ETV Bharat / international

ಸುಡಾನ್​ನಲ್ಲಿ ಭೀಕರ ಸಂಘರ್ಷ: ರಾಜಧಾನಿ ಖಾರ್ಟೂಮ್ ವಶಕ್ಕೆ ಪಡೆಯಲು ಸೇನೆ ಹೋರಾಟ - Sudan Conflict - SUDAN CONFLICT

ಸುಡಾನ್​ನಲ್ಲಿ ಮತ್ತೊಮ್ಮೆ ಭೀಕರ ಸಂಘರ್ಷ ಭುಗಿಲೆದ್ದಿದೆ.

ಖಾರ್ಟೂಮ್​ನಲ್ಲಿ ಕಂಡು ಬಂದ ದೃಶ್ಯ
ಖಾರ್ಟೂಮ್​ನಲ್ಲಿ ಕಂಡು ಬಂದ ದೃಶ್ಯ (IANS)
author img

By ETV Bharat Karnataka Team

Published : Sep 27, 2024, 12:36 PM IST

ಖಾರ್ಟೂಮ್: ಸುಡಾನ್ ಸೇನೆಯು ರಾಜಧಾನಿ ಖಾರ್ಟೂಮ್​ನಲ್ಲಿ ತನ್ನ ಪ್ರತಿಸ್ಪರ್ಧಿ ಅರೆಸೈನಿಕ ಪಡೆಗಳ ವಿರುದ್ಧ ಭೀಕರ ದಾಳಿಯನ್ನು ಆರಂಭಿಸಿದೆ. ಇದು ನಗರದ ಮೇಲೆ ಮರಳಿ ನಿಯಂತ್ರಣ ಸಾಧಿಸುವಲ್ಲಿ ಕಳೆದ ಕೆಲ ತಿಂಗಳಲ್ಲಿ ಸೇನೆಯ ಅತ್ಯಂತ ಮಹತ್ವದ ಪ್ರಯತ್ನವಾಗಿದೆ ಎಂದು ಮಿಲಿಟರಿ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಧ್ಯ ಖಾರ್ಟೂಮ್ ಮತ್ತು ಅದರ ನೆರೆಯ ನಗರಗಳಾದ ಒಮ್ದುರ್ಮನ್ ಮತ್ತು ಬಹ್ರಿಯಲ್ಲಿ ಭಾರಿ ಹೋರಾಟ ನಡೆಯುತ್ತಿದೆ. ವಾಯು ದಾಳಿ, ಫಿರಂಗಿ ದಾಳಿ ಮತ್ತು ಲಘು ಮತ್ತು ಮಧ್ಯಮ ಶಸ್ತ್ರಾಸ್ತ್ರಗಳನ್ನು ಒಳಗೊಂಡ ಘರ್ಷಣೆಗಳು ನಡೆಯುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಖಾರ್ಟೂಮ್​​ನಲ್ಲಿ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್​ಎಸ್ಎಫ್) ಯ ನಿಯಂತ್ರಣದಲ್ಲಿರುವ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಸೇನೆ ಪ್ರಯತ್ನಿಸುತ್ತಿದೆ ಎಂದು ಮಿಲಿಟರಿ ಮೂಲಗಳು ಗುರುವಾರ ತಿಳಿಸಿವೆ.

"ಇಂದು, ಸೇನೆಯು ಮಧ್ಯ ಖಾರ್ಟೂಮ್​ನ ಆಯಕಟ್ಟಿನ ಪ್ರದೇಶಗಳ ಮೇಲೆ ನೆಲದ ದಾಳಿಯನ್ನು ಪ್ರಾರಂಭಿಸಿದೆ. ಅರೆಸೇನಾಪಡೆಗಳನ್ನು ಪ್ರಮುಖ ಸ್ಥಳಗಳಿಂದ ಹೊರಹಾಕಲು ಅತಿದೊಡ್ಡ ಮತ್ತು ವ್ಯಾಪಕವಾದ ದಾಳಿ ಇದಾಗಿದೆ" ಎಂದು ಮೂಲಗಳು ಕ್ಸಿನ್ಹುವಾಗೆ ತಿಳಿಸಿವೆ.

ಸೇನೆಯ ಜನರಲ್ ಕಮಾಂಡ್ ಕಚೇರಿ, ಜನರಲ್ ಇಂಟೆಲಿಜೆನ್ಸ್ ಸರ್ವಿಸ್ ಪ್ರಧಾನ ಕಚೇರಿ ಮತ್ತು ಖಾರ್ಟೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಆದಾಗ್ಯೂ ಈ ಕಾರ್ಯಾಚರಣೆಯ ಬಗ್ಗೆ ಸೇನೆ ಅಧಿಕೃತ ಮಾಹಿತಿ ನೀಡಿಲ್ಲ.

ಸೇನಾಪಡೆಗಳ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಆರ್​ಎಸ್ಎಫ್ ಸಲಹೆಗಾರ ಎಲ್ ಬಾಷಾ ತಬಿಗ್, "ಸೇನಾಪಡೆಗೆ ಯಾವುದೇ ಯಶಸ್ಸು ಸಿಕ್ಕಿಲ್ಲ. ಎಲ್ ಫಿತಿಹಾಬ್ ಸೇತುವೆಯನ್ನು ದಾಟಿ ಖಾರ್ಟೂಮ್ ಕಡೆಗೆ ಹೋಗಲು ಪ್ರಯತ್ನಿಸುತ್ತಿದ್ದ ಸೇನಾಪಡೆಯ ತುಕಡಿಯೊಂದನ್ನು ಆರ್​ಎಸ್ಎಫ್ ಪಡೆಗಳು ನಾಶಪಡಿಸಿವೆ" ಎಂದು ಬರೆದಿದ್ದಾರೆ.

ಏತನ್ಮಧ್ಯೆ, ಆರ್​ಎಸ್ಎಫ್ ಭದ್ರಕೋಟೆ ಎಂದು ಹೇಳಲಾದ ಕೇಂದ್ರ ಖಾರ್ಟೂಮ್​ನ ಅಲ್ ಸೌಕ್ ಅಲ್-ಅರಬಿ ಮಾರುಕಟ್ಟೆಗೆ ಸೇನಾಪಡೆಯ ಯೋಧರು ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿವೆ.

ಕಳೆದ ವರ್ಷ ಏಪ್ರಿಲ್ 15 ರಂದು ಭುಗಿಲೆದ್ದ ಅಂತರ್ಯುದ್ಧದಿಂದಾಗಿ ಖಾರ್ಟೂಮ್ ಮತ್ತು ಇತರ ಅನೇಕ ನಗರಗಳು ಧ್ವಂಸವಾಗಿವೆ. ಅನೇಕ ಬಾರಿ ಕದನ ವಿರಾಮಕ್ಕೆ ಬರಲಾಗಿದ್ದರೂ, ಅವನ್ನು ಪದೇ ಪದೆ ಉಲ್ಲಂಘಿಸಲಾಗಿದೆ. ಸಂಘರ್ಷದಿಂದಾಗಿ ಈಗಾಗಲೇ ಸಾವಿರಾರು ನಾಗರಿಕರು ಮೃತಪಟ್ಟಿದ್ದು, ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದಾರೆ.

ಇದನ್ನೂ ಓದಿ: ಫುಕುಶಿಮಾ ಸ್ಥಾವರದಿಂದ 9ನೇ ಸುತ್ತಿನ ಪರಮಾಣು ಕಲುಷಿತ ನೀರು ಬಿಡುಗಡೆ ಮಾಡಲಾರಂಭಿಸಿದ ಜಪಾನ್ - Fukushima nuclear wastewater

ETV Bharat Logo

Copyright © 2025 Ushodaya Enterprises Pvt. Ltd., All Rights Reserved.