ETV Bharat / international

ಅಲಾಸ್ಕಾದ ಫೇರ್‌ಬ್ಯಾಂಕ್ಸ್‌ನಲ್ಲಿ ಇಬ್ಬರಿದ್ದ ಡೌಗ್ಲಾಸ್ ಸಿ-54 ವಿಮಾನ ಪತನ - US PLANE CRASH - US PLANE CRASH

ಅಮೆರಿಕದ ಅಲಾಸ್ಕಾದ ಫೇರ್‌ಬ್ಯಾಂಕ್ಸ್‌ನಲ್ಲಿ ಇಬ್ಬರಿದ್ದ ಡೌಗ್ಲಾಸ್ ಸಿ-54 ವಿಮಾನ ಪತನಗೊಂಡಿದೆ.

Douglas C54 plane  Fairbanks  America  Fairbanks International Airport
ಅಲಾಸ್ಕಾದ ಫೇರ್‌ಬ್ಯಾಂಕ್ಸ್‌ನಲ್ಲಿ ಇಬ್ಬರಿದ್ದ ಡೌಗ್ಲಾಸ್ ಸಿ-54 ವಿಮಾನ ಪತನ
author img

By PTI

Published : Apr 24, 2024, 7:34 AM IST

ಫೇರ್‌ಬ್ಯಾಂಕ್ಸ್ (ಅಮೆರಿಕ): ಇಬ್ಬರನ್ನು ಹೊತ್ತೊಯ್ಯುತ್ತಿದ್ದ ಡೌಗ್ಲಾಸ್ ಸಿ-54 ಸ್ಕೈಮಾಸ್ಟರ್ ವಿಮಾನವು ಮಂಗಳವಾರ ಫೇರ್‌ಬ್ಯಾಂಕ್ಸ್ ಬಳಿಯ ತಾನಾನಾ ನದಿಯ ಸಮೀಪವಿರುವ ಬೆಟ್ಟದಲ್ಲಿ ಪತನಗೊಂಡಿದೆ. ಈ ವಿಮಾನದಲ್ಲಿದ್ದವರು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೇರ್‌ಬ್ಯಾಂಕ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ ವಿಮಾನ ಟೇಕ್ ಆಫ್ ಆಗಿತ್ತು. ಅಲಾಸ್ಕಾ ಸ್ಟೇಟ್ ಟ್ರೂಪರ್ಸ್ ಪ್ರಕಾರ, ಅದು ಅಲ್ಲಿಂದ ಸುಮಾರು ಏಳು ಮೈಲಿಗಳು (11 ಕಿಲೋಮೀಟರ್) ದೂರಕ್ಕೆ ಸಾಗುತ್ತಿದ್ದಂತೆ ಅಪಘಾತಕ್ಕೆ ಒಳಗಾಗಿದೆ. ನದಿಯ ದಡದಲ್ಲಿರುವ ಕಡಿದಾದ ಬೆಟ್ಟದಲ್ಲಿ ವಿಮಾನ ಪತನಗೊಂಡಿದೆ.

ಕ್ಲಿಂಟ್ ಜಾನ್ಸನ್ ಮಾಹಿತಿ: ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಅಲಾಸ್ಕಾ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಕ್ಲಿಂಟ್ ಜಾನ್ಸನ್ ಮಾತನಾಡಿ, ವಿಮಾನ ಟೇಕಾಫ್ ಮತ್ತು ಅಪಘಾತದ ನಡುವಿನ ಸಮಯದಲ್ಲಿ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಟವರ್ ಆಪರೇಟರ್​ಗೆ ದೊಡ್ಡದಾಗಿ ಬೆಂಕಿ ಹೊತ್ತಿಕೊಂಡಿದ್ದು, ಹೊಗೆ ಆವರಿಸಿರುವುದು ಕಂಡು ಬಂದಿದೆ'' ಎಂದು ಅವರು ತಿಳಿಸಿದರು.

ಮೈಕೆಲಾ ಮ್ಯಾಥರ್ನೆ ಪ್ರತಿಕ್ರಿಯಿಸಿ, ''ನ್ಯೂ ಓರ್ಲಿಯನ್ಸ್‌ಗೆ ವಿಮಾನ ಪತ್ತೆ ಮಾಡಲು ಸಣ್ಣ ವಿಮಾನವನ್ನು ಪರಿಶೀಲಿಸಲಾಯಿತು. ಅಪಘಾತದ ಸ್ಥಳದಲ್ಲಿ ಎಲ್ಲ ರೀತಿಯ ಪರಿಶೀಲನೆ ನಡೆಸಲಾಗುತ್ತಿದೆ'' ಎಂದು ತಿಳಿಸಿದರು.

C-54 ಡೌಗ್ಲಾಸ್ DC-4 ವಿಮಾನ ಮಿಲಿಟರಿಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದೆ. 2ನೇ ಮಹಾಯುದ್ಧ ಅವಧಿಯ ವಿಮಾನವಾಗಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವಿಮಾನವನ್ನು ಡೌಗ್ಲಾಸ್ C-54 ಎಂದು ಕರೆದರೆ, ಸೈನಿಕರು ಅದನ್ನು DC - 4 ವಿಮಾನ ಎಂದು ಗುರುತಿಸಿದ್ದಾರೆ. ಎನ್‌ಟಿಎಸ್‌ಬಿ ತನಿಖಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸುತ್ತಿದೆ. ಅಪಘಾತಕ್ಕೆ ಒಳಗಾಗಿರುವ ವಿಮಾನದ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಜಾನ್ಸನ್ ತಿಳಿಸಿದರು.

ಇದನ್ನೂ ಓದಿ: ವಲಸಿಗರ ಗಡಿಪಾರು ಕಾನೂನು ಅನುಮೋದಿಸಿದ ಬ್ರಿಟನ್​: ಇಂಗ್ಲಿಷ್ ಕಾಲುವೆ ದಾಟಲು ಯತ್ನಿಸಿದ ಐವರು ಸಾವು - UK Deportation Bill

ETV Bharat Logo

Copyright © 2025 Ushodaya Enterprises Pvt. Ltd., All Rights Reserved.