ETV Bharat / international

ಜಪಾನ್​ನಲ್ಲಿ ಹಠಾತ್​ ಕಂಪಿಸಿದ ಭೂಮಿ; 5.9 ತೀವ್ರತೆಯ ಭೂಕಂಪ: ಸುನಾಮಿ ಆತಂಕವಿಲ್ಲ! - Earthquake in japan - EARTHQUAKE IN JAPAN

ಜಪಾನ್​ನಲ್ಲಿ ಇಂದು ಬೆಳಗ್ಗೆ 5.9 ತೀವ್ರತೆಯೆ ಭೂಕಂಪ ಸಂಭವಿಸಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳಿದೆ.

ಭೂಕಂಪ
ಭೂಕಂಪ (ETV Bharat)
author img

By PTI

Published : Jun 3, 2024, 6:55 AM IST

ಟೋಕಿಯೋ, ಜಪಾನ್​: ಜಪಾನಿನ ಉತ್ತರ-ಮಧ್ಯ ಪ್ರದೇಶವಾದ ಇಶಿಕಾವಾದಲ್ಲಿ ಇಂದು 5.9 ತೀವ್ರತೆಯ ಭೂಕಂಪನದ ಅನುಭವವಾಗಿದೆ.

ಜಪಾನ್ ಹವಾಮಾನ ಸಂಸ್ಥೆ ವರದಿ ಪ್ರಕಾರ, ನೋಟೊ ಪೆನಿನ್ಸುಲಾದ ಉತ್ತರದ ತುದಿಯಲ್ಲಿ ಬೆಳಗ್ಗೆ ಸುಮಾರು 6:31ರ ಸಮಯಕ್ಕೆ 5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಸಂಭವಿಸಿದ ಕೆಲವೇ ನಿಮಿಷಗಳ ಅಂತರದಲ್ಲಿ ಮತ್ತೇ 4.8 ತೀವ್ರತೆಯ ಕಂಪನ ಸಂಭವಿಸಿದೆ ಎಂದು ತಿಳಿಸಿರುವ ಸಂಸ್ಥೆ, ಸುನಾಮಿಯ ಅಪಾಯವಿಲ್ಲ ಎಂದೂ ಖಚಿತ ಪಡಿಸಿದೆ. ಭೂಕಂಪನದ ಕೇಂದ್ರಬಿಂದು 10 ಭೂಮಿಯ ಕಿಲೋಮೀಟರ್ ಆಳದಲ್ಲಿದೆ ಪತ್ತೆಯಾಗಿದೆ. ಘಟನೆಯಿಂದ ಯಾವುದೇ ಹಾನಿ ಅಥವಾ ಗಾಯಗಳ ವರದಿಯಾಗಿಲ್ಲ.

ಪಶ್ಚಿಮ ಜಪಾನ್ ರೈಲ್ವೆ ಅಧಿಕಾರಿಯೊಬ್ಬರ ಪ್ರಕಾರ, ಭೂಮಿಕಂಪನದಿಂದ ಯಾವುದೇ ಸೇವೆಗಳನ್ನು ರದ್ದುಗೊಳಿಸಲಾಗಿಲ್ಲ. ಬಹುತೇಕ ಸಾರ್ವಜನಿಕ ಸಾರಿಗೆ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

ವಿದ್ಯುತ್​ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಭೂಕಂಪ ಸಂಭವಿಸಿದ ಸಮೀಪದಲ್ಲೆ ವಿದ್ಯುತ್ ಸ್ಥಾವರಗಳಿದ್ದು ಹೆಚ್ಚಿನ ಹಾನಿ ಸಂಭವಿಸಿಲ್ಲ. ನೊಟೊ ಪೆನಿನ್ಸುಲಾದಲ್ಲಿನ ಶಿಕಾ ಸ್ಥಾವರವು ಸಣ್ಣ ಪ್ರಮಾಣದ ಹಾನಿಯುಂಟಾಗಿದೆ. ಆದರೆ, ಇದರಿಂದ ವಿದ್ಯುತ್​ ಸರಬರಾಜಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಅಲ್ಲದೆ ವಿದ್ಯುತ್ ವ್ಯತ್ಯಯವಾಗಿಲ್ಲ ಎಂದು ತಿಳಿಸಿದ್ದಾರೆ.

ವರ್ಷದ ಆರಂಭ ಜನವರಿ 1 ರಂದು ಜಪಾನಿನ ನೋಟೊ ಪೆನಿನ್ಸುಲಾದಲ್ಲಿ ಸಂಭವಿಸಿದ 7.6 ತೀವ್ರತೆಯ ಭೂಕಂಪದಲ್ಲಿ 241 ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಪ್ರಬಲ ಭೂಕಂಪ: ತೈವಾನ್‌ನಲ್ಲಿ ನಾಲ್ವರು ಸಾವು, ದಕ್ಷಿಣ ಜಪಾನಿನ ಎರಡು ದ್ವೀಪಗಳಿಗೆ ಅಪ್ಪಳಿಸಿದ ಸುನಾಮಿ - tsunami first wave

ETV Bharat Logo

Copyright © 2025 Ushodaya Enterprises Pvt. Ltd., All Rights Reserved.