ಲಾಸ್ ಏಂಜಲೀಸ್ (ಅಮೆರಿಕ): ಸೂಪರ್ ಪವರ್ ಆಗಿರುವ ಅಮೆರಿಕದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ರಂಗೇರುತ್ತಿದೆ. ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪ್ರಚಾರವೂ ತೀವ್ರಗೊಂಡಿದೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯಸ್ಥರಾದ ಬಿಲಿಯನೇರ್ ಎಲಾನ್ ಮಸ್ಕ್ ನಡೆಸಿದ ಸಂದರ್ಶನದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು, ಡೆಮಾಕ್ರಟಿಕ್ಅಭ್ಯರ್ಥಿಗಳನ್ನು ಟೀಕಿಸುವುದರಿಂದ ಹಿಡಿದು ಅಮೆರಿಕದ ಪ್ರತಿಸ್ಪರ್ಧಿ ರಾಷ್ಟ್ರಗಳನ್ನು ಹೊಗಳುವುದರವರೆಗೆ ಹಲವು ಮಹತ್ವದ ವಿಷಯಗಳನ್ನು ಕುರಿತು ಮಾತನಾಡಿದ್ದಾರೆ.
There appears to be a massive DDOS attack on 𝕏. Working on shutting it down.
— Elon Musk (@elonmusk) August 13, 2024
Worst case, we will proceed with a smaller number of live listeners and post the conversation later.
ಡೊನಾಲ್ಡ್ ಟ್ರಂಪ್ ಸಂದರ್ಶನದ ಆಯ್ದ ಭಾಗ: "ಇತ್ತೀಚೆಗೆ ನಾನು ಬೈಡನ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಇದು ನನ್ನ ಶ್ರೇಷ್ಠ ಚರ್ಚೆಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ. ಆ ಚರ್ಚೆಯಲ್ಲಿ ಅವರು ಹೀನಾಯವಾಗಿ ಸೋತಿದ್ದರು. ಪರಿಣಾಮವಾಗಿ, ಅವರನ್ನು ಅಧ್ಯಕ್ಷೀಯ ರೇಸ್‌ನಿಂದ ಹೊರಹಾಕಲಾಯಿತು. ತಮ್ಮ ಪಕ್ಷದಲ್ಲಿನ ಬಂಡಾಯದಿಂದಾಗಿ ಬೈಡನ್ ಕೆಳಗಿಳಿಯಬೇಕಾಯಿತು" ಎಂದು ಟ್ರಂಪ್ ಟೀಕಿಸಿದರು.
ಪುಟಿನ್, ಕ್ಸಿ ಜಿನ್‌ಪಿಂಗ್, ಕಿಮ್ ದೇಶವನ್ನು ತುಂಬಾ ಪ್ರೀತಿಸುತ್ತಾರೆ: "ವ್ಲಾಡಿಮಿರ್ ಪುಟಿನ್ (ರಷ್ಯಾದ ಅಧ್ಯಕ್ಷ), ಕ್ಸಿ ಜಿನ್‌ಪಿಂಗ್ (ಚೀನಾ ಅಧ್ಯಕ್ಷ), ಕಿಮ್ ಜಾಂಗ್ ಉನ್ (ಉತ್ತರ ಕೊರಿಯಾದ ಅಧ್ಯಕ್ಷ) ತಮ್ಮ ತಮ್ಮ ದೇಶಗಳ ಪರ ಚೆನ್ನಾಗಿ ಆಟ ಆಡುತ್ತಿದ್ದು, ಅವರು ಅಗ್ರಸ್ಥಾನದಲ್ಲಿದ್ದಾರೆ. ಅವರೆಲ್ಲರೂ ತಮ್ಮ ದೇಶಗಳನ್ನು ತುಂಬಾ ಪ್ರೀತಿಸುತ್ತಾರೆ. ಆದರೆ, ಅವರದು ಬೇರೆ ರೀತಿಯ ಪ್ರೀತಿ. ಅವರನ್ನು ಎದುರಿಸಲು ಅಮೆರಿಕಕ್ಕೆ ಬಲಿಷ್ಠ ಅಧ್ಯಕ್ಷರ ಅಗತ್ಯವಿದೆ. ಬೈಡನ್ ಅಧ್ಯಕ್ಷರಾಗಿರದಿದ್ದರೆ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುತ್ತಿರಲಿಲ್ಲ. ಪುಟಿನ್ ಜೊತೆ ಹಲವು ಬಾರಿ ಮಾತನಾಡಿದೆ. ಅವರು ನನ್ನನ್ನು ತುಂಬಾ ಗೌರವಿಸುತ್ತಾರೆ. ನಾವು ಉಕ್ರೇನ್ ಬಗ್ಗೆಯೂ ಚರ್ಚಿಸಿದ್ದೇವೆ'' ಎಂದು ಟ್ರಂಪ್ ಹೇಳಿದರು.
We tested the system with 8 million concurrent listeners earlier today https://t.co/ymqGBFEJX0
— Elon Musk (@elonmusk) August 13, 2024
ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ: ಈ ಸಂದರ್ಭದಲ್ಲಿ ಡೆಮಾಕ್ರಟಿಕ್ ಪಕ್ಷದ ಪರವಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದರು. ''ನಮಗೆ ಈಗ ಅಧ್ಯಕ್ಷರೇ ಇಲ್ಲದಂತಾಗಿದೆ. ಕಮಲಾ ಹ್ಯಾರಿಸ್ ಬಂದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಅವರು ಗೆದ್ದರೆ ನಮ್ಮ ದೇಶವನ್ನು ನಾಶ ಮಾಡುತ್ತಾರೆ. ಅವರು ಅಧಿಕಾರಕ್ಕೆ ಬಂದರೆ, 50 ರಿಂದ 60 ಮಿಲಿಯನ್ ಅಕ್ರಮ ವಲಸಿಗರು ದೇಶವನ್ನು ಪ್ರವೇಶಿಸುತ್ತಾರೆ. ಅವರೆಲ್ಲ ಉಗ್ರಗಾಮಿ ಸಿದ್ಧಾಂತ ಹೊಂದಿದ್ದಾರೆ. ಅಪರಾಧ ಎಸಗುವ ಸಾಧ್ಯತೆ ಇದೆ'' ಎಂದು ಆತಂಕ ವ್ಯಕ್ತಪಡಿಸಿದರು. ತಾವು ಅಧಿಕಾರಕ್ಕೆ ಬಂದರೆ ವಲಸೆ ಕಾನೂನುಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಟ್ರಂಪ್ ಈ ಸಂದರ್ಭದಲ್ಲಿ ತಿಳಿಸಿದರು. ಇತಿಹಾಸದಲ್ಲಿ ಎಂದೂ ಕಾಣದ ಗಡಿಪಾರು ಪ್ರಕ್ರಿಯೆ ನಡೆಸುವುದಾಗಿ ಭರವಸೆ ನೀಡಿದರು. ಅಮೆರಿಕನ್ನರ ಕನಸುಗಳನ್ನು ನನಸು ಮಾಡಿ ಉದ್ಯೋಗ ಸೃಷ್ಟಿಸುವುದಾಗಿ ಅಭಯ ನೀಡಿದರು.
We will proceed with the smaller number of concurrent listeners at 8:30 ET and then post the unedited audio immediately thereafter https://t.co/oxF8PsNHnZ
— Elon Musk (@elonmusk) August 13, 2024
ಗುಂಡಿನ ದಾಳಿ ಬಗ್ಗೆ ಪ್ರಸ್ತಾಪ: ಅಮೆರಿಕದ ಮಾಜಿ ಅಧ್ಯಕ್ಷರು ಇತ್ತೀಚೆಗೆ ಪೆನ್ಸಿಲ್ವೇನಿಯಾದಲ್ಲಿ ನಡೆದ ಗುಂಡಿನ ದಾಳಿಯ ಘಟನೆಯನ್ನು ಪ್ರಸ್ತಾಪಿಸಿದರು. ''ಒಂದು ಕ್ಷಣದಲ್ಲಿ ಅದು ಬುಲೆಟ್ ಬಂದು ನನ್ನ ಕಿವಿಗೆ ಬಿತ್ತು. ಆ ಕ್ಷಣದಲ್ಲಿ ನಾನು ತಲೆ ತಿರುಗಿದ ಕಾರಣ ಮಾತ್ರ ನಾನು ಬದುಕುಳಿದೆ. ವಿಧಿ ಎಂದರೆ ಇದೇ.. ಆ ಘಟನೆಯ ನಂತರ ನಾನು ದೇವರನ್ನು ಹೆಚ್ಚು ನಂಬುತ್ತಿದ್ದೇನೆ" ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
3ನೇ ವಿಶ್ವ ಯುದ್ಧ : ''ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿಯು ಮೂರನೇ ಮಹಾಯುದ್ಧವಾಗಿ ಉಲ್ಬಣಗೊಳ್ಳಬಹುದು'' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. "ನಾನು ಅಧಿಕಾರದಲ್ಲಿದ್ದರೆ ಇಸ್ರೇಲ್ ಮೇಲೆ ದಾಳಿ ನಡೆಯುತ್ತಿರಲಿಲ್ಲ. ಎಲ್ಲರೂ ಇಸ್ರೇಲ್ ಮೇಲೆ ಇರಾನ್ ದಾಳಿಯನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ, ಇರಾನಿಯನ್ನರು ದಾಳಿ ಮಾಡುವುದಿಲ್ಲ. ನಾನು ಅಧಿಕಾರದಲ್ಲಿ ಇದ್ದಿದ್ದರೆ ಉಕ್ರೇನ್ ಯುದ್ಧವನ್ನು ನಿಲ್ಲಿಸುತ್ತಿದ್ದೆ. ಯಾವುದೇ ಬುದ್ಧಿವಂತ ಅಧ್ಯಕ್ಷರು ಇದ್ದರೂ ಈ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತಿತ್ತು" ಎಂದು ಟ್ರಂಪ್ ಹೇಳಿದರು.
ಸಂದರ್ಶನದ ಮೇಲೆ ಸೈಬರ್ ದಾಳಿ, 2.7 ಕೋಟಿ ಪ್ರೇಕ್ಷಕರು: ಇದೇ ವೇಳೆ 'ಎಕ್ಸ್'ನಲ್ಲಿ ಪ್ರಸಾರವಾದ ಈ ನೇರ ಸಂದರ್ಶನಕ್ಕೆ ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ''ಟ್ರಂಪ್ ಅವರ 'ಎಕ್ಸ್' ಸಂದರ್ಶನದ ಮೇಲೆ ಸೈಬರ್ ದಾಳಿ ನಡೆದಿದೆ. ಎಕ್ಸ್ ಮೇಲೆ ಭಾರಿ ಡಿಡಿಒಎಸ್ ದಾಳಿ ನಡೆದಿರುವಂತೆ ತೋರುತ್ತಿದೆ. ಸಂದರ್ಶನಕ್ಕೆ ಅಡಿಪಡಿಸುವ ಕೆಲಸ ಮಾಡಲಾಗಿದೆ" ಎಂದು ವಿಶ್ವದ ಶ್ರೀಮಂತ ವ್ಯಕ್ತಿ ಎಕ್ಸ್ನಲ್ಲಿ ಬರೆದಿದ್ದಾರೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಇದು 40 ನಿಮಿಷ ತಡವಾಗಿ ಆರಂಭವಾಯಿತು. ಅದರ ನಂತರವೂ ಅನೇಕ ಬಳಕೆದಾರರಿಗೆ ಸಂದರ್ಶನದ ಆಡಿಯೋವನ್ನು ಕೇಳಲಾಗಲಿಲ್ಲ. ಡಿಡಿಒಎಸ್ ದಾಳಿಯೇ ಇದಕ್ಕೆ ಕಾರಣ ಎಂದು ಮಸ್ಕ್ ಹೇಳಿದ್ದಾರೆ. ಅವರ ಮಾತುಗಳನ್ನು 2.7 ಕೋಟಿ ಜನರು ಆಲಿಸಿದ್ದಾರೆ.
Live conversation on 𝕏 with @realDonaldTrump & me at 8pm ET tomorrow
— Elon Musk (@elonmusk) August 12, 2024
ಮತ್ತೆ 'ಎಕ್ಸ್'ನಲ್ಲಿ ಟ್ರಂಪ್: ಈ ಸಂದರ್ಶನದೊಂದಿಗೆ ಮಾಜಿ ಅಧ್ಯಕ್ಷರು ಮತ್ತೆ ಸಾಮಾಜಿಕ ಮಾಧ್ಯಮ 'ಎಕ್ಸ್'ಗೆ ಪ್ರವೇಶಿಸಿದರು. 25 ಆಗಸ್ಟ್ 2023 ರಂದು ಕೊನೆಯ ಬಾರಿಗೆ ಪೋಸ್ಟ್ ಮಾಡಿದ ಟ್ರಂಪ್, ಮಸ್ಕ್ ಅವರೊಂದಿಗಿನ ಸಂಭಾಷಣೆಯ ಹಿನ್ನೆಲೆಯಲ್ಲಿ ಮತ್ತೆ ಸತತ ಪೋಸ್ಟ್‌ಗಳನ್ನು ಮಾಡಿದ್ದರು. ರಾಜಧಾನಿ ಕಟ್ಟಡದ ಮೇಲೆ ದಾಳಿಗೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ಅವರನ್ನು ಎಕ್ಸ್ನಿಂದ (ಹಿಂದಿನ ಟ್ವಿಟ್ಟರ್) ನಿಷೇಧಿಸಲಾಗಿತ್ತು. ಮಸ್ಕ್ ಈ ಮಾಧ್ಯಮವನ್ನು ಖರೀದಿಸಿದ ನಂತರ ಟ್ರಂಪ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು.
ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ನಮ್ಮ ಮೇಲೆ ಇರಾನ್, ಹಿಜ್ಬುಲ್ಲಾ ಜಂಟಿ ದಾಳಿ ಸಾಧ್ಯತೆ: ಇಸ್ರೇಲ್ ಹೇಳಿಕೆ - Israel Iran War