ETV Bharat / international

ಪಾಕ್​ ಚುನಾವಣಾ ಫಲಿತಾಂಶದಲ್ಲಿ ವಿಳಂಬ: ಇದು ಜನರ ತೀರ್ಪಿನ ಕಳ್ಳತನ ಎಂದ ಇಮ್ರಾನ್​ ಪಕ್ಷ - ಪಾಕ್​ ಚುನಾವಣಾ ಫಲಿತಾಂಶ

ಪೋಲಿಂಗ್ ಏಜೆಂಟ್‌ಗಳನ್ನು ಅಪಹರಿಸಲಾಗಿದೆ ಮತ್ತು ನಕಲಿ ಫಾರ್ಮ್ 45 ಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂಬ ವರದಿಗಳಿವೆ ಎಂದು ಇಮ್ರಾನ್​ ಖಾನ್ ಪಕ್ಷ ಪಿಟಿಐ ಆರೋಪಿಸಿದೆ.

Delays in Pakistan poll results, Imran Khan's party alleges mass rigging
ಪಾಕ್​ ಚುನಾವಣಾ ಫಲಿತಾಂಶದಲ್ಲಿ ವಿಳಂಬ: ಇದು ಜನರ ತೀರ್ಪಿನ ಕಳ್ಳತನ ಎಂದ ಇಮ್ರಾನ್​ ಪಕ್ಷ
author img

By ETV Bharat Karnataka Team

Published : Feb 9, 2024, 9:45 AM IST

ಇಸ್ಲಾಮಾಬಾದ್: ನಿಧಾನಗತಿಯ ಮತ ಎಣಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಚುನಾವಣೆಯ ಫಲಿತಾಂಶಗಳು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಪಾಕಿಸ್ತಾನದ ಜನರ ಆದೇಶವನ್ನೇ ಕಳ್ಳತನ ಮಾಡಲಾಗುತ್ತಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಆರೋಪಿಸಿದೆ. ಒತ್ತಡ ಹಾಗೂ ದಬ್ಬಾಳಿಕೆಯ ಹೊರತಾಗಿಯೂ ಪಿಟಿಐ ಪ್ರಚಂಡ ಬಹುಮತದಿಂದ ಗೆಲ್ಲುವ ಸೂಚನೆ ನೀಡಿದೆ ಎಂದು ಇಮ್ರಾನ್ ಖಾನ್ ಅವರ ಪಕ್ಷ ಹೇಳಿಕೊಂಡಿದೆ.

ಪ್ರತಿ ಮತಗಟ್ಟೆಯಲ್ಲಿ ಪ್ರತಿ ಅಭ್ಯರ್ಥಿಯ ಮತಗಳನ್ನು ನಮೂನೆ 45 ರಲ್ಲಿ ಪಟ್ಟಿ ಮಾಡಲಾಗಿದೆ ಎಂದು ಪಿಟಿಐ ಹೇಳಿದೆ. ಈ ನಮೂನೆಗಳ ಪ್ರತಿಗಳನ್ನು ಪಿಟಿಐ ಅಭ್ಯರ್ಥಿಯ ಪೋಲಿಂಗ್ ಏಜೆಂಟ್‌ಗಳು ಸಂಗ್ರಹಿಸಿದ್ದಾರೆ ಎಂದು ಇಮ್ರಾನ್ ಖಾನ್ ಅವರ ಪಕ್ಷವು ಹೇಳಿಕೆ ನೀಡಿದೆ, ಇದು ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಬಹುಮತದಿಂದ ಗೆದ್ದಿದ್ದಾರೆ ಎಂಬುದನ್ನು ತೋರಿಸುತ್ತಿದೆ. ಆದರೆ, ರಿಟರ್ನಿಂಗ್ ಅಧಿಕಾರಿಗಳು ಈಗ ನಮೂನೆ 47 ಬಳಸಿ ಫಲಿತಾಂಶವನ್ನು ತಿರುಚುತ್ತಿದ್ದಾರೆ ಎಂದು ಪಿಟಿಐ ಆರೋಪಿಸಿದೆ.

ಪಿಟಿಐ ಪಕ್ಷ ತನ್ನ X ಖಾತೆಯಲ್ಲಿ ಹೇಳಿಕೆಯೊಂದನ್ನು ಪೋಸ್ಟ್​ ಮಾಡಿದೆ. "ಪಾಕಿಸ್ತಾನದ ಜನರ ಸ್ಪಷ್ಟ ಮತ್ತು ಅಗಾಧ ಜನಾದೇಶವನ್ನು ಕದಿಯಲಾಗುತ್ತಿದೆ ಎಂದು ಆರೋಪಿಸಿದೆ. ಅಭೂತಪೂರ್ವ ಚುನಾವಣಾ ಪೂರ್ವದ ದಬ್ಬಾಳಿಕೆ ಹೊರತಾಗಿಯೂ, ಮತದಾನದ ದಿನದಂದು ದಾಖಲೆಯ ಮತದಾನವಾಗಿದೆ. ಪ್ರತಿ ಸ್ವತಂತ್ರ ಅಭ್ಯರ್ಥಿಯ ಗೆಲುವು, PTI ಪ್ರಚಂಡ ಬಹುಮತದಿಂದ ಗೆಲ್ಲುವುದನ್ನು ತೋರಿಸಿದೆ. ಇದು ಫಾರ್ಮ್ 45 ತೋರಿಸಿಕೊಟ್ಟಿದೆ. ಪ್ರತಿ ಅಭ್ಯರ್ಥಿಯ ಮತಗಳನ್ನು ಪ್ರತಿ ಮತಗಟ್ಟೆಯಲ್ಲಿ ಫಾರ್ಮ್ 45 ರಲ್ಲಿ ಪಟ್ಟಿ ಮಾಡಲಾಗಿದೆ. ಈ ನಮೂನೆಗಳ ಪ್ರತಿಗಳನ್ನು ಪಿಟಿಐ ಅಭ್ಯರ್ಥಿಗಳ ಪೋಲಿಂಗ್ ಏಜೆಂಟರಗಳು ಸಂಗ್ರಹಿಸಿದ್ದಾರೆ, ಇದು ಅವರು ಹೆಚ್ಚಿನ ಬಹುಮತದಿಂದ ಗೆದ್ದಿದ್ದಾರೆ ಎಂಬುದನ್ನು ತೋರಿಸುತ್ತದೆ. ಆದರೆ, ಚುನಾವಣಾಧಿಕಾರಿಗಳು ಈಗ ಫಲಿತಾಂಶಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಪಿಟಿಐ ಆರೋಪಿಸಿದೆ.

ಪೋಲಿಂಗ್ ಏಜೆಂಟರನ್ನು ಅಪಹರಿಸಿ ನಕಲಿ ನಮೂನೆ 45ಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ ವರದಿಗಳಿವೆ ಎಂದು ಪಿಟಿಐ ಪಕ್ಷ ದೂರಿದೆ. ರಿಗ್ಗಿಂಗ್ ಮಾಡಿರುವ ವಿಡಿಯೋ ಪುರಾವೆಗಳು ತಮ್ಮ ಬಳಿ ಇವೆ ಎಂದು ಇಮ್ರಾನ್ ಖಾನ್ ಪಕ್ಷ ಹೇಳಿಕೊಂಡಿದೆ. ಪಾಕಿಸ್ತಾನದ ಜನರು ತಿರುಚಿದ ಚುನಾವಣೆ ಫಲಿತಾಂಶಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅದು ಹೇಳಿದೆ.

ಪಿಟಿಐ ಎಕ್ಸ್​ ನ ಅಧಿಕೃತ ಖಾತೆ ಮೂಲಕ ಮಾಡಿದ ಪೋಸ್ಟ್​ನಲ್ಲಿ ಹೀಗೆ ಹೇಳಿದೆ. ’’ಪೋಲಿಂಗ್ ಏಜೆಂಟ್‌ಗಳನ್ನು ಅಪಹರಿಸಲಾಗಿದೆ ಮತ್ತು ನಕಲಿ ಫಾರ್ಮ್ 45 ಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂಬ ವರದಿಗಳಿವೆ. ಚುನಾವಣಾ ಕಾಯಿದೆ ಪ್ರಕಾರ, 2:00 ಗಂಟೆಗೆ ಫಲಿತಾಂಶಗಳನ್ನು (ಫಾರ್ಮ್ 47) ನೀಡುವುದು ಕಡ್ಡಾಯವಾಗಿದೆ. ಫಾರ್ಮ್ 47 ರ ಎಣಿಕೆ ಮತ್ತು ಪ್ರಕ್ರಿಯೆಯ ಸಂಕಲನದ ಸಮಯದಲ್ಲಿ ಅಭ್ಯರ್ಥಿ ಮತ್ತು ಅವರ ಪೋಲಿಂಗ್ ಏಜೆಂಟರ ಉಪಸ್ಥಿತಿಯು ಸಹ ಕಡ್ಡಾಯವಾಗಿದೆ. ಆದಾಗ್ಯೂ, ಈ ಎರಡೂ ಅವಶ್ಯಕತೆಗಳನ್ನು ಪೂರೈಸಲಾಗಿಲ್ಲ ಎಂದು ಅದು ಪಿಟಿಐ ಪಕ್ಷ ಹೇಳಿದೆ.

ಇದನ್ನು ಓದಿ:ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ವೇಳೆ ಉಗ್ರರ ದಾಳಿ: 5 ಪೊಲೀಸ್ ಸಿಬ್ಬಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.