ETV Bharat / international

19ನೇ ನಾಮ್​ ಶೃಂಗಸಭೆ: ನೇಪಾಳ ಪ್ರಧಾನಿ ಭೇಟಿಯಾದ ಜೈಶಂಕರ್

19ನೇ ನಾಮ್ ಶೃಂಗಸಭೆಯಲ್ಲಿ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

external-minister-jaishankar-meets-nepal-pm-in-19th-nam-summit
19ನೇ ನಾಮ್​ ಶೃಂಗಸಭೆ: ನೇಪಾಳ ಪ್ರಧಾನಿ ಭೇಟಿಯಾದ ಜೈಶಂಕರ್
author img

By ETV Bharat Karnataka Team

Published : Jan 20, 2024, 1:29 AM IST

ಕಂಪಾಲಾ (ಉಗಾಂಡಾ): 19ನೇ ನಾಮ್​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಉಗಾಂಡಾದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶುಕ್ರವಾರ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರನ್ನು ಭೇಟಿಯಾದರು. 19ನೇ ನಾಮ್ ಶೃಂಗಸಭೆಯ ಹೊರತಾಗಿ ನೇಪಾಳದ ಪ್ರಧಾನಿಯೊಂದಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ನೇಪಾಳದಲ್ಲಿನ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಶೃಂಗಸಭೆಯಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿರುವ ಜೈಶಂಕರ್ ಗುರುವಾರ ಕಂಪಾಲಾಕ್ಕೆ ಆಗಮಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಶುಕ್ರವಾರ ಇಲ್ಲಿ ಪ್ರಾರಂಭವಾದ 19 ನೇ ಅಲಿಪ್ತ ಚಳುವಳಿ (ನಾಮ್) ಶೃಂಗಸಭೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಮುಂಬರುವ ಎರಡು ದಿನಗಳ ಕಾಲ ಸಹೋದ್ಯೋಗಿಗಳೊಂದಿಗೆ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಜೈಶಂಕರ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಗಾಂಡಾದ ನೇತೃತ್ವದಲ್ಲಿ 19 ನೇ ನಾಮ್ ಶೃಂಗಸಭೆ ಜಾಗತಿಕ ಶ್ರೀಮಂತಿಕೆಗಾಗಿ ಸಹಕಾರವನ್ನು ಧೃಡಗೊಳಿಸುವುದು ಎಂಬ ವಿಷಯದ ಅಡಿ ಈ ಶೃಂಗ ನಡೆಯುತ್ತಿದೆ. ಈ ಶೃಂಗಸಭೆಯಲ್ಲಿ 120ಕ್ಕೂ ಹೆಚ್ಚು ಅಭಿವೃದ್ಧಿಶೀಲ ದೇಶಗಳು ಭಾಗಿಯಾಗುವ ನಿರೀಕ್ಷೆ ಇದೆ.

ನಾಮ್ 120 ರಾಷ್ಟ್ರಗಳ ವೇದಿಕೆಯಾಗಿದ್ದು, ಇದು ಯಾವುದೇ ಬಣದೊಂದಿಗೆ ಔಪಚಾರಿಕವಾಗಿ ಮೈತ್ರಿ ಹೊಂದಿಲ್ಲ ಅಥವಾ ವಿರೋಧವನ್ನು ಹೊಂದಿಲ್ಲ. ನಾಮ್ ಪ್ರಮುಖ ಮತ್ತು ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಭಾರತವು ಆಂದೋಲನದ ತತ್ವಗಳು ಮತ್ತು ಮೌಲ್ಯಗಳಿಗೆ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

ಗುರುವಾರ ನಾಮ್ ಶೃಂಗಸಭೆಯ ಹೊರತಾಗಿ, ವಿದೇಶಾಂಗ ಸಚಿವ ಜೈಶಂಕರ್ ಈಜಿಪ್ಟ್ ಮತ್ತು ಬೆಲಾರಸ್‌ನ ಸಹವರ್ತಿಗಳೊಂದಿಗೆ ಸಭೆ ನಡೆಸಿದರು. ಜೈಶಂಕರ್ ಮತ್ತು ಸೆರ್ಗೆಯ್ ಅಲೆನಿಕ್ ಅವರು ಭಾರತ ಮತ್ತು ಬೆಲಾರಸ್ ನಡುವಿನ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಉಭಯ ನಾಯಕರು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.

ಜೈಶಂಕರ್ ಅವರು ಮಾಲ್ಡೀವ್ಸ್​ನ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರನ್ನು ಭೇಟಿ ಮಾಡಿದರು ಮತ್ತು ಇಬ್ಬರು ಸಚಿವರು ಭಾರತದ ಮಿಲಿಟರಿ ಸಿಬ್ಬಂದಿ ಹಿಂತೆಗೆದುಕೊಳ್ಳುವ ಕುರಿತು ನಡೆಯುತ್ತಿರುವ ಉನ್ನತ ಮಟ್ಟದ ಚರ್ಚೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಸಾರ್ಕ್ ಹಾಗೂ ನ್ಯಾಮ್‌ನಲ್ಲಿ ಪರಸ್ಪರ ಸಹಕಾರಕ್ಕಾಗಿ ಚರ್ಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.