಗರು ಅಮೆರಿಕದ ಪೌರತ್ವ ಪಡೆಯಲಿದ್ದಾರೆ.

ಅಮೆರಿಕ ಸರ್ಕಾರ ಮುಂದಿನ ತಿಂಗಳಿನಿಂದ ಅಮೆರಿಕನ್​​ ವಿದೇಶಿ ನಿವಾಸಿಗಳಿಗೆ ಕಾನೂನುರೀತ್ಯಾ ನಾಗರಿಕತ್ವ ನೀಡುವ ಕಾರ್ಯಕ್ಕೆ ಚಾಲನೆ ನೀಡಲಿದೆ. ಇದರಿಂದ ಅಮೆರಿಕನ್​ ಸಂಗಾತಿಯನ್ನು ವಿವಾಹವಾದ ವಲಸಿಗರಿಗೆ ಇದು ವರಪ್ರಸಾದವಾಗಲಿದೆ. ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸಿದವರು ಸೇರಿ ಲಕ್ಷಾಂತರ ಜನರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶ್ವೇತಭವನದ ಅಧಿಕಾರಿಗಳು, ಬೈಡನ್ ಸರ್ಕಾರವು ಮುಂದಿನ ತಿಂಗಳಿಂದ ವಲಸಿಗರಿಗೆ ಪೌರತ್ವ ನೀಡಲಿದೆ. ಇದಕ್ಕೆ ಹಲವು ಅರ್ಹತೆಗಳನ್ನು ನಿಗದಿ ಮಾಡಲಾಗಿದೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿದವರು ದೇಶದ ಪೌರತ್ವ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಅಮೆರಿಕದ ಪ್ರಜೆಯನ್ನು ಮದುವೆಯಾಗಿರುವ ಸುಮಾರು 50 ಸಾವಿರಕ್ಕೂ ಅಧಿಕ ನಾಗರಿಕರಲ್ಲದ ಯುವಕರು ಸಹ ಪ್ರಕ್ರಿಯೆಗೆ ಒಳಪಡಲಿದ್ದಾರೆ. ಶಾಶ್ವತ ನಿವಾಸ ಒದಗಿಸುವ ಗ್ರೀನ್​ ಕಾರ್ಡ್​ಗೆ ಅರ್ಹ ವಲಸಿಗರು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಮೂರು ವರ್ಷಗಳ ಅವಕಾಶ ಇರಲಿದೆ. ತಾತ್ಕಾಲಿಕ ಕೆಲಸದ ಪರವಾನಗಿ ಪಡೆಯಲಿದ್ದಾರೆ. ಗಡಿಪಾರಿನಿಂದಲೂ ರಕ್ಷಣೆ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಇದಕ್ಕೆ ತಗುಲುವ ಶುಲ್ಕವನ್ನೂ ಕೂಡ ಇನ್ನಷ್ಟೇ ನಿಗದಿಯಾಗಲಿದೆ. ಅಮೆರಿಕನ್​ ಪ್ರಜೆಯನ್ನು ವಿದೇಶಿ ಪ್ರಜೆ ವಿವಾಹವಾಗಿ 10 ವರ್ಷವಾಗಿರಬೇಕು. ಜೂನ್ 17ಕ್ಕೆ ಅನ್ವಯಿಸಿರಬೇಕು. ಈ ನಿಯಮ ಮೀರಿದವರು ಈ ಯೋಜನೆಗೆ ಅರ್ಹತೆ ಪಡೆಯುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಹತೆ ಪಡೆಯಲು ನಿಯಮಗಳೇನು?

  1. ಅಮೆರಿಕ ಪ್ರಜೆಯನ್ನು ವಿವಾಹವಾಗಿ ಕನಿಷ್ಠ 10 ವರ್ಷ ಕಳೆದಿರಬೇಕು
  2. 2024 ರ ಜೂನ್​ 17ನೇ ತಾರೀಖಿಗೆ ಅದು ಅನ್ವಯವಾಗಿರಬೇಕು
  3. ಮಾಜಿ ಅಧ್ಯಕ್ಷ ಬರಾಕ್​ ಒಬಾಮಾರ ಕನಸಿನ ಯೋಜನೆ ಇದಾಗಿದೆ
  4. ಗಡಿಪಾರು, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ವಲಸಿಗರು

ಇದನ್ನೂ ಓದಿ: ಸಿಖ್​ ಉಗ್ರನ ಹತ್ಯೆ ಸಂಚು ಕೇಸ್​: ಅಮೆರಿಕ ನ್ಯಾಯಾಲಯದ ಮುಂದೆ ನಿಖಿಲ್​ ಗುಪ್ತಾ ಹಾಜರು - Nikhil Gupta before US court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.