ETV Bharat / international

ಇದೇ ಮೊದಲ ಬಾರಿಗೆ ನ್ಯೂಯಾರ್ಕ್​ನಲ್ಲಿ ಶಾಲೆಗಳಿಗೆ ದೀಪಾವಳಿ ರಜೆ: ಐತಿಹಾಸಿಕ ನಿರ್ಧಾರ

ನ್ಯೂಯಾರ್ಕ್​ ನಗರದಲ್ಲಿ 1.1 ಮಿಲಿಯನ್​ ವಿದ್ಯಾರ್ಥಿಗಳು ಈ ಬೆಳಕಿನ ಹಬ್ಬ ಆಚರಣೆ ಮಾಡುತ್ತಿರುವುದರಿಂದ ರಜೆ ಘೋಷಣೆ ಮಾಡಲಾಗಿದೆ

for-1st-time-diwali-will-be-official-school-holiday-for-new-york-city-schools-this-year
ವರ್ಲ್ಡ್​ ಟ್ರೇಡ್​ ಸೆಂಟರ್​ನಲ್ಲಿ ದೀಪಾವಳಿ ಶುಭಾಶಯ (ಎಎನ್​ಐ)
author img

By PTI

Published : Oct 31, 2024, 12:00 PM IST

ನ್ಯೂಯಾರ್ಕ್, ಅಮೆರಿಕ​: ಇದೇ ಮೊದಲ ಬಾರಿಗೆ ನ್ಯೂಯಾರ್ಕ್​ ನಗರದಲ್ಲಿ ದೀಪಾವಳಿಗೆ ಅಧಿಕೃತ ರಜೆ ಘೋಷಣೆ ಮಾಡುವ ಮೂಲಕ ಐತಿಹಾಸಿಕ ನಡೆ ಇಟ್ಟಿದೆ.

ನ್ಯೂಯಾರ್ಕ್​ ನಗರದಲ್ಲಿ 1.1 ಮಿಲಿಯನ್​ ವಿದ್ಯಾರ್ಥಿಗಳು ಈ ಬೆಳಕಿನ ಹಬ್ಬದ ಆಚರಣೆ ಮಾಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ನ್ಯೂಯಾರ್ಕ್​ನ ಸಾರ್ವಜನಿಕ ಶಾಲೆಗಳಲ್ಲಿ ದೀಪಾವಳಿಗೆ ರಜೆ ಘೋಷಣೆ ಮಾಡುವ ಸಂಬಂದ ಕಳೆದ ವರ್ಷ ಗವರ್ನರ್​ ಕ್ಯಾತಿ ಹೊಚುಲ್​ ಶಾಸನಕ್ಕೆ ಸಹಿ ಹಾಕಿದ್ದರು. ಇದು ಈ ವರ್ಷದಿಂದ ಜಾರಿಯಾಗಿದ್ದು, ದೀಪಾವಳಿ ಹಿನ್ನೆಲೆ ನವೆಂಬರ್​ 1 ಶಾಲೆಗಳಿಗೆ ರಜೆ ನೀಡಲಾಗಿದೆ.

ಇದೇ ಮೊದಲ ಬಾರಿಗೆ ದೀಪಾವಳಿಗೆ ರಜೆ: ನ್ಯೂಯಾರ್ಕ್ ನಗರದ ಮೇಯರ್ ಕಚೇರಿಯ ಡೆಪ್ಯುಟಿ ಕಮಿಷನರ್ ದಿಲೀಪ್ ಚೌಹಾಣ್​ ಮಾತನಾಡಿ, ನ್ಯೂಯಾರ್ಕ್ ನಗರದಲ್ಲಿ ಮೊದಲ ಬಾರಿಗೆ ದೀಪಾವಳಿ ದಿನದಂದು ಅಧಿಕೃತವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಇದು ನಮ್ಮ ನಗರದ ವೈವಿಧ್ಯತೆ ಮತ್ತು ನಮ್ಮ ಸಮುದಾಯ ಮತ್ತು ನಾಯಕರ ದಣಿವರಿಯದ ಪ್ರಯತ್ನಗಳಿಂದಾಗಿ ಹಬ್ಬವನ್ನು ಆಚರಿಸುತ್ತಿರುವುದು ಒಂದು ಮೈಲಿಗಲ್ಲಾಗಿದೆ. 1.1 ಮಿಲಿಯನ್ ವಿದ್ಯಾರ್ಥಿಗಳು ಈ ಹಬ್ಬವನ್ನು ಸಂಭ್ರಮಿಸಲಿದ್ದಾರೆ. ದೀಪಾವಳಿಯು ಏಕತೆಯ ಸಂಕೇತವಾಗಿದ್ದು, ಕತ್ತಲೆಯ ಮೇಲೆ ಬೆಳಕು ಮತ್ತು ಅಜ್ಞಾನದ ಮೇಲೆ ಜ್ಞಾನದ ಆಚರಣೆಯಾಗಿದೆ ಎಂದಿದ್ದಾರೆ.

ನ್ಯೂಯಾರ್ಕ್​ಗೆ ವಲಸೆ ಬಂದವರು, ಈ ರಜಾ ದಿನವನ್ನು ಕುಟುಂಬಗಳು, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಆಚರಿಸುವ ಮೂಲಕ ಸಂಭ್ರಮಿಸುತ್ತಾರೆ. ಈ ದಿನದಂದು ರಜೆ ನೀಡುವುದು ಸವಾಲಿನಿಂದ ಕೂಡಿತ್ತು. ಆದರೂ ವಿಶೇಷವಾಗಿ ಸಮತೋಲಿತವಾದ ನಿರ್ಧಾರ ಕೈಗೊಂಡು ಈ ರಜೆ ಘೋಷಿಸಲಾಗಿದೆ. ಈ ಮೂಲಕ ಎಲ್ಲ ಸಮುದಾಯಗಳನ್ನು ಗೌರವದಿಂದ ಕಾಣುವುದು ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಚಿಂತನಶೀಲ ಹೊಂದಾಣಿಕೆಗಳನ್ನು ಮಾಡಬೇಕಾಗಿದೆ ಎಂದರು.

ದೀಪಾವಳಿ ವೈವಿಧ್ಯತೆಯ ವಿಶಿಷ್ಟ ಹಬ್ಬವಾಗಿದೆ ಎಂಬುದನ್ನು ನೆನಪಿಸುತ್ತದೆ. ಈ ರಜಾ ದಿನವೂ ನಮ್ಮ ನಡುವೆ ಏಕತೆ ಮತ್ತು ಸಮೃದ್ಧತೆಯನ್ನುಂಟು ಮಾಡುತ್ತದೆ ಎಂದಿದ್ದಾರೆ. ನ್ಯೂಯಾರ್ಕ್​ ನಗರದಲ್ಲಿ ಹಲವಾರು ಸಮುದಾಯ ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳ ಆಯೋಜನೆ ಮೂಲಕ ದೀಪಾವಳಿ ಆಚರಣೆ ಪ್ರಾರಂಭಿಸಲಾಗಿದೆ.

ದೀಪಾವಳಿ ಹಬ್ಬದ ಹಿನ್ನೆಲೆ ನ್ಯೂಯಾರ್ಕ್​ನಲ್ಲಿರುವ ವರ್ಲ್ಡ್​​ ಟ್ರೇಡ್​ ಸೆಂಟರ್​​ ಕಟ್ಟಡದ ಮೇಲೆ ವಿದ್ಯುತ್​ ದೀಪಾಲಂಕಾರ ಮಾಡುವ ಮೂಲಕ ದೀಪಾವಳಿಗೆ ಶುಭಾಶಯ ಕೋರಲಾಯಿತು. ಅಷ್ಟೆ ಅಲ್ಲದೇ ಅಮೆರಿಕ ಅಧ್ಯಕ್ಷ ಜೋ ಬೈಡನ್​​​ ಕೂಡ ಶ್ವೇತಭವನದಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು.

ಇದನ್ನೂ ಓದಿ: ಅಮೆರಿಕದ ಒರೆಗಾನ್ ಕರಾವಳಿಯಲ್ಲಿ 6.0 ತೀವ್ರತೆಯ ಭೂಕಂಪ: ಸಾವು- ನೋವಿನ ಮಾಹಿತಿ ಇಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.