ETV Bharat / international

ಅಬುಧಾಬಿ ಹಿಂದು ಮಂದಿರ: ಸಪ್ತ ದೇವರುಗಳ ದೇಗುಲ, ಅರೇಬಿಯನ್​ ಸಂಸ್ಕೃತಿಯೂ ಅನಾವರಣ - ಅಬುಧಾಬಿ ಹಿಂದು ದೇಗುಲ

ಅಬುಧಾಬಿಯಲ್ಲಿ ಇಂದು ಉದ್ಘಾಟನೆಗೊಳ್ಳಲಿರುವ ಮೊದಲ ಹಿಂದು ದೇಗುಲ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಅಬುಧಾಬಿ ಹಿಂದು ಮಂದಿರ
ಅಬುಧಾಬಿ ಹಿಂದು ಮಂದಿರ
author img

By ETV Bharat Karnataka Team

Published : Feb 14, 2024, 1:31 PM IST

Updated : Feb 14, 2024, 6:32 PM IST

ಅಬುಧಾಬಿ (ಯುಎಇ): ಮುಸ್ಲಿಂ ಬಾಹುಳ್ಯದ ಅರಬ್​ ಸಂಯುಕ್ತ ರಾಷ್ಟ್ರ(ಯುಎಇ)ದ ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಭವ್ಯ ಹಿಂದು ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಲಿದ್ದಾರೆ. ಬಾಪ್ಸ್​ ಸಂಸ್ಥೆಯು ದೇಗುಲ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡಿತ್ತು.

ಇಂದು ಲೋಕಾರ್ಪಣೆಗೊಳ್ಳಲಿರುವ ಹಿಂದು ದೇಗುಲವು ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ವಲಸಿಗ ಸಮುದಾಯದ ವಿಭಿನ್ನ ನಂಬಿಕೆಗಳನ್ನು ಹೇಗೆ ಸ್ವೀಕರಿಸಿದೆ ಎಂಬುದನ್ನು ತೋರಿಸುತ್ತದೆ. ಜೊತೆಗೆ ಇದು ಭಾವೈಕ್ಯತೆಯ ಪ್ರತೀಕದ ನೆಲೆಯಾಗಲಿದೆ.

ಹಿಂದೂ ದೇವಾಲಯದ ಬಗ್ಗೆ ಸಂಪೂರ್ಣ ಮಾಹಿತಿ

  • ಬಾಪ್ಸ್​ ಸಂಸ್ಥೆಯು ವೇದಗಳ ಆಧಾರದ ಮೇಲಿನ ಸಾಮಾಜಿಕ-ಆಧ್ಯಾತ್ಮಿಕ, ಹಿಂದೂ ನಂಬಿಕೆಯಾಗಿದೆ. ಇದನ್ನು ಹದಿನೆಂಟನೇ ಶತಮಾನದಲ್ಲಿ ಭಗವಾನ್ ಸ್ವಾಮಿನಾರಾಯಣ್ (1781-1830) ಸ್ಥಾಪಿಸಿದರು. 1907 ರಲ್ಲಿ ಶಾಸ್ತ್ರೀಜಿ ಮಹಾರಾಜ್ (1865-1951) ಔಪಚಾರಿಕವಾಗಿ ಮರು ಸ್ಥಾಪಿಸಿದರು.
  • BAPS ಪ್ರಾಯೋಗಿಕ ಆಧ್ಯಾತ್ಮಿಕತೆಯನ್ನು ಆಧರಿಸಿದೆ. ಜಗತ್ತಿನಲ್ಲಿ ಆಧ್ಯಾತ್ಮಿಕ, ನೈತಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. BAPS ಸಂಸ್ಥೆಯು ವಿಶ್ವದಾದ್ಯಂತ 3,850 ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ.
  • 2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ಈ ಯೋಜನೆಯನ್ನು ರೂಪಿಸಲಾಗಿತ್ತು. 2015ರಲ್ಲಿ ಅವರು ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಿಂದು ದೇಗುಲ ನಿರ್ಮಾಣ ಪ್ರಸ್ತಾಪಿಸಿದ್ದರು. ಬಳಿಕ ಮುಸ್ಲಿಂ ಸರ್ಕಾರ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿತ್ತು.
  • ಯುಎಇ ಸರ್ಕಾರವು BAPS ಮಂದಿರಕ್ಕೆ ಮೊದಲು 13.5 ಎಕರೆ ಭೂಮಿಯನ್ನು ಒದಗಿಸಲು ಆದೇಶಿಸಿತು. 2019 ರಲ್ಲಿ ಹೆಚ್ಚುವರಿಯಾಗಿ 13.5 ಎಕರೆಗಳನ್ನು ಮಂಜೂರು ಮಾಡಿತು. ಒಟ್ಟು 27 ಎಕರೆಯಷ್ಟು ಭೂಮಿಯನ್ನು ಸರ್ಕಾರ ನೀಡಿತು.
  • 2018 ರಲ್ಲಿ ಅರೇಬಿಯನ್ ರಾಷ್ಟ್ರಕ್ಕೆ ತಮ್ಮ 2ನೇ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಅಡಿಪಾಯ ಹಾಕಿದರು. 2019 ರ ಏಪ್ರಿಲ್‌ನಲ್ಲಿ ಶಿಲಾನ್ಯಾಸ ಮಾಡಿದರು. ಮಂದಿರದ ನಿರ್ಮಾಣವು ಡಿಸೆಂಬರ್​ನಲ್ಲಿ ಪ್ರಾರಂಭವಾಯಿತು.
  • 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ದೇವಾಲಯವು ಪಶ್ಚಿಮ ಏಷ್ಯಾದ ಅತಿದೊಡ್ಡ ಹಿಂದೂ ಮಂದಿರವಾಗಿದೆ. ಅದ್ಭುತವಾದ ವಾಸ್ತುಶಿಲ್ಪ ಹೊಂದಿದ್ದು, 3 ಸಾವಿರ ಜನರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸುವ ಮಂದಿರ, ಸಮುದಾಯ ಕೇಂದ್ರ, ಪ್ರದರ್ಶನ ಸಭಾಂಗಣವನ್ನು ಹೊಂದಿದೆ.
  • ದೇವಾಲಯವು 32.92 ಮೀಟರ್ ಎತ್ತರ (108 ಅಡಿ), 79.86 ಮೀಟರ್ ಉದ್ದ (262 ಅಡಿ), ಮತ್ತು 54.86 ಮೀಟರ್ ಅಗಲ (180 ಅಡಿ) ಹೊಂದಿದೆ. ಭಾರತೀಯ ಕುಶಲಕರ್ಮಿಗಳಿಂದ ನಿರ್ಮಿಸಲಾಗಿದೆ. ದೇವಾಲಯವು ಸುಮಾರು 55,000 ಚದರ್​ ಮೀಟರ್​ಗಳಷ್ಟು ಭೂ ವಿಸ್ತ್ರೀರ್ಣ ಹೊಂದಿದೆ.
  • ಇದನ್ನು 1.80 ಲಕ್ಷ ಚದರ್​ ಮೀಟರ್ (50,000 ಘನ ಅಡಿ) ರಾಜಸ್ಥಾನದ ಮರಳುಗಲ್ಲು, 1.50 ಲಕ್ಷ ಚದರ್​ ಮೀಟರ್ (18,000 ಚದರ್​ ಅಡಿ) ಇಟಾಲಿಯನ್ ಮಾರ್ಬಲ್ ಮತ್ತು 18,000 ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ.
  • ಪಿಂಕ್​ ಮರಳುಗಲ್ಲು ಮತ್ತು ಬಿಳಿ ಇಟಾಲಿಯನ್ ಮಾರ್ಬಲ್ ಕಲ್ಲುಗಳನ್ನು ಭಾರತದಲ್ಲಿ ಕೆತ್ತಲಾಗಿದೆ. ಅವನ್ನು ಯುಎಇಗೆ ತಂದು ದೇಗುಲ ನಿರ್ಮಿಸಲಾಗಿದೆ. 402 ಬಿಳಿ ಅಮೃತಶಿಲೆಯ ಕಂಬಗಳನ್ನು ರಾಜಸ್ಥಾನ ಮತ್ತು ಗುಜರಾತ್‌ನ 2 ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ಕೆತ್ತಿದ್ದಾರೆ. ವಿನ್ಯಾಸವು ವೈದಿಕ ವಾಸ್ತುಶಿಲ್ಪಕಲೆಯನ್ನು ಆಧರಿಸಿದೆ.
  • ಶಿವನಿಗೆ ಸಮರ್ಪಿತವಾಗಿರುವ ದೇವಾಲಯವು ಶಿವ ಪುರಾಣದ ಶ್ಲೋಕಗಳನ್ನು ಅರುಹುತ್ತದೆ. 12 ಜ್ಯೋತಿರ್ಲಿಂಗ ಕ್ಷೇತ್ರಗಳು ಇಲ್ಲಿವೆ. ಕೃಷ್ಣ ದೇಗುಲದ 'ಜಗನ್ನಾಥ ಯಾತ್ರೆ'ಯ ಆಚರಣೆಯನ್ನು ಇಲ್ಲಿ ತೋರಿಸಲಾಗಿದೆ. ಭಗವದ್ಗೀತೆ ಮತ್ತು ಮಹಾಭಾರತದ ಕಥೆಗಳನ್ನು ಚಿತ್ರಿಸಲಾಗಿದೆ.
  • ಅಯೋಧ್ಯೆಯ ರಾಮಮಂದಿರದಂತೆಯೇ ಈ ದೇವಾಲಯವನ್ನು ಕಬ್ಬಿಣ ಮತ್ತು ಉಕ್ಕನ್ನು ಬಳಸದೆ ನಿರ್ಮಿಸಲಾಗಿದೆ. ಜೊತೆಗೆ ಅರೇಬಿಯನ್, ಚೈನೀಸ್, ಅಜ್ಟೆಕ್ ಮತ್ತು ಮೆಸಪೊಟೋಮಿಯಾ ನಾಗರಿಕತೆಯ ಕಾಲಘಟ್ಟವನ್ನೂ ಇದು ವಿವರಿಸುತ್ತದೆ.
  • ರಾಮ, ಹನುಮಾನ್, ಶಿವ, ಜಗನ್ನಾಥ, ಕೃಷ್ಣ, ಅಷ್ಕರ್ ಪುರುಷೋತ್ತಮ ಮಹಾರಾಜ್, ತಿರುಪತಿ ತಿಮ್ಮಪ್ಪ ಮತ್ತು ಅಯ್ಯಪ್ಪಸ್ವಾಮಿ ದೇಗುಲಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಇದು ದೇಗುಲಗಳ ಸಂಕೀರ್ಣವಾಗಿದೆ.

ಇದನ್ನೂ ಓದಿ: ಅಬುಧಾಬಿಯಲ್ಲಿ ಹಿಂದೂ ದೇಗುಲ ಉದ್ಘಾಟನೆಗೆ ಫೆ.13, 14ರಂದು ಪ್ರಧಾನಿ ಮೋದಿ ಯುಎಇ ಭೇಟಿ

Last Updated : Feb 14, 2024, 6:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.