ETV Bharat / international

ಪಪುವಾ ನ್ಯೂಗಿನಿ ಭೂಕುಸಿತ: ಕನಿಷ್ಠ 2,000 ಜನರು ಜೀವಂತ ಸಮಾಧಿ! - Papua New Guinea Landslide - PAPUA NEW GUINEA LANDSLIDE

ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಕನಿಷ್ಠ 2,000 ಜನರು ನೆಲಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂ ಗಿನಿಯಾದ ರಾಷ್ಟ್ರೀಯ ವಿಪತ್ತು ಕೇಂದ್ರ ತಿಳಿಸಿದೆ.

ಭೂಕುಸಿತ ಸಂಭವಿಸಿದ ಸ್ಥಳ
ಭೂಕುಸಿತ ಸಂಭವಿಸಿದ ಸ್ಥಳ (AP)
author img

By ETV Bharat Karnataka Team

Published : May 28, 2024, 11:55 AM IST

ಪಪುವಾ ನ್ಯೂಗಿನಿ: ಪಪುವಾ ನ್ಯೂ ಗಿನಿಯಾದಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಪ್ರಮಾಣದ ಭೂಕುಸಿತದಲ್ಲಿ ಕನಿಷ್ಠ 2,000 ಜನರು ಜೀವಂತ ಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂ ಗಿನಿಯಾದ ರಾಷ್ಟ್ರೀಯ ವಿಪತ್ತು ಕೇಂದ್ರದ ವರದಿ ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಇದುವರೆಗೆ ಕೇವಲ ಆರು ಮಂದಿಯ ಅವಶೇಷಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಉಪಗ್ರಹದಿಂದ ತೆಗೆದಿರುವ ಚಿತ್ರ
ಉಪಗ್ರಹದಿಂದ ತೆಗೆದಿರುವ ಘಟನಾ ಸ್ಥಳದ ಚಿತ್ರ (AP)

ಘಟನೆಯಲ್ಲಿ ಬದುಕುಳಿದವರ ರಕ್ಷಣೆಗೆ ಹರಸಾಹಸವೇ ನಡೆಯುತ್ತಿದೆ. ಪಪುವಾ ನ್ಯೂ ಗಿನಿಯಾದ ಉತ್ತರ ಭಾಗದಲ್ಲಿರುವ ಪರ್ವತ ಪ್ರದೇಶ ಎಂಗಾ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಮೊದಲು 100 ಜನರು ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಆ ಬಳಿಕ ಸಾವಿನ ಸಂಖ್ಯೆಯನ್ನು 670 ಎಂದು ಅಂದಾಜಿಸಲಾಗಿತ್ತು. ಇದೀಗ ಈ ಸಂಖ್ಯೆ 2,000 ತಲುಪಿದೆ.

"ಭೂಕುಸಿತ ಕನಿಷ್ಠ 2,000 ಜನರನ್ನು ಜೀವಂತವಾಗಿ ಸಮಾಧಿ ಮಾಡಿದೆ. ಅನೇಕ ಕಟ್ಟಡಗಳು, ಕೃಷಿ ಭೂಮಿಗಳು ನಾಶಗೊಂಡಿವೆ. ದೇಶದ ಆರ್ಥಿಕ ಜೀವನಾಧಾರದ ಮೇಲೆ ಪ್ರಾಕೃತಿಕ ವಿಕೋಪ ದೊಡ್ಡ ಪರಿಣಾಮ ಬೀರಿದೆ" ಎಂದು ರಾಷ್ಟ್ರೀಯ ವಿಪತ್ತು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಲುಸೆಟೆ ಲಾಸೊ ಮನ ಅವರು ಯುಎನ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಭೂಕುಸಿತ ಸಂಭವಿಸಿದ ಸ್ಥಳ
ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ (AP)

ಭೂಕುಸಿತ ಸಂಭವಿಸಿದ ಜಾಗ ರಾಜಧಾನಿ ಪೋರ್ಟ್ ಮೊರೆಸ್ಬಿಯ ವಾಯುವ್ಯಕ್ಕೆ ಸುಮಾರು 600 ಕಿಲೋಮೀಟರ್ (372 ಮೈಲುಗಳು) ದೂರದಲ್ಲಿರುವ ಕಾಕಲಂ ಎಂಬ ಹಳ್ಳಿಯಲ್ಲಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಲುಸೆಟೆ ಮಾಹಿತಿ ನೀಡಿದ್ದಾರೆ.

ಭೂಕುಸಿತ ಸಂಭವಿಸಿದ ಸ್ಥಳ
ರಕ್ಷಣಾ ಕಾರ್ಯಾಚರಣೆಯ ಚಿತ್ರ (AP)

ಪಪುವಾ ನ್ಯೂ ಗಿನಿಯಾ ಅಂದಾಜು 10 ಮಿಲಿಯನ್ ಜನರಿರುವ ಪುಟ್ಟ ದೇಶ. ಸದ್ಯ ನಡೆದಿರುವ ಭೂಕುಸಿತಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಅಡಿಲೇಡ್ ವಿಶ್ವವಿದ್ಯಾನಿಲಯದ ಭೂವಿಜ್ಞಾನ ಪ್ರಾಧ್ಯಾಪಕ ಅಲನ್ ಕಾಲಿನ್ಸ್ ಅವರು, ಇದು ಅಧಿಕ ಮಳೆಯಾಗುವ ಪ್ರದೇಶದಲ್ಲಿ ಸಂಭವಿಸಿದೆ. ಭೂಕಂಪದಿಂದ ನೇರವಾಗಿ ಪ್ರಚೋದಿಸಲ್ಪಟ್ಟಂತೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಪುವಾ ನ್ಯೂ ಗಿನಿಯಾ ಭೂಕುಸಿತದಲ್ಲಿ ಮೃತರ ಸಂಖ್ಯೆ 670ಕ್ಕೆ ಏರಿಕೆ - Papua New Guinea landslide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.