ETV Bharat / international

ಇರಾನ್​ ವಿರುದ್ಧದ ಯಾವುದೇ ಆಕ್ರಮಣದಲ್ಲಿ ಅಮೆರಿಕ ಭಾಗಿಯಾಗಲ್ಲ: ಪ್ರತಿದಾಳಿ ಅವಶ್ಯಕತೆ ಇಲ್ಲ ಎಂದ ಬೈಡನ್​​ - US wont participate

ಇಸ್ರೇಲ್​ ಮೇಲಿನ ಇರಾನ್​ ದಾಳಿಯನ್ನು ಜಿ-7 ರಾಷ್ಟ್ರಗಳು ಖಂಡಿಸಿವೆ. ಇಸ್ರೇಲ್​ ಜನರ ರಕ್ಷಣೆಗೆ ಬದ್ಧ ಎಂದಿರುವ ಈ ರಾಷ್ಟ್ರಗಳು ಇರಾನ್​ ನಡೆಯನ್ನು ಟೀಕಿಸಿವೆ. ಈ ನಡುವೆ ಜೋ ಬೈಡನ್​, ಇಸ್ರೇಲ್​​ಗೆ ಪ್ರತಿದಾಳಿ ನಡೆಸುವ ಅಗತ್ಯ ಇಲ್ಲ ಎಂದು ಸಲಹೆ ನೀಡಿದ್ದಾರೆ.

Biden says "US won't participate in any offensive action against Iran
ಇರಾನ್​ ವಿರುದ್ಧದ ಯಾವುದೇ ಆಕ್ರಮಣದಲ್ಲಿ ಅಮೆರಿಕ ಭಾಗಿಯಾಗಲ್ಲ: ಬೈಡನ್​​
author img

By ETV Bharat Karnataka Team

Published : Apr 15, 2024, 7:11 AM IST

ವಾಷಿಂಗ್ಟನ್, ಅಮೆರಿಕ: ಇರಾನ್​- ಇಸ್ರೇಲ್​ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಇಸ್ರೇಲ್​ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಪ್ರತಿಕ್ರಿಯೆ ನೀಡಿದೆ. ಅಮೆರಿಕವು ಇರಾನ್​ ಮೇಲೆ ನಡೆಯುವ ಯಾವುದೇ ಆಕ್ರಮಣದಲ್ಲಿ ಭಾಗಿಯಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.

ಸಿರಿಯಾದಲ್ಲಿನ ರಾಯಭಾರ ಕಚೇರಿ ಮೇಲೆ ಇಸ್ರೇಲ್​ ನಡೆಸಿದ ದಾಳಿಯಲ್ಲಿ ಇರಾನ್​ ಮಿಲಿಟರಿಯ 7 ಉನ್ನತ ಅಧಿಕಾರಿಗಳು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಇರಾನ್​ ನಿನ್ನೆ ಇಸ್ರೇಲ್​ ಮೇಲೆ ಕ್ಷಿಪಣಿ ಹಾಗೂ ಡ್ರೋನ್​ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಆದರೆ, ಇರಾನ್​​​ನ ಎಲ್ಲ ಕ್ಷಿಪಣಿಗಳನ್ನು ಇಸ್ರೇಲ್​ ತನ್ನ ಪ್ರತಿ ರಕ್ಷಣಾ ವ್ಯವಸ್ಥೆಯಿಂದ ಆಕಾಶದಲ್ಲೇ ಹೊಡೆದುರುಳಿಸಿದೆ.

ಇರಾನ್ ದಾಳಿ ಬಳಿಕ ಇಸ್ರೇಲಿ ಪ್ರಧಾನಿ ಜತೆ ಮಾತನಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್​​​​​, ಇರಾನ್​ ಮೇಲೆ ಪ್ರತಿದಾಳಿ ಅನಗತ್ಯ ಎಂದು ಸಲಹೆ ನೀಡಿದ್ದಾರೆ. ಇರಾನ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಯಾವುದೇ ಅಪಾಯವಿಲ್ಲದೇ ಪಾರಾಗಿದ್ದರ ಹಿನ್ನೆಲೆಯಲ್ಲಿ ಇಸ್ರೇಲ್​ಗೆ ಬೈಡನ್​ ಈ ಸಲಹೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ ಬೈಡನ್​, ಇರಾನ್​ ದಾಳಿ ಹಿಮ್ಮೆಟ್ಟಿಸಿದ ಹಾಗೂ ಪ್ರತಿರಕ್ಷಣಾ ವ್ಯವಸ್ಥೆಯಿಂದ ಎಲ್ಲ ಕ್ಷಿಪಣಿಗಳನ್ನು ನಿಷ್ಕ್ರಿಯೆಗೊಳಿಸಿರುವುದರಿಂದ ಇದೊಂದು 'ಗೆಲುವು' ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ. ಏಕೆಂದರೆ ಇರಾನ್‌ನ ಬಹುತೇಕ ದಾಳಿಗಳು ಹೆಚ್ಚಾಗಿ ವಿಫಲವಾಗಿವೆ. ಇಸ್ರೇಲ್‌ ತನ್ನ ಉನ್ನತ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಬೈಡನ್​ ಹೇಳಿದ್ದಾರೆ ಎಂದು ಅಮೆರಿಕದ ಹಿರಿಯ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ಇಸ್ರೇಲ್‌ ಮೇಲೆ ಇರಾನ್​ ನಡೆಸಿದ ದಾಳಿಯಿಂದ್​ ಅಲ್​​ಅವಿವ್​ ಪಾರಾಗಿದ್ದು, ಸಣ್ಣ ಪುಟ್ಟ ಹಾನಿ ಹೊರತುಪಡಿಸಿ ಯಾವುದೇ ಅಪಾಯವಾಗಿಲ್ಲ ಎಂದು ಯುಎಸ್ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಅಮೆರಿಕದ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.

ದಾಳಿ ಸಮರ್ಥಿಸಿಕೊಂಡ ಇರಾನ್: ಇನ್ನು ಸಿರಿಯಾದಲ್ಲಿನ ತನ್ನ ದೂತಾವಾಸದ ಮೇಲಿನ ದಾಳಿಗೆ ಪ್ರತಿಯಾಗಿ ಇಸ್ರೇಲ್​ ಮೇಲೆ ಮಾಡಿದ ದಾಳಿಯನ್ನ ಇರಾನ್ ಸಮರ್ಥಿಸಿಕೊಂಡಿದೆ. ಇದೇ ವೇಳೆ, ಇಸ್ರೇಲ್​- ಇರಾನ್​ ಬಿಕ್ಕಟ್ಟಿನಲ್ಲಿ ಅಮೆರಿಕ ಮಧ್ಯಪ್ರವೇಶ ಮಾಡದಂತೆ ಇರಾನ್ ಕೇಳಿಕೊಂಡಿದೆ. ಇನ್ಮುಂದೆ ದಾಳಿ ನಡೆಸುವುದಿಲ್ಲ. ಆದರೆ, ಇಸ್ರೇಲ್​ ಮತ್ತೆ ಇರಾನ್​ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದರೆ ತಾನು ಸುಮ್ಮನಿರುವುದಿಲ್ಲ ಎಂದು ತೆಹರಾನ್​ ಇದೇ ವೇಳೆ ಎಚ್ಚರಿಕೆ ನೀಡಿದೆ.

ಏತನ್ಮಧ್ಯೆ, ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜೋಗ್, ಇರಾನ್‌ನೊಂದಿಗೆ ನಾವು ಯುದ್ಧವನ್ನು ಬಯಸುತ್ತಿಲ್ಲ ಎಂದು ಹೇಳಿದ್ದಾರೆ. "ಈ ಪರಿಸ್ಥಿತಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನ ಕಾಪಾಡಬೇಕಾದ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮ ಹೇಳಿದೆ. ಮತ್ತೊಂದು ಕಡೆ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನೇಕ ವಿಶ್ವ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ. "ನಾವು ಎಲ್ಲವನ್ನೂ ನೋಡುತ್ತಿದ್ದೇವೆ, ಶಾಂತಯಿಂದ ವರ್ತಿಸುತ್ತಿದ್ದೇವೆ" ಎಂದು ಅಧ್ಯಕ್ಷ ಹೆರ್ಜೋಗ್, ನಾವು ಇಸ್ರೇಲ್ ಜನರನ್ನು ರಕ್ಷಿಸುತ್ತೇವೆ, ಅದುವೆ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.

ಮುಂದಿನ ವಿಚಾರ ಇಸ್ರೇಲ್​​ಗೆ ಬಿಟ್ಟಿದ್ದು: ಇರಾನ್‌ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಅಂತಿಮ ನಿರ್ಧಾರವು ಇಸ್ರೇಲ್‌ಗೆ ಬಿಟ್ಟದ್ದು ಎಂದು ಅಮೆರಿಕದ ಅಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ. ಇನ್ನೊಂದೆಡೆ ಸಂಘರ್ಷ ಇನ್ನಷ್ಟು ವಿಸ್ತರಿಸದಂತೆ ಬೈಡನ್​ ಪ್ರಯತ್ನ ಮಾಡಿದ್ದಾರೆ. ಇಸ್ರೇಲ್​ ಮೇಲಿನ ಇರಾನ್​ ದಾಳಿ ಹಿನ್ನೆಲೆಯಲ್ಲಿ ಭಾನುವಾರ ಬೈಡನ್​​ ಜಿ -7 ರಾಷ್ಟ್ರ್ಳಗಳ ನಾಯಕರನ್ನು ಭೇಟಿಯಾದರು, ಯುದ್ಧದ ನಿರೀಕ್ಷೆಗಳನ್ನು ಸೀಮಿತಗೊಳಿಸುವ ಮತ್ತು ಮಿಲಿಟರಿಯೇತರ ಕ್ರಮಗಳಿಗೆ ಒತ್ತು ನೀಡುವ ಕುರಿತಂತೆ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳ ಜತೆ ಚರ್ಚೆ ನಡೆಸಿದರು.

G-7 ಸದಸ್ಯರಾಷ್ಟ್ರಗಳ ಜತೆ ಬೈಡನ್ ಮಾತುಕತೆ: ವರ್ಚುಯಲ್ ಸಭೆಯ ನಂತರ ಈ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಇಸ್ರೇಲ್ ವಿರುದ್ಧ ಇರಾನ್‌ನ "ನೇರ ದಾಳಿಯನ್ನು ಜಿ-7 ತೀವ್ರವಾಗಿ ಖಂಡಿಸಿದೆ. ಇಸ್ರೇಲ್ ಮತ್ತು ಅಲ್ಲಿನ ಜನರ ರಕ್ಷಣೆ ಬದ್ಧ ಎನ್ನುವ ಮೂಲಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈ ದಾಳಿ ಮೂಲಕ ಇರಾನ್ ಈ ಪ್ರದೇಶದ ಅಸ್ಥಿರತೆಯ ಕಡೆಗೆ ಮತ್ತಷ್ಟು ಹೆಜ್ಜೆ ಹಾಕಿದೆ. ನಿಯಂತ್ರಿಸಲಾಗದ ಉದ್ವಿಗ್ನತೆಯನ್ನು ಪ್ರಚೋದಿಸಿದೆ. ಇದನ್ನು ತಪ್ಪಿಸಬೇಕು ಎಂದು G7 ಒಕ್ಕೂಟ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಇಸ್ರೇಲ್ ಮೇಲೆ ಇರಾನ್ ದಾಳಿ: ಜಿ7 ನಾಯಕರ ಸಭೆ ಕರೆದ ಯುಎಸ್ ಅಧ್ಯಕ್ಷ ಬೈಡನ್ - Iran attacks Israel

ETV Bharat Logo

Copyright © 2024 Ushodaya Enterprises Pvt. Ltd., All Rights Reserved.