ETV Bharat / international

ವಿಶ್ವದ ಜನಸಂಖ್ಯಾ ಬೆಳವಣಿಗೆ ದರ ಕುಸಿತ: ಮತ್ತೆ ಕಳವಳ ವ್ಯಕ್ತಪಡಿಸಿದ ಎಲೋನ್ ಮಸ್ಕ್​ - Population Growth Slowdown

author img

By ETV Bharat Karnataka Team

Published : Aug 8, 2024, 5:34 PM IST

ವಿಶ್ವದ ಜನಸಂಖ್ಯಾ ಬೆಳವಣಿಗೆ ದರ ಕುಸಿತವಾಗುತ್ತಿರುವುದಕ್ಕೆ ಎಲೋನ್​ ಮಸ್ಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಎಲೋನ್ ಮಸ್ಕ್​
ಎಲೋನ್ ಮಸ್ಕ್​ (IANS)

ನವದೆಹಲಿ: ವಿಶ್ವದ ಜನಸಂಖ್ಯಾ ಇಳಿಕೆ ದರ ಹೆಚ್ಚಾಗುತ್ತಿದೆ ಎಂದು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಕಳವಳ ವ್ಯಕ್ತಪಡಿಸಿದ್ದಾರೆ. ವರ್ಷದಲ್ಲಿ ಜನಸಂಖ್ಯಾ ಬೆಳವಣಿಗೆ ದರ ಹೇಗೆ ಕುಸಿತವಾಗಿದೆ ಎಂಬುದರ ಬಗ್ಗೆ ನ್ಯೂಯಾರ್ಕ್​ ಟೈಮ್ಸ್​ನಲ್ಲಿ ಪ್ರಕಟವಾದ ವರದಿಯೊಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಶೇರ್ ಮಾಡಿರುವ ಅವರು, 'ಜನಸಂಖ್ಯಾ ಬೆಳವಣಿಗೆ ದರ ಕುಸಿತವಾಗುತ್ತಿದೆ' ಎಂದು ಬರೆದಿದ್ದಾರೆ.

ಪೋಲಂಡ್​ನಲ್ಲಿ ಅತ್ಯಧಿಕ (ಮೈನಸ್ ಶೇ 10.5) ಜನಸಂಖ್ಯಾ ಬೆಳವಣಿಗೆ ದರ ಕುಸಿತವಾಗಿದ್ದರೆ, ಐರ್ಲೆಂಡ್ (ಮೈನಸ್ ಶೇ​ 10.3) ಮತ್ತು ಜೆಕ್ ಗಣರಾಜ್ಯ (ಮೈನಸ್​ ಶೇ 10) ನಂತರದ ಸ್ಥಾನಗಳಲ್ಲಿವೆ. ಡೆನ್ಮಾರ್ಕ್ (ಮೈನಸ್​ ಶೇ 1.9), ಯುಎಸ್ (ಮೈನಸ್​ ಶೇ 1.9), ನೆದರ್ಲ್ಯಾಂಡ್ಸ್ (ಶೇ 2) ಮತ್ತು ಸ್ಪೇನ್ (ಶೇ 2) ದೇಶಗಳಲ್ಲಿ ಜನಸಂಖ್ಯಾ ಬೆಳವಣಿಗೆ ದರ ಕೊಂಚ ಕಡಿಮೆಯಾಗಿದೆ. ನಾರ್ವೆ (ಶೇ 0.3), ಮಲೇಷ್ಯಾ (ಶೇ 2.2), ಥೈಲ್ಯಾಂಡ್ (ಶೇ 3.6) ಮತ್ತು ಫಿಲಿಪ್ಪೀನ್ಸ್ (ಶೇ 6.7)ಗಳ ಜನಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ.

ಟೆಸ್ಲಾ ಮತ್ತು ಸ್ಪೇಸ್​ ಎಕ್ಸ್​ ಸಿಇಒ ಆಗಿರುವ ಎಲೋನ್​ ಮಸ್ಕ್​ ವಿಶ್ವದ ಜನಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಮಾತನಾಡಿರುವುದು ಇದೇ ಮೊದಲೇನಲ್ಲ. ದಾಖಲೆಯ ಕಡಿಮೆ ಜನನ ಪ್ರಮಾಣವು ಕೆಲ ದೇಶಗಳಲ್ಲಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗುತ್ತಿದೆ ಮತ್ತು ಅಂಥ ದೇಶಗಳು ಸತ್ತ ನಾಗರಿಕತೆಗಳಂತೆ ನಾಶವಾಗುತ್ತವೆ ಎಂದು ಏಪ್ರಿಲ್​ನಲ್ಲಿ ಮಸ್ಕ್ ಎಚ್ಚರಿಸಿದ್ದರು.

ಯುರೋಪ್​ನಲ್ಲಿ ಜನನ ಪ್ರಮಾಣ ದಾಖಲೆಯ ಕಡಿಮೆ ಮಟ್ಟದಲ್ಲಿರುವುದರಿಂದ ಜನಸಂಖ್ಯೆ ಕುಸಿತವಾಗುತ್ತಿದೆ ಹಾಗೂ ಏಷ್ಯಾದ ಕೆಲ ಭಾಗಗಳಲ್ಲಿ ಈ ಪ್ರಮಾಣ ಇನ್ನೂ ತೀವ್ರವಾಗಿದೆ ಎಂದು ಅವರು ಹೇಳಿದ್ದರು. ಇದು ಬದಲಾಗದಿದ್ದರೆ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವ ಭೂಮಿಯ ಮೇಲಿನ ಯಾವುದೇ ದೇಶಗಳು ಜನರಿಲ್ಲದೆ ಖಾಲಿಯಾಗಿ, ದೀರ್ಘಕಾಲದ ಹಿಂದೆ ಸತ್ತು ಹೋಗಿರುವ ಅನೇಕ ನಾಗರಿಕತೆಗಳ ಅವಶೇಷಗಳಂತೆ ನಾಶವಾಗುತ್ತವೆ ಎಂದು ಮಸ್ಕ್​ ಅಭಿಪ್ರಾಯಪಟ್ಟಿದ್ದರು. ಜನನ ಪ್ರಮಾಣ ಕುಸಿತವು ವಿಶ್ವಕ್ಕೆ ಜಾಗತಿಕ ತಾಪಮಾನದ ಸಮಸ್ಯೆಗಿಂತಲೂ ದೊಡ್ಡ ಅಪಾಯವಾಗಿದೆ ಎಂದು ಕಳೆದ ವರ್ಷ ಮಸ್ಕ್ ಹೇಳಿದ್ದರು.

ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾದಂತಹ ದೇಶಗಳು ಕೂಡ ಕಡಿಮೆ ಜನನ ಪ್ರಮಾಣವನ್ನು ಹೊಂದಿವೆ. ದಿ ಲ್ಯಾನ್ಸೆಟ್​ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ- ಜಾಗತಿಕವಾಗಿ ಹೆಚ್ಚಿನ ದೇಶಗಳು 2100ರ ವೇಳೆಗೆ ಈಗಿರುವ ಜನಸಂಖ್ಯೆಯ ಮಟ್ಟವನ್ನು ಉಳಿಸಿಕೊಳ್ಳುವಷ್ಟು ಫಲವತ್ತತೆ ದರವನ್ನು ಕೂಡ ಹೊಂದಿರುವುದಿಲ್ಲ.

ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುಯೇಷನ್ (ಐಎಚ್ಎಂಇ) ಸಂಶೋಧನೆಯ ಪ್ರಕಾರ, ಜಾಗತಿಕ ಒಟ್ಟು ಫಲವತ್ತತೆ ದರವು 2021 ರಲ್ಲಿ ಪ್ರತಿ ಮಹಿಳೆಗೆ ತನ್ನ ಜೀವಿತಾವಧಿಯಲ್ಲಿ 2.23 ಜನನಗಳಿಂದ 2050 ರಲ್ಲಿ 1.68 ಮತ್ತು 2100 ರಲ್ಲಿ 1.57ಕ್ಕೆ ಇಳಿಕೆಯಾಗಲಿದೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಿಂದ ಯುವತಿಯರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ - Tech Driven Disorders

ETV Bharat Logo

Copyright © 2024 Ushodaya Enterprises Pvt. Ltd., All Rights Reserved.